Asianet Suvarna News Asianet Suvarna News

ಮೆಟ್ಟಿಲು ನೋಡ್ತಾ ನಿಲ್ಲಬಾರ್ದು, ಹತ್ತೋಕೆ ಪ್ರಯತ್ನ ಪಡ್ಬೇಕು; ಅಭಿಮನ್ಯುಗೆ ಕೋಮಲ್ ಕಿವಿಮಾತು!

ಡೋಂಟ್ ವರಿ, ದೇವರು ಇದ್ದಾನೆ. ಯಾವತ್ತು ಮೆಟ್ಟಿಲ್ಲನ್ನೂ ನೋಡುತ್ತಾ ನಿಲ್ಲಬಾರದು. ಹತ್ತಿ ಪ್ರಯತ್ನಪಡಬೇಕು. ನಿಮಗೆ ಒಳ್ಳೆದಾಗುತ್ತದೆ. ಪ್ರಯತ್ನ ಪಡುತ್ತಾ ಇರಿ. ಯಾರಿಗೂ ದಿಢೀರ್ ಎಂದು ಯಶಸ್ಸು ಸಿಗಲ್ಲ. ಯಾರು ಇಲ್ಲ ಎಂಬುದನ್ನು ತಲೆಯಿಂದ ತೆಗೆದು..

Sandalwood actor Komal claped for actor Abhimanyu movie srb
Author
First Published Oct 18, 2024, 4:33 PM IST | Last Updated Oct 18, 2024, 4:35 PM IST

ಕನ್ನಡ ಚಿತ್ರರಂಗದ ದಂತಕಥೆ ಕಾಶಿನಾಥ್ ಸುಪುತ್ರ ಅಭಿಮನ್ಯು ಕಾಶಿನಾಥ್ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಎಲ್ಲಿಗೆ ಪಯಣ ಯಾವುದೋ ದಾರಿ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿರುವ ಅಭಿಮನ್ಯು ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರದ‌ ಮುಹೂರ್ತ ಸಮಾರಂಭ ನಿನ್ನೆ ನೆರವೇರಿದೆ. ಬೆಂಗಳೂರಿನ ಸಹಕಾರ ನಗರದ ಛೇರ್ಮನ್ ಕ್ಲಬ್ ನಲ್ಲಿ ನಡೆದ ಮುಹೂರ್ತಕ್ಕೆ ವಿಶೇಷ ಅತಿಥಿಯಾಗಿ ಕೋಮಲ್ ಕುಮಾರ್ ಆಗಮಿಸಿದ್ದರು. ಅಭಿಮನ್ಯು ಹೊಸ ಚಿತ್ರಕ್ಕೆ ಕೋಮಲ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದರು.

ಕೋಮಲ್ ಕುಮಾರ್ ಮಾತನಾಡಿ, 'ನಾನು ಇಂಡಸ್ಟ್ರಿಗೆ ಬಂದು 32 ವರ್ಷವಾಯ್ತು. ಕ್ಲ್ಯಾಪ್ ಮಾಡಿದ್ದು ಇದೇ ಮೊದಲು. ಸಿನಿಮಾ ಚೆನ್ನಾಗಿ ಆಗಬೇಕು. ಯಾರು ಕ್ಲ್ಯಾಪ್ ಹೊಡೆದಿದ್ದು ಅಂತಾ ಆಗಬಾರದು. ಅಭಿಮನ್ಯು ಯಾರೋ ನನಗೆ ಸಪೋರ್ಟ್ ಮಾಡುತ್ತಿಲ್ಲ ಸರ್. ನಮ್ಮ ತಂದೆ ಇದ್ದಿದ್ದರೆ ಸಪೋರ್ಟ್ ಮಾಡುತ್ತಿದ್ದರು ಎಂದರು. ನನಗೆ ಅದು ಬಹಳ ಕನೆಕ್ಟ್ ಆಯಿತು. 

ವಿಜಯಲಕ್ಷ್ಮೀ ಜೊತೆ ಬಳ್ಳಾರಿ ಜೈಲಿನಲ್ಲಿ ಮಾತುಕತೆ ಬಳಿಕ ದರ್ಶನ್ ಮುಖ ಏನ್ ಹೇಳ್ತಿತ್ತು..!?

