ಮೂಗು ಸರಿಯಾಗಿಲ್ಲ, ಹಲ್ಲಿನ ಮೇಲೆ ಹಲ್ಲಿತ್ತು; ಆಗ ಮಾಲಾಶ್ರೀ ಎದುರಿಸಿದ ಟೀಕೆಗೆ ನೆಟ್ಟಿಗರು ಶಾಕ್!
ಎಲ್ಲಾ ಚೆನ್ನಾಗಿದ್ದು ಸರಿಯಾಗಿಲ್ಲ ಅಂತಾರೆ ಅಂತ ತಲೆ ಕೆಡಿಸಿಕೊಂಡಿದ್ದ ಮಾಲಾಶ್ರೀ. ಮಗಳಿಗೆ ಬ್ಯೂಟಿ ಬಗ್ಗೆ ಕೊಟ್ಟ ಕಿವಿ ಮಾತುಗಳಿದು....
ಕನ್ನಡ ಚಿತ್ರರಂಗದ ಕನಸಿನ ರಾಣಿ ಮಾಲಾಶ್ರೀ ಮುದ್ದಿನ ಮಗಳು ಆರಾಧನಾ ರಾಮ್ ಕಾಟೇರ ಚಿತ್ರದ ಮೂಲಕ ಬಣ್ಣದ ಜರ್ನಿ ಆರಂಭಿಸಿದ್ದಾರೆ. ಮೊದಲ ಚಿತ್ರದಲ್ಲೇ ದೊಡ್ಡ ತಾರಾ ಬಳಗ ಜೊತೆ ಮಿಂಚಿರುವ ಆರಾಧನಾ ಆಕ್ಟಿಂಗ್ ಸೂಪರ್ ಅಂತಾರೆ ಫ್ಯಾನ್ಸ್. ಮನೆಯಲ್ಲೇ ಸೂಪರ್ ಸ್ಟಾರ್ ಇರುವ ಕಾರಣ ಆರಾಧನಾ ಪಡೆದಿರುವ ಬ್ಯೂಟಿ ಟಿಪ್ಸ್ ಎನು?
'ನಾನು ಸಿನಿಮಾ ಇಂಡಸ್ಟ್ರಗೆ ಕಾಲಿಡುವ ಮುನ್ನ ಅನೇಕರು ನನ್ನ ಮೂಗು ಸರಿಯಾಗಿಲ್ಲ ಬೆಂಡ್ ಆಗಿದೆ..ಹಲ್ಲು ಸರಿಯಾಗಿಲ್ಲ ಒಂದರ ಮೇಲೆ ಮತ್ತೊಂದು ಇದೆ ಎಂದು ಹೇಳುತ್ತಿದ್ದರು. ನನ್ನ ಈ ಲಕ್ಷಣಗಳನ್ನು ಡಾ. ಪಾರ್ವತಮ್ಮ ರಾಜ್‌ಕುಮಾರ್ ಅವರು ಗಮನಿಸಿರಲಿಲ್ಲ. ಆ ಸಮಯದಲ್ಲಿ ಅಣ್ಣಾವ್ರು ವಿದೇಶದಲ್ಲಿದ್ದರು. ಫೋಟೋದಲ್ಲಿ ನೋಡಲು ಚೆನ್ನಾಗಿದ್ದಾಳೆ ಆಕೆಯನ್ನು ನಾಯಕಿ ಮಾಡಿ ಸಿನಿಮಾ ಮಾಡಬೇಕು ಎಂದು ಅಪ್ಪಾಜಿ ಹೇಳಿದರು' ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಹೊಸ ವರ್ಷದ ಪಾರ್ಟಿಯಲ್ಲಿ ಮಾಲಾಶ್ರೀ ಮಾತನಾಡಿದ್ದಾರೆ.
