ಇಬ್ಬರು ಸ್ಟಾರ್ ಕ್ರಿಕೆಟಿಗರ ಬಂಧನ, ಗರಂ ಆದ ರಶ್ಮಿಕಾ ಮಂದಣ್ಣ; ನ.07ರ ಟಾಪ್ 10 ಸುದ್ದಿ!
ಕ್ರಿಕೆಟ್‌ನಲ್ಲಿ ಕಳ್ಳಾಟ ಮತ್ತೆ ಸ್ಫೋಟಗೊಂಡಿದೆ. ಕೆಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಸಿದ ಆರೋಪದ ಮೇಲೆ ಇಬ್ಬರು ಸ್ಟಾರ್ ಕ್ರಿಕೆಟಿಗರು ಅರೆಸ್ಟ್ ಆಗಿದ್ದಾರೆ. ಟ್ರೋಲ್ ಮಾಡಿದವರಿಗೆ ನಟಿ ರಶ್ಮಿಕಾ ಮಂದಣ್ಣ ಸರಿಯಾಗಿ ತಿರುಗೇಟು ನೀಡಿದ್ದಾರೆ. ಈ ಬಾರಿ ರಶ್ಮಿಕಾ ಬೆಂಬಲಕ್ಕೆ ಚಿತ್ರರಂಗವೇ ನಿಂತುಕೊಂಡಿದೆ. ಕರ್ನಾಟಕ ಸರ್ಕಾರದ ಕಾರ್ಯವನ್ನು ಹೊಗಳಿದೆ ಪ್ರಧಾನಿ ಮೋದಿ, ಜೋಮ್ಯಾಟೋ ಡೆಲಿವರಿ ಬಾಯ್ ಪುಂಡಾಟ ಸೇರಿದಂತೆ ನ.07ರಂದು ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.
1) ಜೊಮ್ಯಾಟೋ ಡೆಲಿವರಿ ಬಾಯ್ಸ್ ಪುಂಡಾಟ; ಆರ್ಡರ್ ಲೇಟ್ ಕೊಟ್ಟದ್ದಕ್ಕೆ ಅಟ್ಟಾಡಿಸಿ ಹಲ್ಲೆ
ಬೆಂಗಳೂರಿನಲ್ಲಿ ಜೊಮ್ಯಾಟೋ ಡೆಲಿವರಿ ಬಾಯ್ಸ್ ಪುಂಡಾಟ ನಡೆಸಿದ್ದಾರೆ. ಹೋಟೆಲ್ ಸಿಬ್ಬಂದಿಯನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ್ದು, ಘಟನೆ CCTVಯಲ್ಲಿ ಸೆರೆಯಾಗಿದೆ. ಆರ್ಡರ್ ಲೇಟ್ ಕೊಟ್ಟದ್ದಕ್ಕೆ ಜೊಮ್ಯಾಟೋ ಡೆಲಿವರಿ ಬಾಯ್ಸ್ ಹೆಬ್ಬಾಳದಲ್ಲಿರುವ ಹೋಟೆಲ್‌ನ ಮಹಿಳಾ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. ಅಲ್ಲದೇ ಪುರುಷ ಸಿಬ್ಬಂದಿಯನ್ನು ಥಳಿಸಿದ್ದು, ಇಡೀ ಘಟನೆ CCTVಯಲ್ಲಿ ದಾಖಲಾಗಿದೆ.
2) ಕರ್ನಾಟಕ ಸರ್ಕಾರವನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿ
ಪ್ರಗತಿ ಸಭೆಯಲ್ಲಿ ಮೋದಿ ಅವರು, ನವೀಕರೀಸಬಹುದಾದ ಇಂಧನ ಪ್ರಸರಣ ವನ್ನು ಬಲಪಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಗ್ರಿಡ್ ನಿರ್ಮಾಣ ಯೋಜ ನೆಯಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಮಾಡಿರುವ ಪ್ರಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
3) ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಬಾಂಗ್ಲಾ ಅಕ್ರಮ ವಲಸಿಗ ಮಹಿಳೆ ಅರೆಸ್ಟ್
ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿರುವ ಸಂದರ್ಭದಲ್ಲೇ ಅಕ್ರಮ ಬಾಂಗ್ಲಾ ವಲಸಿಗ ಮಹಿಳೆಯೊಬ್ಬರ ಬಂಧನವಾಗಿರುವ ಬಗ್ಗೆ ಜಿಲ್ಲೆಯ ಬಂಗಾರಪೇಟೆಯಿಂದ ವರದಿಯಾಗಿದೆ. ಮನೆಯೊಂದರಲ್ಲಿ ನೆಲೆಸಿದ್ದ ಶಿಲ್ಪಿ ಅಕ್ತಾರ್ ಪಾರಿಯಾ ರುಬೀಯಾ ಬಂಧಿತ ಮಹಿಳೆ.
