ಅಮೂಲ್ಯ ಅಣ್ಣ ದೀಪಕ್ ಅಂತಿಮ ದರ್ಶನ ಪಡೆದ ಸೀತಾರಾಮ ವೈಷ್ಣವಿ ಗೌಡ, ಸಿನಿ ತಾರೆಯರು

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಬಹಳಷ್ಟು ಕಲಾವಿದರು ಹಾಗೂ ತಂತ್ರಜ್ಞರು ದೀಪಕ್ ಅರಸು ಅವರ ಅಂತಿಮ ದರ್ಶನ್ ಪಡೆಯುತ್ತಿದ್ದಾರೆ. ಅಮೂಲ್ಯ ಸಹೋದರ ದೀಪಕ ಅರಸು ಅವರ ವೈಯಾಲಿ ಕಾವಲ್ ಮನೆಯಲ್ಲೀಗ ಸೂತಕದ ವಾತಾವರಣವಿದ್ದು, ದುಃಖ ಮಡುಗಟ್ಟಿದೆ. ಅಂತ್ಯಕ್ರಿಯೆಗೆ..

Amulya brother Deepak Aras funeral in Sumanahalli Hindu Rudra bhoomi srb

ನಿನ್ನೆ (17 October 2024) ಕಿಡ್ನಿ ವೈಫಲ್ಯದಿಂದ ನಿಧನರಾಗಿರುವ ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಅಣ್ಣ ದೀಪಕ್ ಅರಸು ಅವರ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ನಡೆಯುತ್ತಿದೆ. ದೀಪಕ್ ಅರಸು ವೈಯಾಲಿ ಕಾವಲ್ ನಿವಾಸದಲ್ಲಿ ದೀಪಕ್ ಅವರ  ಪಾರ್ಥೀವ ಶರೀರದ  ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿಗೆ ಬಹಳಷ್ಟು ಆಪ್ತರು ಹಾಗೂ ಹಿತೈಷಿಗಳಿ ಆಗಮಿಸುತ್ತಿದ್ದಾರೆ. 

ಕನ್ನಡದ ನಟ, ನೆನಪಿರಲಿ ಪ್ರೇಮ್ ಅವರು ದೀಪಕ್ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದಿದ್ದಾರೆ. ಅಣ್ಣನ ಅಗಲಿಕೆಯ ನೋವಿನಲ್ಲಿ ನಟಿ ಅಮೂಲ್ಯ ಅವರು ಮೌನಕ್ಕೆ ಶರಣಾಗಿದ್ದಾರೆ. ಇಂದು ಮಧ್ಯಾನ 3 ಗಂಟಗೆ ದೀಪಕ್ ಮೃತ ದೇಹದ ಅಂತ್ಯ ಸಂಸ್ಕಾರವನ್ನು ಸುಮನಹಳ್ಳಿ ಹಿಂದೂ ರುದ್ರಭೂಮಿಯಲ್ಲಿ ಮಾಡಲು ನಿರ್ಧರಿಸಲಾಗಿದೆ. 

ಅಮೂಲ್ಯಾ ಅಣ್ಣ ದೀಪಕ್ ಅರಸ್ ಲೈಫ್ ಸ್ಟೋರಿ ಅಂತಿಂಥದ್ದಲ್ಲ, ಬಲು ರೋಚಕ..!

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯ ಬಹಳಷ್ಟು ಕಲಾವಿದರು ಹಾಗೂ ತಂತ್ರಜ್ಞರು ದೀಪಕ್ ಅರಸು ಅವರ ಅಂತಿಮ ದರ್ಶನ್ ಪಡೆಯುತ್ತಿದ್ದಾರೆ. ಅಮೂಲ್ಯ ಸಹೋದರ ದೀಪಕ ಅರಸು ಅವರ ವೈಯಾಲಿ ಕಾವಲ್ ಮನೆಯಲ್ಲೀಗ ಸೂತಕದ ವಾತಾವರಣವಿದ್ದು, ದುಃಖ ಮಡುಗಟ್ಟಿದೆ. ಅಂತ್ಯಕ್ರಿಯೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಈಗಾಗಲೇ ಶುರುವಾಗಿವೆ. 

ಬಹುಕಾಲದಿಂದ ಕಿಡ್ನಿ ಸಮಸ್ಯೆಯಿಂದ ಬಳಲಲುತ್ತಿದ್ದ ದೀಪಕ ಅರಸ್, ನಿನ್ನೆ ಸಾಯಂಕಾಲ ನಿಧನರಾಗಿದ್ದಾರೆ. ಆದರೆ, ಅದಕ್ಕೂ ಮೊದಲು ಅವರು ಬದುಕಿದ್ದ ದಿನಗಳಲ್ಲಿ ಅವರು ಬಹಳಷ್ಟು ಚಾಲೆಂಜ್ ಎದುರಿಸಿದ್ದಾರೆ. ಎಸ್‌ಎಸ್‌ಎಲ್‌ಸಿಯಲ್ಲಿ ಕೇವಲ 38% ಅಂಕಗಳನ್ನು ಗಳಿಸಿದ್ದ ಅವರನ್ನು ಪಿಯುಸಿಯಲ್ಲಿ 'ಸೈನ್ಸ್‌'ಗೆ ಸೇರಿಸಲಾಗಿತ್ತು. ಆದರೆ, ಪಿಯುಸಿ ಮೊದಲ ವರ್ಷ ಮುಗಿದ ತಕ್ಷಣ ಸೈನ್ಸ್ ಬಿಟ್ಟು ಕಾಮರ್ಸ್ ಕೋರ್ಸ್ಗೆ ಶಿಫ್ಟ್ ಆಗಿ ಓದನ್ನು ಮುಂದುವರಿದ್ದರು ದೀಪಕ್.