ಡೋಂಟ್ ವರಿ, ದೇವರು ಇದ್ದಾನೆ. ಯಾವತ್ತು ಮೆಟ್ಟಿಲ್ಲನ್ನೂ ನೋಡುತ್ತಾ ನಿಲ್ಲಬಾರದು. ಹತ್ತಿ ಪ್ರಯತ್ನಪಡಬೇಕು. ನಿಮಗೆ ಒಳ್ಳೆದಾಗುತ್ತದೆ. ಪ್ರಯತ್ನ ಪಡುತ್ತಾ ಇರಿ. ಯಾರಿಗೂ ದಿಢೀರ್ ಎಂದು ಯಶಸ್ಸು ಸಿಗಲ್ಲ. ಯಾರು ಇಲ್ಲ ಎಂಬುದನ್ನು ತಲೆಯಿಂದ ತೆಗೆದು ದೇವರ ಇದ್ದಾನೆ ಎಂಬುದನ್ನು ಇಟ್ಟುಕೊಳ್ಳಿ. ನಿಮಗೋಸ್ಕರ‌ ನಾನು ಬಂದೆ. ಚಿತ್ರದ ನಿರ್ದೇಶಕರಿಗೆ, ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.

ನಟ ಅಭಿಮನ್ಯು ಮಾತನಾಡಿ 'ನಿರ್ದೇಶಕರ ರಾಜ್‌ಮುರಳಿಯವರು ಅಪ್ಪನ ಜಾನರ್ ಇಟ್ಕೊಂಡು ಈಗಿನ ಕಾಲದ ಹುಡುಗರಿಗೆ ಮಾಡಿದರೆ ಹೇಗಿರುತ್ತೆ? ಅದನ್ನು ನಿಮ್ಮನ್ನು ಇಟ್ಕೊಂಡು ಪ್ಲಾನ್ ಮಾಡಿಕೊಂಡಿದ್ದೀನಿ ಸರ್ ಅಂದರು. ಅಪ್ಪ ಇದ್ದಾಗ ನನಗೆ ಬರುತ್ತಿದ್ದ ಆಫರ್ ಇಂತಹದ್ದೇ. ಅಪ್ಪ ಡೈರೆಕ್ಷನ್ ಮಾಡಬೇಕು. ನಾನು ಆಕ್ಟಿಂಗ್ ಮಾಡಬೇಕು. 'ಅನಂತನ ಅವಾಂತರ ಪಾರ್ಟ್ 2' ಮಾಡಬೇಕು. 'ಅನುಭವ ಪಾರ್ಟ್‌ 2' ಮಾಡಬೇಕು ಇದೇ ತರ ಹೆಚ್ಚು ಬರುತ್ತಿತ್ತು. 

ಮಹಾ ಸಂಕಷ್ಟಕ್ಕೆ ಸಿಕ್ಕ ಕಲರ್ಸ್ ಕನ್ನಡ, ಬಿಗ್ ಬಾಸ್ ಪ್ರಸಾರ ನಿಲ್ಲಿಸಬೇಕೆಂದು ದೂರು..!?

ಅಪ್ಪನಿಗೂ ಆ ಕ್ಯಾರೆಕ್ಟರ್ ನನಗೆ ಸೂಟ್ ಆಗಲ್ಲ ಅಂತ ಅನಿಸುತ್ತಿತ್ತು. ನನಗೂ ಅದನ್ನು ಮಾಡುತ್ತೇನೆ ಅನ್ನೋ ಕಾನ್ಫಿಡೆನ್ಸ್ ಇರಲಿಲ್ಲ. ಸನ್ ಆಫ್ ಕಾಶೀನಾಥ್ ಸಿನಿಮಾ ಟೈಟಲ್ ರಿಜೆಸ್ಟರ್ ಮಾಡೋಣ ಅಂತ ಹೋದಾಗ ಯಾರೋ ಮಾಡಿಬಿಟ್ಟಿದ್ದರು. ಎಲ್ಲರೂ ಹೇಳ್ತಾರೆ ಕಾಶೀನಾಥ್ ಮಗನಿಗೆ ಸನ್ ಆಫ್‌ ಕಾಶೀನಾಥ್ ಸಿಗಲಿಲ್ಲ ಅಂತಾರೆ. ನಿರ್ದೇಶಕರು ಟೈಟಲ್ ಇಲ್ಲ ಸರ್ ಯಾರೋ ರಿಜಿಸ್ಟರ್ ಮಾಡಿಸಿದ್ದಾರೆ. ಸುಮ್ಮನೆ ಏನೋ ಸೇರಿಸುವುದಕ್ಕೆ ಆಗಲ್ಲ ಅಂದರು. ಆಮೇಲೆ ಅವರೇ ಯೋಚನೆ ಮಾಡಿ ಅಭಿಮನ್ಯು ಸನ್ ಆಫ್ ಕಾಶೀನಾಥ್ ಅಂತ ಹೇಳಿದರು.

