- Home
- Entertainment
- Sandalwood
- ತಂದೆಯಾಗುತ್ತಿರುವ ಸಂಭ್ರಮದಲ್ಲಿ Director Simple Suni…. ಪತ್ನಿ ಜೊತೆ ಬೇಬಿ ಬಂಪ್ ಫೋಟೊ ಶೂಟ್
ತಂದೆಯಾಗುತ್ತಿರುವ ಸಂಭ್ರಮದಲ್ಲಿ Director Simple Suni…. ಪತ್ನಿ ಜೊತೆ ಬೇಬಿ ಬಂಪ್ ಫೋಟೊ ಶೂಟ್
Director Simple Suni: ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ಮೂಲಕ ಜನಪ್ರಿಯತೆ ಪಡೆದ ನಿರ್ದೇಶಕ ಸುನಿಲ್ ಇದೀಗ ತಂದೆಯ ಹುದ್ದೆಯನ್ನು ಭರ್ತಿ ಮಾಡುತ್ತಿದ್ದಾರೆ. ಪತ್ನಿ ಸೌಂದರ್ಯ ಜೊತೆ ಸುನಿ ಮುದ್ದಾದ ಮೆಟರ್ನಿಟಿ ಫೋಟೊ ಶೂಟ್ ಮಾಡಿಸಿದ್ದು, ಸೋಶಿಯಲ್ ಮೀಡಿಯದಲ್ಲಿ ಹಂಚಿಕೊಂಡಿದ್ದಾರೆ.

ಸಿಂಪಲ್ ಸುನಿ
‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು, ಮೊದಲ ಸಿನಿಮಾ ಮೂಲಕವೇ ಮೋಡಿ ಮಾಡಿದ ನಿರ್ದೇಶಕ ಸಿಂಪಲ್ ಸುನಿ ಇದೀಗ ತಂದೆಯಾಗುವ ಸಂಭ್ರಮದಲ್ಲಿದ್ದಾರೆ.
ಅಪ್ಪನಾಗಿ ಭಡ್ತಿ
ಇತ್ತೀಚೆಗಷ್ಟೇ ಮದುವೆಯ 8ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡ ಸಿಂಪಲ್ ಸುನಿ, ತಾವು ತಂದೆಯಾಗುತ್ತಿರುವ ವಿಷಯವನ್ನು ಮುದ್ದಾದ ಫೋಟೊ ಮೂಲಕ ಸಹ ತಿಳಿಸಿದ್ದರು. ಇದೀಗ ಪತ್ನಿ ಸೌಂದರ್ಯ ಜೊತೆ ಮುದ್ದಾದ ಮೆಟರ್ನಿಟಿ ಫೋಟೊ ಶೂಟ್ ಮಾಡಿಸಿದ್ದಾರೆ.
ಸೌಂದರ್ಯ ಜೊತೆ ವಿವಾಹ
ಸಿಂಪಲ್ ಸುನಿ 2017ರಲ್ಲಿ ಸೌಂದರ್ಯ ಗೌಡ ಎನ್ನುವವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇದೇ ಫೆಬ್ರುವರಿ 17 ರಂದು ಈ ಜೋಡಿ ತಮ್ಮ ಎಂಟನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿದ್ದರು.
ಪತ್ನಿಗೆ ಶುಭ ಹಾರೈಸಿದ್ದು ಹೀಗೆ
ವಿವಾಹ ವಾರ್ಷಿಕೋತ್ಸವದಂದು ಸುನಿ ತಮ್ಮ ಪತ್ನಿ ಜೊತೆಗಿನ ಮುದ್ದಾದ ಫೋಟೊ ಶೇರ್ ಮಾಡಿ, ಮದುವೆಯಾಗಿ 8 ವರ್ಷಗಳು ಹೇಗೆ ಕಳೆದವೋ ಗೊತ್ತಿಲ್ಲ, ಮುಂದಿನ ವರ್ಷಗಳು ಹೇಗಿರುತ್ತವೋ ಗೊತ್ತಿಲ್ಲ, ಆದರೂ ಜೊತೆ ನೆಡೆಯುತ್ತಿದ್ದೇವೆ. ಇಷ್ಟೇ ಜೀವನ .. ಸರಸವೋ ಸಮರಸವೋ ಎಂದೆಂದೂ ಒಂದಾಗಿರೋಣ ಮದುವೆ ವಾರ್ಷಿಕೋತ್ಸವದ ಶುಭಾಶಯಗಳು. ನಿನ್ನ ಮಾಂಗಲ್ಯ ಭಾಗ್ಯ ಗಟ್ಟಿಯಾಗಿರಲಿ” ಎಂದು ಹಾರೈಸಿದ್ದರು.
ಸಿಂಪಲ್ ಸುನಿ ಸಿನಿಮಾಗಳು
'ಬಹುಪರಾಕ್', 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ', 'ಆಪರೇಷನ್ ಅಲಮೇಲಮ್ಮ', 'ಚಮಕ್', 'ಬಜಾರ್', 'ಸಖತ್', 'ಅವತಾರ ಪುರುಷ', 'ಒಂದು ಸರಳ ಪ್ರೇಮ ಕಥೆ', 'ಅವತಾರ ಪುರುಷ ಭಾಗ 2', 'ಗಥ ವೈಭವ' ಇವು ಸಿಂಪಲ್ ಸುನಿ ನಿರ್ದೇಶನ ಮಾಡಿರುವ ಸಿನಿಮಾಗಳು
ರೈಟರ್, ನಿರ್ಮಾಪಕರೂ ಹೌದು
ಇವರು ಕೇವಲ ನಿರ್ದೇಶಕರು ಮಾತ್ರ ಅಲ್ಲ, ‘ಉಳಿದವರು ಕಂಡಂತೆ’ ಸಿನಿಮಾಗೆ ನಿರ್ಮಾಪಕರಾಗಿ, ‘ಚೌಕ’, ‘ಹ್ಯಾಪಿ ನ್ಯೂ ಇಯರ್’ ಸಿನಿಮಾಗೆ ಡೈಲಾಗ್ ರೈಟರ್ ಆಗಿ ಸಹ ಇವರು ಕಾರ್ಯ ನಿರ್ವಹಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