ಕಾಮರ್ಸ್‌ ಪಿಯುಸಿಯಲ್ಲಿ 68%, ಬಿಕಾಂ ಡಿಗ್ರಿಯಲ್ಲಿ 69% ಸ್ಕೋರ್ ಮಾಡಿದ್ದ ದೀಪಕ್, ಬಳಿಕ ಎಂಬಿಎ ಓದಿ ಬಿಸಿನೆಸ್ ಮಾಡುತ್ತಿದ್ದರು. ಮೊದಲಿನಿಂದಲೂ ಇದ್ದ ಕಥೆ ಬರೆಯುವ ಗೀಳು ಅವರನ್ನು ಸಿನಿಮಾರಂಗಕ್ಕೆ ಕರೆದುಕೊಂಡು ಬಂದಿತ್ತು. ಅದನ್ನು ಅವರೇ ತಮ್ಮ ಸಂರ್ದಶನದಲ್ಲಿ ಹೇಳಿಕೊಂಡಿದ್ದರು. 'ಎಂಬಿಎ ಮಾಡಿ ಬಿಸಿನೆಸ್ ಮಾಡುತ್ತಿದ್ದ ನಾನು ಸಿನಿಮಾ ನಿರ್ದೇಶನ ಮಾಡಬೇಕೋ ಬೇಡವೋ ಎಂಬ ಬಗ್ಗೆ ಬಹಳಷ್ಟು ಗೊಂದಲದಲ್ಲಿದ್ದೆ.

ಅದರೆ, ಸ್ವತಃ ನನ್ನ ತಂಗಿ ಅಮೂಲ್ಯ ಸಿನಿಮಾ ನಟಿಯಾಗಿದ್ದರಿಂದ ಹಾಗೂ ನನಗೂ ಸಿನಿಮಾ ಉದ್ಯಮದಲ್ಲಿ ಬಹಳಷ್ಟು ಮಂದಿ ಸ್ನೇಹಿತರು ಇದ್ದ ಕಾರಣಕ್ಕೆ ಮಾಡಲೋ ಬೇಡವೋ ಎಂಬ ಮನಸ್ಥಿತಿಯಲ್ಲೇ ಸಿನಿಮಾರಂಗಕ್ಕೆ ಕಾಲಿಟ್ಟೆ. ಆದರೆ, ಇಲ್ಲಿ ತಕ್ಕಮಟ್ಟಿಗೆ ಯಶಸ್ಸಿ ಸಿಕ್ಕಿದೆ. ಆದರೆ, ನಾನು ನನ್ನ ಬಿಸಿನೆಸ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದೇನೆ' ಎಂದಿದ್ದರು. 

ಹಿಂದೆಂದೂ ಬಂದಿಲ್ಲ, ಮುಂದೇನೋ ಗೊತ್ತಿಲ್ಲ; ಗ್ರೇಟ್ ಸಿನಿಮಾ ಬರ್ತಿದೆ, ಬೇಗ ದಾರಿ ಬಿಡಿ..!

ಆದರೆ, ವಿಧಿ ಲಖಿತ ಎಂಬಂತೆ, ದೀಪಕ್ ಅರಸ್ ಅವರಿಗೆ ಅನಾರೋಗ್ಯ ಬೆಂಬಿಡದೇ ಕಾಡತೊಡಗಿತ್ತು. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು, ಅದಕ್ಕಾಗಿ ಡಯಾಲಿಸಿಸ್‌ ಕೂಡ ಮಾಡಿಸಿಕೊಳ್ಳುತ್ತಿದ್ದರು. ಇತ್ತೀಚೆಗೆ ಅನಾರೋಗ್ಯ ಬಹಳಷ್ಟು ಬಿಗಡಾಯಿಸಿತ್ತು. ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ದೀಪಕ ಅರಸ್ ಅವರು ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ಅಮೂಲ್ಯ ಫ್ಯಾಮಿಲಿಯಲ್ಲಿ ಈಘ ಶೋಕದ ವಾತಾವರಣ ಮಡುಗಟ್ಟಿದೆ, 'ದೀಪಕ್ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದು ಹಿತೈಷಿಗಳು ಹರಿಸುತ್ತಿದ್ದಾರೆ. 

Latest Videos
Follow Us:
Download App:
  • android
  • ios