Asianet Suvarna News Asianet Suvarna News

2ನೇ ಮದುವೆ ವದಂತಿ ವೈರಲ್; ಅಸಮಾಧಾನ ಹೊರಹಾಕಿದ ನಟಿ ಪ್ರೇಮಾ

ಸ್ಯಾಂಡಲ್ ವುಡ್ ನಟಿ ಪ್ರೇಮಾ ಎರಡನೇ ಮದುವೆ ವದಂತಿ ಬಗ್ಗೆ ಸ್ಪಷ್ಟನೆ ನೀಡಿದ್ದೆ. 

Kannada Actress prema clarifies about her 2nd marriage rumour sgk
Author
First Published Jan 24, 2023, 6:06 PM IST

ಸ್ಯಾಂಡಲ್ ವುಡ್ ಖ್ಯಾತ ನಟ ಪ್ರೇಮಾ ಸದ್ಯ ನಟನೆಯಿಂದ ದೂರ ಇದ್ದಾರೆ. ಇತ್ತೀಚಿಗೆ ಪ್ರೇಮಾ ಅವರ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಪ್ರೇಮಾ ಮತ್ತೆ ಮದುವೆ ಆಗ್ತಿದ್ದಾರೆ ಎನ್ನುವ ಮಾತು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದೆ.  ಅಂದಹಾಗೆ ಪ್ರೇಮಾ ಮದುವೆ ಸುದ್ದಿ ವೈರಲ್ ಆಗಲು ಕಾರಣವಾಗಿದ್ದು ಇತ್ತೀಚಿಗಷ್ಟೆ ಅವರು ಕೊರಗಜ್ಜನ ದೇವಸ್ಥಾನಕ್ಕೆ ಭೇಟಿ ನೀಡಿದ್ದು. ಅಲ್ಲಿ ಅವರು ಮದುವೆ ಬಗ್ಗೆ ಕೊರಗಜ್ಜನಲ್ಲಿ ಪ್ರಾರ್ಥಸಿದ್ದರು ಎನ್ನಲಾಗಿತ್ತು. ಈ ಬಗ್ಗೆ ನಟಿ ಪ್ರೇಮಾ ಮಾತನಾಡಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಪ್ರೇಮಾ 2ನೇ ಮದುವೆ ವಿಚಾರ ಪ್ರಸ್ತಾಪ ಮಾಡಿಲ್ಲ ಎಂದು ಬಹಿರಂಗ ಪಡಿಸಿದ್ದಾರೆ. 

2ನೇ ಮದುವೆ ವಿಚಾರ ವೈರಲ್ ಆಗಿರುವ ಬಗ್ಗೆ ಅಸಮಾಧಾನ ಹೊರಹಾಕಿರುವ ಪ್ರೇಮಾ, 'ದೇವಸ್ಥಾನಕ್ಕೆ ಹೋಗುವುದು ತಪ್ಪು ಅಂದ್ರೆ ಏನು ಮಾಡೋದು? ತುಂಬಾ ದಿನ ಆಗಿತ್ತು ಅಂತ ಕೊರಗಜ್ಜನ ದೇವಾಲಯಕ್ಕೆ ಹೋಗಿದ್ದೆ. ಸ್ನೇಹಿತೆಯ ಮದುವೆಗೆ ಹೋಗಿ ಅಲ್ಲಿಂದ ದೇವರ ದರ್ಶನ ಮಾಡಿದೆ. ಅಲ್ಲಿ ನಾನು ನನ್ನ ಮದುವೆ ಬಗ್ಗೆ ಪ್ರಸ್ತಾಪವನ್ನು ಮಾಡಿಲ್ಲ.’ಎಂದು ಪ್ರೇಮಾ ಸ್ಪಷ್ಟನೆ ನೀಡಿದ್ದಾರೆ.

Shivamogga: ಜ್ಞಾನ, ಕೌಶಲಗಳಿಂದ ಬದುಕು ರೂಪಿಸಿಕೊಳ್ಳಬೇಕು: ನಟಿ ಪ್ರೇಮಾ

ಒಂದು ವೇಳೆ ಮದುವೆ ಆದರೆ ಅಭಿಮಾನಿಗಳ ಗಮನಕ್ಕೆ ತರುತ್ತೇನೆ ಎಂದು ಪ್ರೇಮಾ ಹೇಳಿದ್ದಾರೆ. ‘ನಾನು ಸಾಧಿಸಬೇಕಾಗಿದ್ದು ಇನ್ನೂ ಸಾಕಷ್ಟು ಇದೆ. ಒಂದು ವೇಳೆ ಮದುವೆ ಆದರೆ ನನ್ನ ಕುಟುಂಬ ಮತ್ತು ಅಭಿಮಾನಿಗಳ ಗಮನಕ್ಕೆ ತರುತ್ತೇನೆ’ ಎಂದು ಅವರು ಹೇಳಿದ್ದಾರೆ. ಪ್ರೇಮಾ ಈಗಲೂ ಚಿತ್ರರಂಗದಲ್ಲಿ ಬೇಡಿಕೆ ನಟಿ. ಅವರದ್ದೇ ಆದ ಅಭಿಮಾನಿ ಬಳಗ ಕೂಡ ಇದೆ. ಪ್ರೇಮಾ ಮತ್ತೆ ಸಿನಿಮಾಗಳಲ್ಲಿ ನಟಿಸಲಿ, ಅಭಿಮಾನಿಗಳನ್ನು ರಂಜಿಸಲಿ ಎಂದು ಕಾಯುತ್ತಿದ್ದಾರೆ. ಆದರೆ ಪ್ರೇಮಾ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. 

ಹುಡುಗ ನೋಡಿದ್ದೇನೆ, ಮದುವೆ ಮಾಡಿಸು ಎಂದು ಕೊರಗಜ್ಜನಿಗೆ ಪ್ರಾರ್ಥಿಸಿದ ನಟಿ ಪ್ರೇಮಾ

ನಟಿ ಪ್ರೇಮಾ ಕೆಲವು ವರ್ಷಗಳ ಕಾಲ ನಟನೆಯಿಂದ ದೂರ ಉಳಿದ್ದರು. 2009ರಲ್ಲಿ ಶಿಶಿರಾ ಸಿನಿಮಾದಲ್ಲಿ ನಟಿ ಕಾಣಿಸಿಕೊಂಡಿದ್ದರು. ಅನೇಕರ ವರ್ಷಗಳ ಬಳಿಕ ರಿಯಲ್ ಸ್ಟಾರ್  ಉಪೇಂದ್ರ ಜೊತೆ ಮತ್ತೆ ಸಿನಿಮಾದಲ್ಲಿ ನಟಿಸಿದರು. 2017ರಲ್ಲಿ ರಿಲೀಸ್ ಆದ ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ಆದರೆ ಆ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ ಕಂಡಿಲ್ಲ. ಬಳಿಕ ಮತ್ತೆ ಯಾವ ಸಿನಿಮಾದಲ್ಲೂ ಪ್ರೇಮಾ ನಟಿಸಿಲ್ಲ. ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ಇನ್ನೂ ಬಹಿರಂಗ ಪಡಿಸಿಲ್ಲ. ಪ್ರೇಮಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.   

Follow Us:
Download App:
  • android
  • ios