Asianet Suvarna News Asianet Suvarna News

ಡಿಂಪಲ್ ಕ್ವೀನ್ ಸಿಂಪಲ್ ಲೈಫ್; ಮೈಸೂರಲ್ಲಿ ದೋಸೆ ಔತಣ!

 

'ಏಕ್‌ ಲವ್‌ಯಾ' ಚಿತ್ರದಿಂದ ಕೊಂಚ ಬ್ರೇಕ್ ತೆಗೆದುಕೊಂಡ ರಚ್ಚು, ಪ್ರೇಮ್ ಆ್ಯಂಡ್ ಟೀಮ್ ಜೊತೆ ಮೈಸೂರಿನಲ್ಲಿ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದಿದ್ದಾರೆ.

kannada actress Rachita ram visit mysore mylari with Ek love ya team
Author
Bangalore, First Published Oct 28, 2019, 12:53 PM IST

ಸ್ಯಾಂಡಲ್‌ವುಡ್ ಗುಳಿ ಕೆನ್ನೆ ಚೆಲುವೆ ರಚಿತಾ ರಾಮ್ ಡೈರೆಕ್ಟರ್ ಪೇಮ್ ನಿರ್ದೇಶಕನದ 'ಏಕ್‌ ಲವ್‌ಯಾ' ಚಿತ್ರದಲ್ಲಿ ರಾಣಾಗೆ ಜೋಡಿಯಾಗಿ ಮಿಂಚಲಿದ್ದಾರೆ.

'ಆಂಟೀನೂ ಅಲ್ಲ, ಡುಮ್ಮಿನೂ ಅಲ್ಲ ಅಪ್ಪ ತಂದಾಕೋದನ್ನೆಲ್ಲಾ ತಿಂತೇನೆ'

ಚಿತ್ರದ ಒಂದು ಭಾಗ ಮೈಸೂರಿನಲ್ಲಿ ಶೂಟಿಂಗ್ ನಡೆಯುತ್ತಿದ್ದು ಪೂರ್ತಿಗೊಂಡ ನಂತರ ಚಾಮುಂದೇಶ್ವರಿ ದೇವಿಯ ದರ್ಶನ ಪಡೆದಿದ್ದಾರೆ. ನಂತರ ಬೆಂಗಳೂರಿಗೆ ಆಗಮಿಸುವಾಗ ದಾರಿಯಲ್ಲಿ ಮೈಲಾರಿ ಹೋಟೆಲ್‌ನಲ್ಲಿ ದೋಸೆ ಸವಿದಿದ್ದಾರೆ.

'ಏಕ್‌ ಲವ್‌ ಯಾ' ಚಿತ್ರವನ್ನು ರಚಿತಾ ರಾಮ್ ನಿರ್ಮಾಣ ಮಾಡುತ್ತಿದ್ದು ಅದರಲ್ಲಿ ರಕ್ಷಿತಾ ತಮ್ಮ ರಾಣಾ ನಟಿಸುತ್ತಿದ್ದಾರೆ. ಈ ವೇಳೆ ರಚಿತಾ ಹಾಗೂ ರಕ್ಷಿತಾ ನಡುವೆ ಒಂದೊಳ್ಳೆ ಭಾಂದವ್ಯ ಬೆಳೆದಿದ್ದು ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಪ್ರೇಮ್ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಆಗ ಇವರಿಬ್ಬರು ಟೇಬಲ್ ಮೇಲೆ ನಿಂತು 'ಸುಂಟರಗಾಳಿ' ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಪತಿಯ ಹುಟ್ಟಹಬ್ಬದಂದು ಟೇಬಲ್ ಮೇಲೆ ಕುಣಿದು ಕುಪ್ಪಳಿಸಿದ ರಕ್ಷಿತಾ!

ಬೆಂಗಳೂರಿನ ಮೆಟ್ರೋದಲ್ಲಿ ಓಡಾಡಬೇಕೆಂದು ರಚ್ಚು ಮುಖಕ್ಕೆ ಮುಸುಕು ಹಾಕಿಕೊಂಡು ಪ್ರಯಾಣ ಮಾಡಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಮುಖ ಮುಚ್ಕೊಂಡು ಮೆಟ್ರೋಲಿ ಸಂಚರಿಸಿದ ಡಿಂಪಲ್ ಹುಡುಗಿ

Follow Us:
Download App:
  • android
  • ios