ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅಮೃತಾ ಅಯ್ಯಂಗಾರ್ ಅವರು ತಂದೆ ಬಗ್ಗೆ ಮಾತನಾಡಿದ್ದಾರೆ. ತಂದೆಯಿಂದ ತಾಯಿ ದೂರ ಇರುವ ಕಾರಣದ ಬಗ್ಗೆಯೂ ಅವರು ಮಾತನಾಡಿದ್ದಾರೆ.
ʼಲವ್ ಮಾಕ್ಟೇಲ್ʼ, ʼಬಡವ ರಾಸ್ಕಲ್, ʼಪಾಪ್‌ಕಾರ್ನ್ ಮಂಕಿ ಟೈಗರ್ʼ ಮುಂತಾದ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿರುವ ಅಮೃತಾ ಅಯ್ಯಂಗಾರ್ ಯಾವಾಗಲೂ ತಾಯಿ ಬಗ್ಗೆ ಮಾತನಾಡುತ್ತಾರೆ, ಆದರೆ ತಂದೆ ಬಗ್ಗೆ ಪ್ರಸ್ತಾಪ ಮಾಡೋದು ಕಡಿಮೆ. ಇತ್ತೀಚೆಗೆ ಅವರು ಮುಕ್ತವಾಗಿ ಮಯೂರ ರಾಘವೇಂದ್ರ ಅವರ ಗೋಲ್ಡ್‌ಕ್ಲಾಸ್ ಯುಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ಅಮೃತಾ ಅಯ್ಯಂಗಾರ್ ಹೇಳಿದ್ದೇನು?
"ನನ್ನ ತಾಯಿಯೇ ನನಗೆ ಶಕ್ತಿ. ನನ್ನ ಸ್ನೇಹಿತೆಯರೆಲ್ಲರೂ ಅವರನ್ನು ಡಾನ್ ಅಂತ ಕರೆಯುತ್ತಾರೆ. ನನ್ನ ತಾಯಿ ಸ್ವತಂತ್ರಳು. ನನ್ನ ತಾಯಿಗಿಂತ ಬೇರೆ ಸ್ಫೂರ್ತಿ ಬೇಡ. 28 ವರ್ಷಗಳಿಂದ ನನ್ನ ತಾಯಿ ಮಾತ್ರ ನನ್ನನ್ನು ನೋಡಿಕೊಳ್ತಾರೆ. ನಮ್ಮ ತಂದೆ ಇನ್ನೂ ಇದ್ದಾರೆ, ಅವರು ದಿವ್ಯಾಂಗ. ಆದರೆ ನಮ್ಮ ಜೊತೆಗೆ ವಾಸ ಮಾಡ್ತಿಲ್ಲ. ನಾನು ಸಿಂಗಲ್ ಪೇರೆಂಟ್ ಕಿಡ್" ಎಂದು ಅಮೃತಾ ಅಯ್ಯಂಗಾರ್ ಹೇಳಿದ್ದಾರೆ.
ʼಡಾಲಿ ಧನಂಜಯ ಅಂದ್ರೆ ನಂಗಿಷ್ಟʼ- ಅಮೃತಾ ಅಯ್ಯಂಗಾರ್ ಹಳೇ ವಿಡಿಯೋ ವೈರಲ್; ಸತ್ಯಾಸತ್ಯತೆ ಬೇರೆಯೇ ಇದೆ!
ಅಮೃತಾ ಅಯ್ಯಂಗಾರ್ ಹೇಳಿದ್ದೇನು?
