ಅಮೂಲ್ಯಾ ಅಣ್ಣ ದೀಪಕ್ ಅರಸ್ ಲೈಫ್ ಸ್ಟೋರಿ ಅಂತಿಂಥದ್ದಲ್ಲ, ಏನೇನೋ ಆಗಿಬಿಟ್ಟಿತ್ತು..!
ಮೊದಲಿನಿಂದಲೂ ಇದ್ದ ಕಥೆ ಬರೆಯುವ ಗೀಳು ಅವರನ್ನು ಸಿನಿಮಾರಂಗಕ್ಕೆ ಕರೆದುಕೊಂಡು ಬಂದಿತ್ತು. ಅದನ್ನು ಅವರೇ ತಮ್ಮ ಸಂರ್ದಶನದಲ್ಲಿ ಹೇಳಿಕೊಂಡಿದ್ದರು. ನಾನು ಸಿನಿಮಾ ನಿರ್ದೇಶನ ಮಾಡಬೇಕೋ ಬೇಡವೋ ಎಂಬ ಬಗ್ಗೆ ಬಹಳಷ್ಟು ಗೊಂದಲದಲ್ಲಿದ್ದೆ. ಅದರೆ, ಸ್ವತಃ ನನ್ನ ತಂಗಿ..
ಸ್ಯಾಂಡಲ್‌ವುಡ್ ವುಡ್ ಖ್ಯಾತ ನಟಿ ಅಮೂಲ್ಯಾ (Amulya) ಸಹೋದರ ದೀಪಕ ಅರಸ್ (Deepak Aras) ನಿನ್ನೆ (17 October 2024) ನಿಧನರಾಗಿದ್ದು ಗೊತ್ತೇ ಇದೆ. 42 ವರ್ಷ ವಯಸ್ಸಿನ ದೀಪಕ್ ಅರಸ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿಯೂ ಗುರುತಿಸಿಕೊಂಡಿದ್ದರು. ಮನಸಾಲಜಿ ಹಾಗೂ ಶುಗರ್ ಫ್ಯಾಕ್ಟರಿ ಸಿನಿಮಾ ನಿರ್ದೇಶಿಸಿದ್ದ ಅವರು, ಕಥೆ, ಚಿತ್ರಕಥೆ ಬರುಯುವುದರಲ್ಲಿ ಕೂಡ ಸಿದ್ಧಹಸ್ತರಾಗಿದ್ದರು. ಮನಸಾಲಜಿ ಸಿನಿಮಾವನ್ನು ತಮ್ಮ ಸ್ವಂತ ಪ್ರೊಡಕ್ಷನ್ ಹೌಸ್ ಮೂಲಕ ಮಾಡಿದ್ದ ಅವರು ಆ ಚಿತ್ರಕ್ಕೆ ತಮ್ಮ ತಂಗಿ ಅಮೂಲ್ಯ ಅವರನ್ನೇ ನಾಯಕಿಯನ್ನಾಜಿ ಮಾಡಿದ್ದರು. ಬಳಿಕ ಅವರು, ಬೇರೆ ನಿರ್ಮಾಪಕರ ಜೊತೆ ಶುಗರ್ ಫ್ಯಾಕ್ಟರಿ ಸಿನಿಮಾ ಮಾಡಿದ್ದರು.
ಬಹುಕಾಲದಿಂದ ಕಿಡ್ನಿ ಸಮಸ್ಯೆಯಿಂದ ಬಳಲಲುತ್ತಿದ್ದ ದೀಪಕ ಅರಸ್, ನಿನ್ನೆ ಸಾಯಂಕಾಲ ನಿಧನರಾಗಿದ್ದಾರೆ. ಆದರೆ, ಅದಕ್ಕೂ ಮೊದಲು ಅವರು ಬದುಕಿದ್ದ ದಿನಗಳಲ್ಲಿ ಅವರು ಬಹಳಷ್ಟು ಚಾಲೆಂಜ್ ಎದುರಿಸಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಕೇವಲ 38% ಅಂಕಗಳನ್ನು ಗಳಿಸಿದ್ದ ಅವರನ್ನು ಪಿಯುಸಿಯಲ್ಲಿ 'ಸೈನ್ಸ್'ಗೆ ಸೇರಿಸಲಾಗಿತ್ತು. ಆದರೆ, ಪಿಯುಸಿ ಮೊದಲ ವರ್ಷ ಮುಗಿದ ತಕ್ಷಣ ಸೈನ್ಸ್ ಬಿಟ್ಟು ಕಾಮರ್ಸ್ ಕೋರ್ಸ್ಗೆ ಶಿಫ್ಟ್ ಆಗಿ ಓದನ್ನು ಮುಂದುವರಿದ್ದರು ದೀಪಕ್. ಕಾಮರ್ಸ್ ಪಿಯುಸಿಯಲ್ಲಿ 68%, ಬಿಕಾಂ ಡಿಗ್ರಿಯಲ್ಲಿ 69% ಸ್ಕೋರ್ ಮಾಡಿದ್ದ ದೀಪಕ್, ಬಳಿಕ ಎಂಬಿಎ ಓದಿ ಬಿಸಿನೆಸ್ ಮಾಡುತ್ತಿದ್ದರು.
