ಮೆಟ್ರೋ ಸವಾರಿ ಮಾಡಿದ ಡಿಂಪಲ್ ಕ್ವೀನ್ | ಸ್ನೇಹಿತೆ ಜೊತೆ ಸ್ಕಾರ್ಫ್ ಹಾಕಿಕೊಂಡು ರಚಿತಾ ರಾಮ್ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿದ್ದಾರೆ | ಬಹುದಿನದ ಕನಸು ನನಸು ಮಾಡಿಕೊಂಡ ಸಂಭ್ರಮದಲ್ಲಿದ್ದಾರೆ ರಚಿತಾ ರಾಮ್ 

ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಸಖತ್ ಸಿಂಪಲ್ ನಟಿ. ಚಿಕ್ಕ ಪುಟ್ಟ ಖುಷಿಗಳಲ್ಲಿ ಸಂಭ್ರಮಿಸುತ್ತಾರೆ. ಮೆಟ್ರೋ ರೈಡ್ ಮಾಡಬೇಕೆಂಬುದು ಇವರ ಕನಸಾಗಿತ್ತಂತೆ. ಮುಖ ಮುಚ್ಚಿಕೊಂಡು ಮೆಟ್ರೋ ಸವಾರಿ ಮಾಡಿದ್ದಾರೆ ಡಿಂಪಲ್ ಕ್ವೀನ್. 

View post on Instagram

ರಚಿತಾ ರಾಮ್ ಸ್ನೇಹಿತೆ ತೇಜು ಕ್ರಾಂತಿ ಇವರನ್ನು ಮೆಟ್ರೋ ಸವಾರಿಗೆ ಕರೆದುಕೊಂಡು ಹೋಗಿದ್ದಾರೆ. ಮುಖಕ್ಕೆ ಸ್ಕಾರ್ಪ್ ಕಟ್ಟಿಕೊಂಡಿದ್ದರಿಂದ ಸಾರ್ವಜನಿಕರಿಗೆ ಇವರ ಗುರುತು ಸಿಕ್ಕಿಲ್ಲ.

‘ಆಂಟೀನೂ ಅಲ್ಲ, ಡುಮ್ಮಿನೂ ಅಲ್ಲ ಅಪ್ಪ ತಂದಾಕೋದನ್ನೆಲ್ಲ ತಿಂತೇನೆ’

ಉಪೇಂದ್ರ ಜೊತೆ ‘ I Love you' ಸಿನಿಮಾದ ವಿವಾದದ ನಂತರ ಶಿವಣ್ಣ ಜೊತೆ ಆಯುಷ್ಮಾನ್ ಭವ ಸಿನಿಮಾ ಮಾಡಿದರು. ಈ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಇತ್ತೀಚಿಗೆ ನಡೆದ ‘ಅನುಬಂಧ ಅವಾರ್ಡ್’ ನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದರು. 

ಉಪೇಂದ್ರ ಜೊತೆ ಮಾಡಿದ ‘I Love You' ಸಿನಿಮಾ ಸಿಕ್ಕಾಪಟ್ಟೆ ವಿವಾದವಾಗಿತ್ತು. ಈ ಸಿನಿಮಾದಲ್ಲಿ ಕೆಲವೊಂದು ಹಸಿಬಿಸಿ ದೃಶ್ಯಗಳು ವೈರಲ್ ಅಗಿತ್ತು.