Asianet Suvarna News Asianet Suvarna News

ಅಣ್ಣಾ ನನ್ನ ಬಿಟ್ಟು ಹೋಗ್ಬೇಡ ಪ್ಲೀಸ್; ಕೊನೆಯ ಬಾರಿ ನೋಡಿ ಕೂಗಿದ ಅಮೂಲ್ಯಾ!

ದೀಪಕ್ ಅರಸ್ ಅವರಿಗೆ ಅನಾರೋಗ್ಯ ಬೆಂಬಿಡದೇ ಕಾಡತೊಡಗಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಅದಕ್ಕಾಗಿ ಡಯಾಲಿಸಿಸ್‌ ಕೂಡ ಮಾಡಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಅನಾರೋಗ್ಯ ಬಹಳಷ್ಟು ಬಿಗಡಾಯಿಸಿತ್ತು. ಕೊನೆಗೂ ಬದುಕದೇ..

Kannada actress Amulya shouts at last rites of her brother Deepak Aras srb
Author
First Published Oct 18, 2024, 8:16 PM IST | Last Updated Oct 18, 2024, 8:31 PM IST

ನಿನ್ನೆ (17 ಅಕ್ಟೋಬರ್ 2024) ರಂದು ನಟಿ ಅಮೂಲ್ಯ ಅಣ್ಣ ಹಾಗೂ ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ದೀಪಕ್ ನಿಧನರಾಗಿದ್ದು ಗೊತ್ತೇ ಇದೆ. ಇಂದು ಅವರ ವೈಯಾಲಿ ಕಾವಲ್ ನಿವಾಸದಲ್ಲಿ ನಡೆದ ಅಂತಿಮ ದರ್ಶನದ ವೇಳೆ ಬಹಳಷ್ಟು ಜನರು ಅಲ್ಲಿ ನೆರೆದಿದ್ದರು. ದೀಪಕ ಅರಸ್ ಕುಟುಂಬಸ್ಥರು, ಆಪ್ತರು ಸೇರಿದಂತೆ ಚಿತ್ರರಂಗದ ಬಹಳಷ್ಟು ಗಣ್ಯರು ಅಲ್ಲಿ ಹಾಜರಿದ್ದರು. ಈ ವೇಳೆ, ದೀಪಕ ಅರಸ್ ತಂಗಿ ನಟಿ ಅಮೂಲ್ಯಾ ಇದ್ದು, ಅವರು ಅಣ್ಣನ ಅಂತಿಮ ದರ್ಶನದ ವೇಳೆ ಮೌನ ಹಾಗೂ ಕಣ್ಣೀರಿಗೆ ಮೊರೆ ಹೋಗಿದ್ದರು. 

ಅಂತಿಮ ದರ್ಶನದ ಬಳಿಕ, ಅಂತ್ಯ ಸಂಸ್ಕಾರಕ್ಕೆಂದು ಅಣ್ಣ ದೀಪಕ್ ಅರಸ್ ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯುತ್ತಿದ್ದಂತೆ, ದೀಪಕ ತಂಗಿ ಅಮೂಲ್ಯಾರ ಕಣ್ಣೀರು ಕಟ್ಟೆಯೊಡೆದಿತ್ತು. ಕೊನೆಯ ಬಾರಿಗೆ ಅಣ್ಣನನ್ನು ನೋಡಿ ಅಮೂಲ್ಯಾ 'ಅಣ್ಣಾ ನನ್ನ ಬಿಟ್ಟು ಹೋಗ್ಬೇಡ ಪ್ಲೀಸ್..' ಎಂದು ಜೋರಾಗಿ ಕೂಗಾಡಿ ಅಳುತ್ತಲೇ ಇದ್ದರು. ಅದನ್ನು ನೋಡಿ ಅಲ್ಲಿದ್ದವರೆಲ್ಲರ ಕಣ್ಣಿನಲ್ಲೂ ನೀರು ಹರಿಯಿತು. 

