ಅಮ್ಮ ಮಾಲಾಶ್ರೀ ಖ್ಯಾತಿ ಹೊರೆಯಲ್ಲ, ಜವಾಬ್ದಾರಿ: ಆರಾಧನಾ ರಾಮ್‌

 ದರ್ಶನ್ , ಆರಾಧನಾಆ ರಾಮ್ ನಟನೆಯ ಕಾಟೇರ ಸಿನಿಮಾ ಮುಂದಿನ ವಾರ (ಡಿ.29)ತೆರೆ ಕಾಣುತ್ತಿದೆ. ತರುಣ್ ಕಿಶೋರ್ ಸುಧೀರ್ ನಿರ್ದೇಶನ ಈ ಸಿನಿಮಾವನ್ನು ರಾಕ್‌ಲೈನ್‌ ವೆಂಕಟೇಶ್ ನಿರ್ಮಿಸಿದ್ದಾರೆ. ನಾಯಕಿ ಆರಾಧನಾ ಸಿನಿಮಾ ಬಗ್ಗೆ, ನಟನೆ ಮೇಲಿನ ಪ್ರೀತಿ ಬಗ್ಗೆ ಮಾತನಾಡಿದ್ದಾರೆ. 

Mother Malashree popularity is not a burden its responsibility says Aradhana Ram Kaatera vcs

ಪ್ರಿಯಾ ಕೆರ್ವಾಶೆ

ಮುಂದಿನವಾರ ಮೊದಲ ಸಿನಿಮಾ ಕಾಟೇರ ಬಿಡುಗಡೆ. ಭಯನಾ, ಖುಷಿನಾ?

ಎಲ್ಲವೂ ಇದೆ. ಎಲ್ಲರೂ ಸ್ಕ್ರೀನಲ್ಲಿ ನೋಡ್ತಾರೆ. ನನ್ನನ್ನು ನಾನೇ ದೊಡ್ಡ ಪರದೆಯ ಮೇಲೆ ನೋಡ್ತಿದ್ದೀನಿ. ಇದನ್ನು ಕಲ್ಪಿಸಿಕೊಂಡರೇ ಒಂದು ಬಗೆಯ ಎಕ್ಸೈಟ್‌ಮೆಂಟ್‌. ನನ್ನ ಫ್ರೆಂಡ್ಸ್‌, ಕಸಿನ್ಸ್‌ ನನ್ನನ್ನು ದೊಡ್ಡ ಪರದೆಯಲ್ಲಿ ನೋಡೋದಕ್ಕೆ ಕಾತರದಿಂದಿದ್ದಾರೆ. ಸಿನಿಮಾ ಬಹಳ ಚೆನ್ನಾಗಿದೆ. ಆ ಅನ್ನೋದರ ಬಗ್ಗೆ ಅನುಮಾನವೇ ಇಲ್ಲ. ಆದರೆ ಜನ ನನ್ನನ್ನು ಹೇಗೆ ಸ್ವೀಕರಿಸುತ್ತಾರೆ ಅನ್ನುವ ಬಗ್ಗೆ ಕುತೂಹಲ, ನರ್ವಸ್‌ಸೆಸ್‌ ಇದೆ.

ಫಸ್ಟ್‌ ಸೀನ್‌ನಲ್ಲೇ ಸಿಕ್ಸರ್‌ ಹೊಡೆದ್ರಂತೆ? ನಿಮ್ಮ ಟೀಮ್‌ನವ್ರೇ ಸಿಕ್ಕಾಪಟ್ಟೆ ಒಳ್ಳೆ ಮಾತು ಹೇಳಿದ್ದಾರೆ..

ನಮ್ಮ ನಿರ್ದೇಶಕರು, ದರ್ಶನ್ ಇವರೆಲ್ಲ ನನ್ನಂಥ ಬಹಳ ಮಂದಿಯ ನಟನೆಯನ್ನು ಕಂಡವರು. ಅಂಥವರು ನನ್ನ ಬಗ್ಗೆ ಮಾತಾಡ್ತಾರೆ ಅಂದರೆ ಇದಕ್ಕಿಂತ ಖುಷಿ ಬೇಕಾ..

ಫಸ್ಟ್ ಸೀನ್‌ನಲ್ಲೇ ದರ್ಶನ್ ಕತ್ತಿಗೆ ಮಚ್ಚು ಹಿಡಿದು ಡೈಲಾಗ್‌ ಹೇಳಬೇಕು ಅಂದಾಗ ನಿಮ್ಮ ಮೈಂಡ್‌ಸೆಟ್‌?