ನಟಿ ಅಮೂಲ್ಯ ಸಹೋದರ ದೀಪಕ್ ಅರಸ್ ನಿಧನಮೊದಲಿನಿಂದಲೂ ಇದ್ದ ಕಥೆ ಬರೆಯುವ ಗೀಳು ಅವರನ್ನು ಸಿನಿಮಾರಂಗಕ್ಕೆ ಕರೆದುಕೊಂಡು ಬಂದಿತ್ತು. ಅದನ್ನು ಅವರೇ ತಮ್ಮ ಸಂರ್ದಶನದಲ್ಲಿ ಹೇಳಿಕೊಂಡಿದ್ದರು. 'ಎಂಬಿಎ ಮಾಡಿ ಬಿಸಿನೆಸ್ ಮಾಡುತ್ತಿದ್ದ ನಾನು ಸಿನಿಮಾ ನಿರ್ದೇಶನ ಮಾಡಬೇಕೋ ಬೇಡವೋ ಎಂಬ ಬಗ್ಗೆ ಬಹಳಷ್ಟು ಗೊಂದಲದಲ್ಲಿದ್ದೆ. ಅದರೆ, ಸ್ವತಃ ನನ್ನ ತಂಗಿ ಅಮೂಲ್ಯ ಸಿನಿಮಾ ನಟಿಯಾಗಿದ್ದರಿಂದ ಹಾಗೂ ನನಗೂ ಸಿನಿಮಾ ಉದ್ಯಮದಲ್ಲಿ ಬಹಳಷ್ಟು ಮಂದಿ ಸ್ನೇಹಿತರು ಇದ್ದ ಕಾರಣಕ್ಕೆ ಮಾಡಲೋ ಬೇಡವೋ ಎಂಬ ಮನಸ್ಥಿತಿಯಲ್ಲೇ ಸಿನಿಮಾರಂಗಕ್ಕೆ ಕಾಲಿಟ್ಟೆ. ಆದರೆ, ಇಲ್ಲಿ ತಕ್ಕಮಟ್ಟಿಗೆ ಯಶಸ್ಸಿ ಸಿಕ್ಕಿದೆ. ಆದರೆ, ನಾನು ನನ್ನ ಬಿಸಿನೆಸ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ' ಎಂದಿದ್ದರು.
ಆದರೆ, ವಿಧಿ ಲಖಿತ ಎಂಬಂತೆ, ದೀಪಕ್ ಅರಸ್ ಅವರಿಗೆ ಅನಾರೋಗ್ಯ ಬೆಂಬಿಡದೇ ಕಾಡತೊಡಗಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಅದಕ್ಕಾಗಿ ಡಯಾಲಿಸಿಸ್ ಕೂಡ ಮಾಡಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಅನಾರೋಗ್ಯ ಬಹಳಷ್ಟು ಬಿಗಡಾಯಿಸಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ದೀಪಕ ಅರಸ್ ಅವರು ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ಅಮೂಲ್ಯ ಫ್ಯಾಮಿಲಿಯಲ್ಲಿ ಈಘ ಶೋಕದ ವಾತಾವರಣ ಮಡುಗಟ್ಟಿದೆ, 'ದೀಪಕ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹಿತೈಷಿಗಳು ಹರಿಸುತ್ತಿದ್ದಾರೆ.
ಸುದೀಪ್ ಬಳಿಕ 'ಬಿಗ್ ಬಾಸ್ ಕನ್ನಡ-12' ಹೋಸ್ಟ್ ಯಾರು? ಕೇಳಿ ಬಂದ ಹೆಸರು ಇದು ನೋಡ್ರೀ..!