4) ಸಿಎಂ ಭೇಟಿಗೆ ಬರುವವರು ಮೊಬೈಲ್ ತರುವಂತಿಲ್ಲ
ಇತ್ತೀಚಿನ ಹುಬ್ಬಳ್ಳಿಯ ಬಿಜೆಪಿ ಸಭೆಯಲ್ಲಿನ ಆಡಿಯೋ ಬಹಿರಂಗ ಪ್ರಕರಣದ ಹಿನ್ನೆಲೆಯಲ್ಲಿ ಜಾಗೃತರಾಗಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮನ್ನು ಭೇಟಿ ಮಾಡಲು ಕಚೇರಿ ಮತ್ತು ನಿವಾಸಕ್ಕೆ ಬರುವವರು ಮೊಬೈಲ್ ತರುವುದನ್ನು ನಿರ್ಬಂಧಿಸಿದ್ದಾರೆ.
5) KPL ಮ್ಯಾಚ್ ಫಿಕ್ಸಿಂಗ್: RCB ಮಾಜಿ ಕ್ರಿಕೆಟಿಗ ಸೇರಿ ಇಬ್ಬರು ಸ್ಟಾರ್ ಆಟಗಾರರು ಅರೆಸ್ಟ್..!
ಕೆಪಿಎಲ್ ಟೂರ್ನಿ ಮ್ಯಾಚ್ ಫಿಕ್ಸಿಂಗ್ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಬೆಂಗಳೂರಿನ ಸಿಸಿಬಿ ಪೊಲೀಸರು ಗೌತಮ್ ಹಾಗೂ ಖಾಜಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 2019ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗೌತಮ್ ನೇತೃತ್ವದ ಬಳ್ಳಾರಿ ಟಸ್ಕರ್ಸ್ ಹಾಗೂ ಹುಬ್ಬಳ್ಳಿ ಟೈಗರ್ಸ್ ತಂಡಗಳು ಫೈನಲ್ ಪ್ರವೇಶಿಸಿದ್ದವು. ವಿನಯ್ ನೇತೃತ್ವದ ಹುಬ್ಬಳ್ಳಿ ತಂಡ 8 ರನ್’ಗಳಿಂದ ಜಯ ಸಾಧಿಸಿತ್ತು.
6) ಲಿಟಲ್ ರಶ್ಮಿಕಾ ಫೋಟೋಗೆ ಕೆಟ್ಟ ಬಿರುದು; ಟಾರ್ಗೆಟ್ ಮಾಡಿದ್ದಕ್ಕೆ ಕಿರಿಕ್ ಹುಡ್ಗಿ ಗರಂ!
ದಿನೇ ದಿನೇ ಟ್ರೋಲಿಗರಿಗೆ ಆಹಾರವಾಗಿರುವ ರಶ್ಮಿಕಾ ಮಂದಣ್ಣ ಬಾಲ್ಯದ ಫೋಟೋಗೆ ಬಂದ ಕೆಟ್ಟ ಕಾಮೆಂಟ್‌ಗೆ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕ್ಲಾಸ್ ತೆಗೆದುಕೊಂಡಿದ್ದಾರೆ. ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ಯಾರಿಗೂ ಅರ್ಹತೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.