ಚಾಲೆಂಜಿಂಗ್ ಸ್ಟಾರ್‌ ಜೊತೆಗೆ ಫಸ್ಟ್‌ ಸೀನೇ ಸಖತ್ ಚಾಲೆಂಜಿಂಗ್. ಒಂದೂವರೆ ಪುಟದ ಡೈಲಾಗ್‌ ಒಂದು ಕಡೆ ಆದರೆ ದರ್ಶನ್‌ ಅವರಂಥಾ ಸ್ಟಾರ್‌ ಕತ್ತಿಗೆ ಮಚ್ಚು ಹಿಡಿದು ಬೋಲ್ಡ್‌ ಡೈಲಾಗ್ ಹೇಳೋದು ಮತ್ತೊಂದು ಕಡೆ. ಫುಲ್ ನರ್ವಸ್ ಆಗಿದ್ದೆ. ಆದರೆ ದರ್ಶನ್‌ ಸೇರಿದಂತೆ ಟೀಮ್‌ನ ಎಲ್ಲರೂ ಕೊಟ್ಟ ಧೈರ್ಯದಿಂದ ಹತ್ತೇ ನಿಮಿಷದಲ್ಲಿ ಭಯ ಹೋಗಿಬಿಟ್ಟಿತು.

ನಮ್ಮೂರಲ್ಲಿ ನಮ್ಮ ಸಿನಿಮಾ ಬಿಡುಗಡೆ ಮಾಡಕ್ಕೆ ನಾವ್ಯಾಕೆ ಹೆದರಬೇಕು: ದರ್ಶನ್‌

ಪಾತ್ರ ಹೇಗಿದೆ?

ಬೋಲ್ಡ್‌ ಆಗಿರ್ತಾಳೆ. ಜೋರಾಗಿ ಮಾತಾಡ್ತಾಳೆ. ಫೈಟ್‌ ಮಾಡೋ ಸ್ವಭಾವ, ಸ್ಟ್ರಾಂಗ್‌ ಬಾಡಿ ಲ್ಯಾಂಗ್ವೇಜ್‌. ಮಹತ್ವದ ವಿಚಾರವನ್ನು ಕನ್ವೇ ಮಾಡುವಂಥಾ ಡೈಲಾಗ್‌ಗಳು, ಡ್ಯಾನ್ಸ್‌.. ಹೀಗೆ ಪ್ರತೀ ಹಂತದಲ್ಲೂ ಚಾಲೆಂಜಿಂಗ್ ಅನಿಸೋ ಪಾತ್ರ. ದೀರ್ಘ ಉಸಿರು ಎಳೆದುಕೊಂಡು ಸ್ಕ್ರೀನ್‌ ಪೇಪರ್‌ ಕೈಗೆತ್ತಿಕೊಳ್ತಿದ್ದೆ.

ಸಿನಿಮಾ ಫ್ಯಾಮಿಲಿಯಲ್ಲಿ ಹುಟ್ಟಿ ಬೆಳದವರು, ಯಾವ ವಯಸ್ಸಲ್ಲಿ ಸಿನಿಮಾ ಪ್ರೀತಿ ಮೊಳಕೆ ಒಡೆಯಿತು?

ಹನ್ನೆರಡು ಹದಿಮೂರನೇ ವಯಸ್ಸಲ್ಲಿ ಸಿನಿಮಾರಂಗಕ್ಕೆ ಬರುವ ಕನಸು ಮೊಳೆಯಿತು. ಆಗಲೇ ನಿರ್ಧಾರವನ್ನೂ ತೆಗೆದುಕೊಂಡೆ. ನಮ್ಮ ಮನೆಯಲ್ಲಿ ಅಪ್ಪ ಅಮ್ಮ ಮಾತಾಡುತ್ತಿದ್ದದ್ದೇ ಸಿನಿಮಾಗಳ ಬಗ್ಗೆ. ಅವರು ಸಿನಿಮಾವನ್ನೇ ಜೀವಿಸಿದವರು. ಬುದ್ಧಿ ಬಂದಾಗಿನಿಂದ ನನಗೆ ಸಿನಿಮಾ ಅಂದರೆ ಬಹಳ ಪ್ರೀತಿ.

ಓದಿದ್ದು?

