ಲಾಕ್‌ಡೌನ್‌ ಇದ್ದರೂ ನಾನು ಮನೆಯಲ್ಲಿ ಇರುತ್ತಿರಲಿಲ್ಲ...

-ಹೀಗೆ ಹೇಳಿದ್ದು ನಟಿ ರಾಗಿಣಿ. ಹಾಗಂತ ಇವರು ಲಾಕ್‌ಡೌನ್‌ ರೂಲ್ಸ್‌ ಬ್ರೇಕ್‌ ಮಾಡಿದ್ದಾರೆಯೇ ಅಂತ ಅರೋಪಿಸಬೇಡಿ. ಹಾಗಾದರೆ ರಾಗಿಣಿ ಮನೆಯಿಂದ ಹೊರಗಿ ಏನು ಮಾಡುತ್ತಿದ್ದಾರೆ ಎಂಬುದನ್ನು ಅವರೇ ಹೇಳುತ್ತಾರೆ ಕೇಳಿ.

ಬಡವರ ಕಷ್ಟಗಳ ನೇರ ದರ್ಶನ

ಲಾಕ್‌ಡೌನ್‌ ಘೋಷಣೆ ಮಾಡಿದಾಗ ಇಷ್ಟುಕಷ್ಟಗಳು ಎದುರಾಗುತ್ತದೆ ಅಂತ ನಾನು ಊಹೆ ಮಾಡಿರಲಿಲ್ಲ. ಎಲ್ಲರನ್ನು ಕೊರೋನಾ ಎನ್ನುವ ಆಪತ್ತು ನಡು ಬೀದಿಯಲ್ಲಿ ನಿಲ್ಲಿಸಿತು. ಇಂಥ ಸಮಯದಲ್ಲೇ ನಮ್ಮ ಜವಾಬ್ದಾರಿಗಳು ಏನು ಎಂಬುದು ನೆನಪಾಗುವುದು. ನನ್ನಿಂದ ಏನಾದರೂ ಸಹಾಯ ಮಾಡಕ್ಕೆ ಸಾಧ್ಯವೆ ಎನ್ನುವ ಯೋಚನೆ ಬಂದಿದ್ದು, ಜನರ ಈ ಕಷ್ಟಗಳನ್ನು ನೋಡಿಯೇ.

ಚಲನಚಿತ್ರ ಕಲಾವಿದರಿಗೆ ರೇಷನ್‌ ವಿತರಿಸಿದ ಲಗ್ಗೆರೆ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ

ಆರ್‌ಡಿ ಫೌಂಡೇಷನ್‌

ನನ್ನದೇ ಒಂದು ಫೌಂಡೇಷನ್‌ ಇದೆ. ಆರ್‌ಡಿ ಫೌಂಡೇಷನ್‌. ನನ್ನ ಹೆಸರಿನ ಫೌಂಡೇಷನ್‌. ನನ್ನ ಸಿನಿಮಾ ವೃತ್ತಿಯ ಜತೆಗೆ ಸಾಮಾಜಿಕ ಕಾರ್ಯಗಳನ್ನು ಮಾಡುವ ಸಲುವಾಗಿ ಮಾಡಿಕೊಂಡಿರುವ ಫೌಂಡೇಷನ್‌. ಬೇರೆ ಬೇರೆ ಸಂದರ್ಭಗಳಲ್ಲಿ ನನ್ನ ಕೈಲಾದಷ್ಟುನೆರವು ನೀಡುತ್ತಿದ್ದೆ. ಲಾಕ್‌ಡೌನ್‌ ಸಂಕಷ್ಟಗಳಿಗೆ ನಮ್ಮ ಫೌಂಡೇಷನ್‌ನಿಂದ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಬೇಕು ಎಂದುಕೊಂಡೆ. ಪೊಲೀಸ್‌ ಇಲಾಖೆಯಿಂದ ಅಧಿಕೃತವಾಗಿ ಅನುಮತಿ ತೆಗೆದುಕೊಂಡೇ ಅಗತ್ಯ ಸೇವೆಗಳಿಗೆ ಮುಂದಾದೆ.

ರೇಷನ್‌ ಜತೆ ಅಗತ್ಯ ಸೇವೆ

ನಮ್ಮ ಮನೆ ಇರುವ ಪ್ರದೇಶದ ಸುತ್ತಮುತ್ತ ಊಟ ಕೊಟ್ಟೆ. ನಮ್ಮ ಮನೆಯಲ್ಲಿ ನಾನೇ ಮಾಡಿಕೊಂಡು ಹೋಗುತ್ತಿದ್ದೆ. ಆದರೆ, ಇದು ಸಾಲುತ್ತಿಲ್ಲ. ದೊಡ್ಡ ಮಟ್ಟದಲ್ಲಿ ಬೇಕು ಅನಿಸಿತು. ಕೇವಲ ಊಟ ಮಾತ್ರವಲ್ಲ, ಮಾಸ್ಕ್‌ ಗಳು, ಸ್ಯಾನಿಟೈಸರ್‌ ಸೇರಿದಂತೆ ಅರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಬೇಕಾದ ಅಗತ್ಯ ವಸ್ತುಗಳನ್ನೂ ವಿತರಣೆ ಮಾಡಿದೆ.