ಅಭಿಮನ್ಯು S/o ಕಾಶಿನಾಥ್: ಅಭಿಮನ್ಯು ಹೊಸ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ ಅಭಿಮನ್ಯು s/o ಕಾಶಿನಾಥ್ ಎಂಬ ಶೀರ್ಷಿಕೆ ಇಡಲಾಗಿದೆ. ಫಸ್ಟ್ ಲುಕ್ ಪೋಸ್ಟರ್ ಬಹಳ ಇಂಪ್ರೆಸಿವ್ ಆಗಿದೆ. ಅಭಿಮನ್ಯು S/o ಕಾಶೀನಾಥ್ ಎಂಬ ಶೀರ್ಷಿಕೆ ಜೊತೆಗೆ ಇದು ಹೊಸ ಅನುಭವ ಎಂಬ ಅಡಿಬರಹ ಆಕರ್ಷಕವಾಗಿದೆ. ಬುಕ್ ಹಿಡಿದು ಅರ್ಧ ಮುಖ ತೋರಿಸುತ್ತಿರುವ ಅಭಿಮನ್ಯು ಸೂಟು ಬೂಟು ತೊಟ್ಟು ಸ್ಟೈಲೀಶ್ ಗೆಟಪ್ ನಲ್ಲಿ ಮಿಂಚಿದ್ದಾರೆ. 

8MM ಸಿನಿಮಾದಲ್ಲಿ ಕೋ ಡೈರೆಕ್ಟರ್ ಆಗಿ, ಒಂದಷ್ಟು ಚಿತ್ರಗಳಲ್ಲಿ ಅಸಿಸ್ಟೆಂಟ್, ಅಸೋಸಿಯೇಟೆಡ್ ಡೈರೆಕ್ಟರ್ ಆಗಿ‌ ದುಡಿದಿರುವ ರಾಜ್ ಮುರಳಿ ಈಗ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಹೆಜ್ಜೆ ಇಡುತ್ತಿದ್ದಾರೆ. ಅಭಿಮನ್ಯು s/ o ಕಾಶಿನಾಥ್ ಚಿತ್ರದ ಮೂಲಕ ರಾಜ್ ಕಾಮಿಡಿ ಡ್ರಾಮಾ ಕಥೆ ಹೇಳೋದಿಕ್ಕೆ ಹೊರಟ್ಟಿದ್ದಾರೆ. ಬಹಳ ಸಿನಿಮಾ ಪ್ರೀತಿಯಿಂದ ಐಸಿರಿ ಪ್ರೊಡಕ್ಷನ್ ನಡಿ ಮಾರಪ್ಪ ಶ್ರೀನಿವಾಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. 

ಅಮೂಲ್ಯ ಅಣ್ಣ ದೀಪಕ್ ಅಂತಿಮ ದರ್ಶನ ಪಡೆದ ಸೀತಾರಾಮ ವೈಷ್ಣವಿ ಗೌಡ, ಸಿನಿ ತಾರೆಯರು

ನಾಯಕ ಅಭಿಮನ್ಯುಗೆ ಸ್ಪಂದನ ಸೋಮಣ್ಣ, ವಿಜಯಶ್ರೀ ಕಲ್ಬುರ್ಗಿ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಅಭಿನಂದನ್ ಕಶ್ಯಪ್ ಸಂಗೀತ, ಚಂದನ್ ಪಿ ಸಂಕಲನ ಚಿತ್ರಕ್ಕಿದೆ. ನವೆಂಬರ್ ತಿಂಗಳಿನಿಂದ ಅಭಿಮನ್ಯು s/ o ಕಾಶಿನಾಥ್ ಚಿತ್ರದ ಶೂಟಿಂಗ್ ಶುಭಾರಂಭವಾಗಲಿದೆ. ಚಿಕ್ಕಮಗಳೂರು, ಮೈಸೂರು, ಹೈದ್ರಾಬಾದ್ ಭಾಗದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.

Latest Videos
Follow Us:
Download App:
  • android
  • ios