7) ಈಡೇರದ ಭರವಸೆ : ಬಿಜೆಪಿಗೆ ಕೊಟ್ಟ ಬೆಂಬಲ ವಾಪಸ್ ಪಡೆದ ಮುಖಂಡೆ
ಕರಾರಿನಂತೆ ಗ್ರಾಪಂ ಅಧ್ಯಕ್ಷ ಸ್ಥಾನವನ್ನು ನೀಡದೆ ಸಬೂಬು ಹೇಳುವ ಬಿಜೆಪಿ ಮುಖಂಡರ ವರ್ತನೆಗೆ ಬೇಸತ್ತು ಸಾಲೂರು ಗ್ರಾಪಂನಲ್ಲಿ ಬಿಜೆಪಿ ಅಧಿಕಾರಗಳಿಸಲು ನೀಡಿದ ಬೆಂಬಲವನ್ನು ವಾಪಸ್ ಪಡೆಯುತ್ತಿರುವುದಾಗಿ ಸಾಲೂರು ಗ್ರಾಪಂ ಸದಸ್ಯೆ ರೇಣುಕಮ್ಮ ಪರಸಪ್ಪ ಸ್ಪಷ್ಟಪಡಿಸಿದರು.
8) ಟಿಕ್‌ಟಾಕ್ ಹುಚ್ಚಾಟಕ್ಕೆ ನಿಂತಿತು ಅಮ್ಮನ ಎದೆಬಡಿತ! ಮಗನಿಗೆ ಬಿತ್ತು ಸಖತ್ ಗೂಸಾ
ಟಿಕ್‌ಟಾಕ್ ಮಾಡುವವರು ಮಿಸ್ ಮಾಡ್ದೇ ಈ ವಿಡಿಯೋ ನೋಡ್ಬೇಕು. ನೀವು ಟಿಕ್‌ಟಾಕ್ ಮಾಡಿ, ಆದ್ರೆ ಈ ರೀತಿ ಮಾಡ್ಬೇಡಿ ಪ್ಲೀಜ್! ನಿಮ್ಮ ಟಿಕ್‌ಟ್ಯಾಕ್ ಗೀಳಿಗೆ ಮನೆಯವರ ಭಾವನೆಗಳ ಜೊತೆ ಆಟವಾಡಬೇಡಿ. ಮಗನ ಟಿಕ್ ಟಾಕ್ ಹುಚ್ಚಾಟ, ತಾಯಿಗೆ ಪ್ರಾಣ ಸಂಕಟ ತಂದ ವಿಡಿಯೋ ಈಗ ವೈರಲ್ ಆಗಿದೆ.
9) ದೇವರಿಂದಲೂ ಇನ್ಫೋಸಿಸ್ ಲೆಕ್ಕಾಚಾರ ಬದಲಿಸಲಾಗಲ್ಲ: ನೀಲೆಕಣಿ ವಿಶ್ವಾಸಕ್ಕೆ ಸೋಲಿಲ್ಲ!
ಇನ್ಫೋಸಿಸ್ ಆಂತರಿಕ ಕಚ್ಚಾಟದ ಕುರಿತು ಇದೇ ಮೊದಲ ಬಾರಿಗೆ ಬಹಿರಂಗವಾಗಿ ಮಾತನಾಡಿರುವ ಮುಖ್ಯಸ್ಥ ನಂದನ್ ನೀಲೆಕಣಿ, ಆರ್ಥಿಕ ಮೋಸದಾಟ ಅದೆನೆ ಇರಲಿ, ಸಂಸ್ಥೆಯ ಲೆಕ್ಕಾಚಾರವನ್ನು ಆ ದೇವರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
10) ಬರಲಿದೆ ಅಯೋಧ್ಯೆ ಆದೇಶ: ಸ್ವಪಕ್ಷೀಯರಿಗೆ ಮೋದಿ ಕೊಟ್ಟ ಸಂದೇಶ?
ಅಯೋಧ್ಯೆ-ಬಾಬರಿ ಮಸೀದಿ ಭೂವಿವಾದದ ಅಂತಿಮ ತೀರ್ಪು ಹೊರಬೀಳಲು ಕ್ಷಣಗಣನೆ ಶುರುವಾಗಿದೆ. ಈ ಮಧ್ಯೆ ತೀರ್ಪಿಗೂ ಮೊದಲೇ ಯಾವುದೇ ರೀತಿಯ ಅನಗತ್ಯ ಹೇಳಿಕೆಗೆ ಮುಂದಾಗದಂತೆ ಪ್ರಧಾನಿ ಮೋದಿ ಸ್ವಪಕ್ಷೀಯ ನಾಯಕರಿಗೆ ಕಿವಿಮಾತು ಹೇಳಿದ್ದಾರೆ.