ಕೊರೋನಾ ವಾರಿಯರ್ಸ್‌ಗೆ ಬೆಂಬಲ

ಕೊರೋನಾ ವಾರಿಯರ್ಸ್‌ ಜತೆ ಸೇರಿಕೊಂಡೆ. ದೇಣಿಗೆ ರೂಪದಲ್ಲಿ ಬಂದಿದ್ದು, ಅನುಕೂಲಸ್ಥರು ಕೊಟ್ಟನೆರವುಗಳನ್ನು ಜನರಿಗೆ ತಲುಪಿಸುವುದಕ್ಕೆ ಮುಂದಾದೆ. ಬಡ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದ ಸಂಘ- ಸಂಸ್ಥೆಗಳು, ವ್ಯಕ್ತಿಗಳು, ಜನಪ್ರತಿನಿಧಿಗಳು, ಡಾಕ್ಟರ್ಸ್‌, ಪೊಲೀಸ್‌, ನರ್ಸ್‌ ಗಳು ಇವರಿಗೆ ಬೆಂಬಲವಾಗಿ ಅವರ ಜತೆ ನಿಂತು ಪ್ರೋತ್ಸಾಹ ಮಾಡುವುದು ಕೂಡ ಸಾಮಾಜಿಕ ಸೇವೆ ಅನಿಸಿತು. ಒಬ್ಬ ಸೆಲೆಬ್ರಿಟಿಯಾಗಿ ನನ್ನ ಪ್ರೋತ್ಸಾಹ ಅವರಿಗೆ ಉತ್ಸಾಹ ತುಂಬಿದ್ದು ನಿಜ.

ರಾಜಕೀಯ ಉದ್ದೇಶ ಇಲ್ಲ

ಜನ ಕಷ್ಟದಲ್ಲಿ ಇರುವಾಗ ನಾನು ನಟಿ ಅಂತ ಸುಮ್ಮನೆ ಮನೆಯಲ್ಲಿ ಕೂರಬಾರದು ಎನ್ನುವುದೇ ನನ್ನ ಈ ಸೇವೆಗೆ ಕಾರಣ. ನಾನು ಮಾಡುತ್ತಿರುವ ಕೆಲಸಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಕ್ಕೆ ಕಾರಣ, ಬೇರೆಯವರು ಮುಂದೆ ಬಂದು ಅವರು ಈ ರೀತಿ ಸೇವೆ ಮಾಡುವುದಕ್ಕೆ ಸ್ಫೂರ್ತಿಯಾಗಲಿ ಎಂಬುದು ಅಷ್ಟೆ.

ಮೂಕ ಪ್ರಾಣಿಗಳ ಹಸಿವಿಗೆ ಸ್ಪಂದಿಸಿದ ರಾಗಿಣಿ, ಇವರ ಕಷ್ಟ ಕೇಳುವರು ಯಾರು?

ನಟಿ ಎಂಬ ಬ್ರಾಂಡ್‌ ಮರೆತಿರುವೆ

ಲಾಕ್‌ಡೌನ್‌ ನಂತರ ಹೆಚ್ಚು ಕಮ್ಮಿ ನಾನು ನಟಿ ಅನ್ನುವುದು ಮರೆತಿದ್ದೇನೆ. ಸಿನಿಮಾ ಕತೆ ಕೇಳುವುದು, ಸಿನಿಮಾ ನೋಡುವುದು, ಸಿನಿಮಾ ಮಂದಿ ಜತೆಗೆ ಮಾತನಾಡುವುದು ಇದ್ಯಾವುದು ಮಾಡುತ್ತಿಲ್ಲ. ಬೆಳಗ್ಗೆ ಎದ್ದರೆ ಯಾರಿಗೆ ಊಟ ಕೊಡಬೇಕು, ಯಾರಿಗೆ ರೇಷನ್‌ ಕಿಟ್‌ ಅಗತ್ಯ ಇದೆ, ಮಾಸ್ಕ್‌ಗಳು ಎಲ್ಲಿ ತಲುಪಿಸಬೇಕು, ಯಾರು ದಾನಿಗಳು ಇದ್ದಾರೆ... ಇದೇ ನನ್ನ ನಿತ್ಯದ ಕೆಲಸ ಆಗಿದೆ. ನಾನು ಸಿನಿಮಾ ನಟಿ ಅಂತ ನನೆಪಾಗಬೇಕು ಅಂದರೆ ಲಾಕ್‌ಡೌನ್‌ ಸಂಕಷ್ಟಗಳು ಮುಗಿಯಬೇಕು.