ಸ್ಯಾಂಡಲ್‌ವುಡ್ ಡಿಫರೆಂಟ್ ಡೈರೆಕ್ಟರ್ ಜೋಗಿ ಪ್ರೇಮ್ 41 ನೇ ಹುಟ್ಟು ಹಬ್ಬವನ್ನು ಆಪ್ತರೊಂದಿಗೆ ಆಚರಿಸಿಕೊಂಡಿದ್ದಾರೆ. ಈ ವೇಳೆ ಪತ್ನಿ ರಕ್ಷಿತಾ ಹಾಗೂ ನಟಿ ರಚಿತಾ ರಾಮ್ ಕುಣಿದು ಕುಪ್ಪಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

'ಕರಿಯಾ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ನಿರ್ದೇಶಕನಾಗಿ ಕಾಲಿಟ್ಟ ಪ್ರೇಮ್ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ಅದರಲ್ಲೂ ಮೋಸ್ಟ್ ಪಾಪ್ಯೂಲರ್ ಹಾಗೂ ಹೈಲಿ ಪೇಯ್ಡ್ ಪರಭಾಷೆಯ ನಟ-ನಟಿಯರನ್ನು ಕನ್ನಡಕ್ಕೆ ಕರೆತಂದ ಮೊದಲ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಿವಣ್ಣ- ಪ್ರೇಮ್ ಕಾಂಬಿನೇಶನ್ ನಲ್ಲಿ ಮೂಡಿ ಬಂದ ಸಿನಿಮಾಗಳೆಲ್ಲವೂ ಸೂಪರ್ ಹಿಟ್ ಆಗಿವೆ.

ಮುಖ ಮುಚ್ಕೊಂಡು ಮೆಟ್ರೋಲಿ ಸಂಚರಿಸಿದ ಡಿಂಪಲ್ ಹುಡುಗಿ

ಸದ್ಯಕ್ಕೆ 'ಏಕ್‌ ಲವ್ ಯಾ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಪ್ರೇಮ್ , ಕುಟುಂಬದವರು ಹಾಗೂ ಚಿತ್ರರಂಗದ ಆಪ್ತರೊಂದಿಗೆ ಮೈಸೂರಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

View post on Instagram

ಅದ್ಧೂರಿಯಾಗಿ ಆಚರಿಸಿಕೊಂಡ ಹುಟ್ಟುಹಬ್ಬದ ಫೋಟೋ ಹಾಗೂ ವಿಡಿಯೋಗಳನ್ನು ರಕ್ಷಿತಾ ಹಾಗೂ ಇನ್ನಿತರ ನಟ-ನಟಿಯರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗಳು ವೈರಲ್ ಆಗುತ್ತಿದೆ. ಈ ವೇಳೆ ರಚಿತಾ ರಾಮ್ ಹಾಗೂ ರಕ್ಷಿತಾ ಕಲಾಸಿಪಾಳ್ಯ ಚಿತ್ರದ 'ಸುಂಟರಗಾಳಿ' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಸಂತೋಷದ ಕ್ಷಣಕ್ಕೆ ಗಾಯಕ ನವೀನ್ ಸಜ್ಜು, ಕಾಮಿಡಿ ಕಿಲಾಡಿ ಸ್ಪರ್ಧಿಗಳಾದ ಸೂರಜ್ ಹಾಗೂ ಹಿತೇಷ್, ನಟ ರಾಣಾ ಭಾಗಿಯಾಗಿದ್ದರು.

"