ಬಿಬಿಎ ಕರೆಸ್ಪಾಂಡೆನ್ಸ್‌ನಲ್ಲಿ ಓದಿದ್ದೀನಿ. ಪಿಯುಸಿ ಆದ ತಕ್ಷಣ ಮುಂಬೈಗೆ ಹೋದೆ. ಆ್ಯಕ್ಟಿಂಗ್‌, ಡ್ಯಾನ್ಸ್ ಕಲಿತೆ. ಅನುಪಮ್‌ ಖೇರ್‌ ಇನ್ಸಿಟಿಟ್ಯೂಟ್‌, ಕಿಶೋರ್‌ ನಮಿತ್ ಕಪೂರ್‌ ಇನ್ಸಿಟಿಟ್ಯೂಟ್‌ನಲ್ಲಿ ನಟನೆ ಪಾಠ ಹೇಳಿಸಿಕೊಂಡಿದ್ದೇನೆ.

ಅಮ್ಮ ಏನೆಂದರು?

ಅವರಿಗೆ ಟೆನ್ಶನ್ ಇತ್ತು. ಹೇಗೆ ಮಾಡ್ತಾಳೆ ಅನ್ನುವ ಭಯ ಇತ್ತು. ಶೂಟಿಂಗ್ ನಡೀತಾ ಅವರಿಗೆ ಧೈರ್ಯ ಬಂತು. ನಾನು ಡ್ಯಾನ್ಸ್‌ ಮಾಡಿರೋ ರೀತಿ ಕಂಡು ಬಹಳ ಖುಷಿ ಪಟ್ಟರು.

ರಾತ್ರಿ ದರ್ಶನ್ ಫೋನ್ ಮಾಡಿ ಈ ಮಾತು ಹೇಳಿದ್ರು; ಅಪ್ಪಾಜಿ-ವಿಷ್ಣುದಾದ ಅವರಿಗೆ ಈ ಗುಣವಿತ್ತು ಎಂದ ನಟಿ ಶ್ರುತಿ!

ಮಾಲಾಶ್ರೀ ಅಂದರೆ ಲೆಜೆಂಡ್‌ ಆ್ಯಕ್ಟರ್‌. ಇದು ನಿಮಗೆ ಬ್ಯಾಗೇಜ್ ಅನಿಸುತ್ತಾ?

ನಾನಿದನ್ನು ಪಾಸಿಟಿವ್ ಆಗಿಯೇ ನೋಡ್ತೀನಿ. ಇದು ಬ್ಯಾಗೇಜ್ ಥರ ಅನಿಸುತ್ತಿಲ್ಲ. ನನ್ನ ಮೇಲಿರುವ ಜವಾಬ್ದಾರಿ ಅಂದುಕೊಳ್ತೀನಿ. ಅಮ್ಮನ ನಟನಾ ಕೌಶಲ, ಅವರ ಖ್ಯಾತಿಯನ್ನು ನಾನೀಗ ಮುಂದುವರಿಸಿಕೊಂಡು ಹೋಗಬೇಕಿದೆ. ಈ ಯೋಚನೆಯೇ ನನ್ನನ್ನು ಮುನ್ನಡೆಸುತ್ತದೆ. ಅಮ್ಮನ ಅಭಿಮಾನಿಗಳೂ ನನ್ನ ನಟನೆ ನೋಡಲಿಕ್ಕೆ ಕಾತರರಾಗಿದ್ದಾರೆ.

ದರ್ಶನ್‌ ಜೊತೆಗೆ ನಟಿಸಿದ ಅನುಭವ?

ಅವರು ಬಹಳ ಫ್ರೆಂಡ್ಲಿ ವ್ಯಕ್ತಿ. ಆರಂಭದಿಂದಲೂ ನನ್ನನ್ನು ಹುರಿದುಂಬಿಸುತ್ತಲೇ ಬಂದರು. ಈಗಷ್ಟೇ ಕಣ್ಣು ಬಿಡುತ್ತಿರುವ ನನ್ನನ್ನು ಅವರಂಥಾ ಸೂಪರ್‌ಸ್ಟಾರ್‌ ಬಹಳ ಮಾನವೀಯತೆಯಿಂದ ನಡೆಸಿಕೊಂಡರು. ಅವರು ಕೊಟ್ಟ ಸಪೋರ್ಟ್‌ ಬದುಕಲ್ಲೇ ಮರೆಯಲಾಗದ್ದು.

 

Latest Videos
Follow Us:
Download App:
  • android
  • ios