ಅಣ್ಣ ದೀಪಕ್ ಕಳೆದುಕೊಂಡ ಅಮೂಲ್ಯಾ, ನಿನ್ನೆಯಿಂದಲೂ ಎಲ್ಲಾ ವೇಳೆಯಲ್ಲೂ ಮೌನವಾಗಿಯೇ ಕಣ್ಣಿರು ಸುರಿಸುತ್ತಿದ್ದರು. ಆದರೆ, ಕೊನೆಯ ಬಾರಿಗೆ ನೋಡಿದಾಗ ಮಾತ್ರ ಜೋರಾಗಿ ಕೂಗಿಕೊಂಡರು. 

ಅಮೂಲ್ಯಾ ಅಣ್ಣ ದೀಪಕ್ ಅರಸ್ ಲೈಫ್ ಸ್ಟೋರಿ ಅಂತಿಂಥದ್ದಲ್ಲ, ಏನೇನೋ ಆಗಿಬಿಟ್ಟಿತ್ತು..!

42 ವರ್ಷ ವಯಸ್ಸಿನ ದೀಪಕ್ ಅರಸ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು. ಮನಸಾಲಜಿ ಹಾಗೂ ಶುಗರ್ ಫ್ಯಾಕ್ಟರಿ ಸಿನಿಮಾ ನಿರ್ದೇಶಿಸಿದ್ದ ಅವರು, ಕಥೆ, ಚಿತ್ರಕಥೆ ಬರೆಯುವುದರಲ್ಲಿ ಕೂಡ ಸಿದ್ಧಹಸ್ತರಾಗಿದ್ದರು. ಮನಸಾಲಜಿ ಸಿನಿಮಾವನ್ನು ತಮ್ಮ ಸ್ವಂತ ಪ್ರೊಡಕ್ಷನ್‌ ಹೌಸ್ ಮೂಲಕ ಮಾಡಿದ್ದ ಅವರು ಆ ಚಿತ್ರಕ್ಕೆ ತಮ್ಮ ತಂಗಿ ಅಮೂಲ್ಯ ಅವರನ್ನೇ ನಾಯಕಿಯನ್ನಾಜಿ ಮಾಡಿದ್ದರು. ಬಳಿಕ ಅವರು, ಬೇರೆ ನಿರ್ಮಾಪಕರ ಜೊತೆ ಶುಗರ್ ಫ್ಯಾಕ್ಟರಿ ಸಿನಿಮಾ ಮಾಡಿದ್ದರು. 

ಬಹುಕಾಲದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ದೀಪಕ ಅರಸ್, ನಿನ್ನೆ ಸಾಯಂಕಾಲ ನಿಧನರಾಗಿದ್ದಾರೆ. ಆದರೆ, ಅದಕ್ಕೂ ಮೊದಲು ಅವರು ಬದುಕಿದ್ದ ದಿನಗಳಲ್ಲಿ ಅವರು ಬಹಳಷ್ಟು ಚಾಲೆಂಜ್ ಎದುರಿಸಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಕೇವಲ 38% ಅಂಕಗಳನ್ನು ಗಳಿಸಿದ್ದ ಅವರನ್ನು ಪಿಯುಸಿಯಲ್ಲಿ 'ಸೈನ್ಸ್‌'ಗೆ ಸೇರಿಸಲಾಗಿತ್ತು. ಆದರೆ, ಪಿಯುಸಿ ಮೊದಲ ವರ್ಷ ಮುಗಿದ ತಕ್ಷಣ ಸೈನ್ಸ್ ಬಿಟ್ಟು ಕಾಮರ್ಸ್ ಕೋರ್ಸ್ಗೆ ಶಿಫ್ಟ್ ಆಗಿ ಓದನ್ನು ಮುಂದುವರಿದ್ದರು ದೀಪಕ್. ಕಾಮರ್ಸ್‌ ಪಿಯುಸಿಯಲ್ಲಿ 68%, ಬಿಕಾಂ ಡಿಗ್ರಿಯಲ್ಲಿ 69% ಸ್ಕೋರ್ ಮಾಡಿದ್ದ ದೀಪಕ್, ಬಳಿಕ ಎಂಬಿಎ ಓದಿ ಬಿಸಿನೆಸ್ ಮಾಡುತ್ತಿದ್ದರು. 