"ನನ್ನ ತಾಯಿಗೆ ವಿಷಯ ಮುಚ್ಚಿಟ್ಟು ಮದುವೆ ಮಾಡಲಾಯ್ತು. 19 ವರ್ಷದಿಂದ ಅವರು ದುಡಿಯುತ್ತಿದ್ದಾರೆ. ನಮ್ಮ ತಾಯಿ ಅಪ್ಪನ ಜೊತೆ ಇರೋಕಾಗಲ್ಲ ಅಂತ ಡಿಸೈಡ್ ಮಾಡಿದ್ಮೇಲೆ ಅವರು ಅಪ್ಪನ ಮುಖ ನೋಡಿಲ್ಲ. ನನ್ನ ಅಮ್ಮ ಒಂದು ನಿರ್ಧಾರ ತಗೊಂಡಮೇಲೆ ಮುಗೀತು, ಅದನ್ನು ಬದಲಾಯಿಸೋದಿಲ್ಲ. ನನ್ನ ಅಪ್ಪ-ಅಮ್ಮ ದೂರ ಆದಾಗ ನನಗೆ ಐದು ವರ್ಷ ವಯಸ್ಸಾಗಿತ್ತು. ನಾನು ತಾಯಿ ಜೊತೆಗಿದ್ರೂ ಕೂಡ ಅಪ್ಪನ ಜೊತೆಗೆ ಮಾತಾಡ್ತೀನಿ, ಭೇಟಿ ಮಾಡ್ತೀನಿ. ನಾನು ತಂದೆ ಭೇಟಿ ಮಾಡೋದು ತಾಯಿಗೆ ಸಮಸ್ಯೆ ಇಲ್ಲ" ಎಂದು ಅಮೃತಾ ಅಯ್ಯಂಗಾರ್ ಹೇಳಿದ್ದಾರೆ.
ತಾಯಿ ಬಗ್ಗೆ ಹೇಳಿದ್ದೇನು?
"ಅಮ್ಮ ಒಂದೊಂದು ರೂಪಾಯಿ ಉಳಿಸ್ತಾರೆ, ನಮ್ಮ ಜೀವನವನ್ನು ನನಗೆ ಅರ್ಪಿಸಿಬಿಟ್ಟಿದ್ದಾರೆ. ನನಗೆ ಅವಳೇ ಶಕ್ತಿ" ಎಂದು ನಟಿ ಅಮೃತಾ ಅಯ್ಯಂಗಾರ್ ಹೇಳಿದ್ದಾರೆ.
ಇಂದು ಅಮೃತಾ ಅಯ್ಯಂಗಾರ್ ಅವರ ತಾಯಿ ಜನ್ಮದಿನ. ತಾಯಿಯ ಫೋಟೋಗಳನ್ನು ಹಂಚಿಕೊಂಡು, ಅವರು ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.
ಎಲ್ಲೋದ್ರು ಅಮೃತಾ ಅಯ್ಯಂಗಾರ್ ಎಂದು ಹುಡುಕಬೇಡಿ, ರಮ್ಯಾ ಜೊತೆನೇ ಇದ್ದಾರೆ; ಫೋಟೋ ವೈರಲ್
ಲವ್ ಗಾಸಿಪ್ ಬಗ್ಗೆ ಏನಂದ್ರು?
ಇನ್ನು ಅಮೃತಾ ಅಯ್ಯಂಗಾರ್ ಅವರು ಲವ್ ಬ್ರೇಕಪ್ ಆಗಿದೆ, ಅದರಿಂದ ಪಾಠ ಕಲಿತಿದ್ದೇನೆ ಎಂದು ಕೂಡ ಹೇಳಿದ್ದಾರೆ. ಅಷ್ಟೇ ಅಲ್ಲದೆ “ಡಾಲಿ ಧನಂಜಯ ಅವರು ಮದುವೆಯಾಗುತ್ತಿರೋದು ಖುಷಿಯಾಗಿದೆ. ಧನಂಜಯ ಹಾಗೂ ಧನ್ಯತಾ ಮದುವೆ ಘೋಷಣೆ ಮಾಡಿರುವ ಪರಿ ಖುಷಿ ಕೊಟ್ಟಿದೆ. ಧನಂಜಯ ಅವರ ಜ್ಯೂನಿಯರ್ ನಾನು. ನಾವಿಬ್ಬರೂ ಮೈಸೂರಿನವರು. ನಾನು ರಂಗಾಯಣದಲ್ಲಿದ್ದಾಗ ನೀನು ಚಿಣ್ಣರಲೋಕದಲ್ಲಿದ್ದೆ ಅಂತ ಧನಂಜಯ ಅವರು ರೇಗಿಸುತ್ತಾರೆ. ಧನಂಜಯ, ನನ್ನ ಮಧ್ಯೆ ಏನೂ ಇಲ್ಲ. ಈ ಗಾಸಿಪ್‌ಗಳಿಂದ ಎರಡು ಕುಟುಂಬಕ್ಕೆ ಬೇಸರ ಆಗಿದೆ” ಎಂದು ಅವರು ಆಗಲೇ ಹೇಳಿದ್ದರು.