ಅಮ್ಮ ಮಾಲಾಶ್ರೀ ಖ್ಯಾತಿ ಹೊರೆಯಲ್ಲ, ಜವಾಬ್ದಾರಿ: ಆರಾಧನಾ ರಾಮ್
'ನನ್ನ ಅಂದವನ್ನು ಚೆನ್ನಾಗಿ ವರ್ಣಿಸಿದು ಹಂಸಲೇಖ ಸರ್ ಅವರು. ರಾಮಚಾರಿ ಸಿನಿಮಾ ಸಮಯದಲ್ಲಿ ರವಿಚಂದ್ರನ್ ಅವರನ್ನು ನನ್ನನ್ನು ಒಮ್ಮೆ ಪ್ರಸನ್ನ ಸ್ಟುಡಿಯೋಗೆ ಕರೆದುಕೊಂಡು ಹೋದರು, ಅಲ್ಲಿದ ಹಂಸಲೇಖ ಸರ್ ಇದ್ದರು. ಮಾತನಾಡುತ್ತಾ ಕುಳಿತಿರುವಾಗ ಅಲ್ಲೇ ಹಂಸಲೇಖ ಸರ್ ನನ್ನ ಬಗ್ಗೆ ಹಾಡು ಬರೆದರು. ದಾಳಿಂಬೆ ರೀತಿ ಹಲ್ಲು, ತೊಂಡೆ ಹಣ್ಣಿನಂತೆ ತುಟಿ..ಗಿಣಿ ತರ ಮೂಗು....ಅವಾಗಲೇ ಗೊತ್ತಾಗಿದ್ದು ನಾನು ಇಷ್ಟು ಚೆನ್ನಾಗಿದ್ದೀನಿ ಅಂತ' ಎಂದು ಮಾಲಾಶ್ರೀ ಹೇಳಿದ್ದಾರೆ.
'ನನ್ನ ತಾಯಿ ರೀತಿ ಮೂಗು ನನಗೂ ಇರುವುದು. ಅದರ ಬಗ್ಗೆ ತಲೆ ಕೆಡಿಸಿಕೊಂಡಿದ್ದೆ ಅದಕ್ಕೆ ಅಮ್ಮ ಹೇಳಿದರು ನನ್ನ ಬಗ್ಗೆ ಒಂದು ಹಾಡು ಬರೆದಿದ್ದಾರೆ. ಅಷ್ಟು ಚೆನ್ನಾಗಿದೆ ತಲೆ ಕೆಡಿಸಿಕೊಳ್ಳಬೇಡ ಅಂತ. ಸಣ್ಣ ಪುಟ್ಟ imprefection ಇದ್ರೂ ಜನ ಇಷ್ಟ ಪಡುತ್ತಾರೆ' ಎಂದು ಆರಾಧನಾ ಹೇಳಿದ್ದಾರೆ.
ಕನಸಿಕ ರಾಣಿ ಮನೆಯಲ್ಲಿ ಅದ್ಧೂರಿ ದೀಪಾವಳಿ; ಅಮ್ಮ- ಮಗಳ ಫೋಟೋ ವೈರಲ್!
'ಈ ಕಾಲದಲ್ಲಿ ಕಾಂಪಿಟೇಷನ್ ತುಂಬಾ ಇದೆ. ನೋಡಲು ನೀನು ಚೆನ್ನಾಗಿರುವೆ. ನಿನಗೆ ಪರ್ಫೆಕ್ಟ್ ಫೀಚರ್‌ಗಳು ಇದೆ. ಅದರಲ್ಲಿ ಹೆಚ್ಚಿಗೆ ಯೋಚನೆ ಮಾಡಬೇಡ. ನೀನು ಯೋಚನೆ ಮಾಡಬೇಕಿರುವುದು ನಟನೆ ಬಗ್ಗೆ ಮಾತ್ರ. ಟ್ಯಾಲೆಂಟ್ ಮೂಲಕ ಜನರನ್ನು ಗೆಲ್ಲಬೇಕು. ಅಲ್ಲಿ ಗೆದ್ದರೆ ಜನರು ಸಂಪೂರ್ಣವಾಗಿ ಇಷ್ಟ ಪಡುತ್ತಾರೆ. ಆರಾಧನಾ ಈಗಷ್ಟೆ ಕಾಲಿಟ್ಟಿರುವ ಕಾರಣ ಕನಸಿನ ರಾಣಿಯಾಗಿ ಕಾಣಿಸಬೇಕು....ನಟರ ಜೊತೆ ಡುಯೇಟ್ ಆಡಬೇಕು. ಆಮೇಲೆ ಮಾಸ್ ಎಲಿಮಿಂಟ್ ಬರಲಿ' ಎಂದಿದ್ದಾರೆ ಮಾಲಾಶ್ರೀ.