ಅಮೂಲ್ಯ ಅಣ್ಣ ದೀಪಕ್ ಅಂತಿಮ ದರ್ಶನ ಪಡೆದ ಸೀತಾರಾಮ ವೈಷ್ಣವಿ ಗೌಡ, ಸಿನಿ ತಾರೆಯರು

ಮೊದಲಿನಿಂದಲೂ ಇದ್ದ ಕಥೆ ಬರೆಯುವ ಗೀಳು ಅವರನ್ನು ಸಿನಿಮಾರಂಗಕ್ಕೆ ಕರೆದುಕೊಂಡು ಬಂದಿತ್ತು. ಅದನ್ನು ಅವರೇ ತಮ್ಮ ಸಂರ್ದಶನದಲ್ಲಿ ಹೇಳಿಕೊಂಡಿದ್ದರು. 'ಎಂಬಿಎ ಮಾಡಿ ಬಿಸಿನೆಸ್ ಮಾಡುತ್ತಿದ್ದ ನಾನು ಸಿನಿಮಾ ನಿರ್ದೇಶನ ಮಾಡಬೇಕೋ ಬೇಡವೋ ಎಂಬ ಬಗ್ಗೆ ಬಹಳಷ್ಟು ಗೊಂದಲದಲ್ಲಿದ್ದೆ. ಅದರೆ, ಸ್ವತಃ ನನ್ನ ತಂಗಿ ಅಮೂಲ್ಯ ಸಿನಿಮಾ ನಟಿಯಾಗಿದ್ದರಿಂದ ಹಾಗೂ ನನಗೂ ಸಿನಿಮಾ ಉದ್ಯಮದಲ್ಲಿ ಬಹಳಷ್ಟು ಮಂದಿ ಸ್ನೇಹಿತರು ಇದ್ದ ಕಾರಣಕ್ಕೆ ಮಾಡಲೋ ಬೇಡವೋ ಎಂಬ ಮನಸ್ಥಿತಿಯಲ್ಲೇ ಸಿನಿಮಾರಂಗಕ್ಕೆ ಕಾಲಿಟ್ಟೆ. ಆದರೆ, ಇಲ್ಲಿ ತಕ್ಕಮಟ್ಟಿಗೆ ಯಶಸ್ಸಿ ಸಿಕ್ಕಿದೆ. ಆದರೆ, ನಾನು ನನ್ನ ಬಿಸಿನೆಸ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ' ಎಂದಿದ್ದರು. 

ಆದರೆ, ವಿಧಿ ಲಖಿತ ಎಂಬಂತೆ, ದೀಪಕ್ ಅರಸ್ ಅವರಿಗೆ ಅನಾರೋಗ್ಯ ಬೆಂಬಿಡದೇ ಕಾಡತೊಡಗಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಅದಕ್ಕಾಗಿ ಡಯಾಲಿಸಿಸ್‌ ಕೂಡ ಮಾಡಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಅನಾರೋಗ್ಯ ಬಹಳಷ್ಟು ಬಿಗಡಾಯಿಸಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ದೀಪಕ ಅರಸ್ ಅವರು ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ಅಮೂಲ್ಯ ಫ್ಯಾಮಿಲಿಯಲ್ಲಿ ಈಗ ಶೋಕದ ವಾತಾವರಣ ಮಡುಗಟ್ಟಿದೆ, 'ದೀಪಕ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹಿತೈಷಿಗಳು ಹರಿಸುತ್ತಿದ್ದಾರೆ. 

ಮೆಟ್ಟಿಲು ನೋಡ್ತಾ ನಿಲ್ಲಬಾರ್ದು, ಹತ್ತೋಕೆ ಪ್ರಯತ್ನ ಪಡ್ಬೇಕು; ಅಭಿಮನ್ಯುಗೆ ಕೋಮಲ್ ಕಿವಿಮಾತು!

Latest Videos
Follow Us:
Download App:
  • android
  • ios