ಚಲನಚಿತ್ರ ವಾಣಿಜ್ಯ ಮಂಡಳಿ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌, ಶ್ರುತಿ, ರಾಗಿಣಿ, ಸಾ.ರಾ ಗೋವಿಂದು ಮತ್ತು ಮುನಿರತ್ನ ಪೋಷಕ ಕಲಾವಿದರಿಗೆ ಆಹಾರದ ಕಿಟ್‌ ವಿತರಿಸಿದರು. ತಲಾ ಮೂವತ್ತು ಕೆ.ಜಿ.ಯ ಈ ಕಿಟ್‌ ದಿನನಿತ್ಯದ ಬಳಕೆಯ ಅಡುಗೆ ಪದಾರ್ಥಗಳನ್ನು ಒಳಗೊಂಡಿದೆ.

ಅಣ್ಣವ್ರ ಹುಟ್ಟು ಹಬ್ಬಕ್ಕೆ 'ಸಲಗ' ತಂಡದ ಸತ್ಕಾರ್ಯ; ವಿಡಿಯೋ ನೋಡಿ

ಲಗ್ಗೆರೆ ವಾರ್ಡ್‌ ಮಹಾನಗರ ಪಾಲಿಗೆ ಸದಸ್ಯರಾದ ಮಂಜುಳಾ ನಾರಾಯಣ ಸ್ವಾಮಿ ಮತ್ತು ಅವರ ಪತಿ ನಾರಾಯಣ ಸ್ವಾಮಿ ಅವರ ವಾರ್ಡಿನಲ್ಲಿ ದಿನಗೂಲಿ ಕಾರ್ಮಿಕರು ವಾಸವಿರುವ ಒಂದಿಷ್ಟೂಕಷ್ಟಪಡದೆ, ಮನೆಯಲ್ಲಿರುವಂಥ ವಾತಾವರಣ ಕಲ್ಪಿಸಿಕೊಟ್ಟಿದ್ದಾರೆ. ಪ್ರತಿ ದಿನ ಎಲ್ಲರ ಮನೆಗೆ ಊಟ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ. ಈಗ ಚಲನಚಿತ್ರ ಪೋಷಕ ಕಲಾವಿದರಿಗೂ ಅವರು ಸಹಾಯ ಹಸ್ತ ಚಾಚಿರುವುದು ಇಡೀ ಚಿತ್ರರಂಗದವರ ಮೆಚ್ಚುಗೆಗೆ ಕಾರಣವಾಗಿದೆ.

 

ಹಸಿದವರಿಗೆ ಆಹಾರ ವಿತರಣೆ ; ಯೂತ್‌ ಕಾಂಗ್ರೆಸ್‌ ಪ್ರೆಸಿಡೆಂಟ್‌ ವಿಷ್ಣು ಕೆ.ವಿ ಕಾರ್ಯಕ್ಕೆ ಮೆಚ್ಚುಗೆ!