- Home
- Entertainment
- Sandalwood
- ಎಲ್ಲೋದ್ರು ಅಮೃತಾ ಅಯ್ಯಂಗಾರ್ ಎಂದು ಹುಡುಕಬೇಡಿ, ರಮ್ಯಾ ಜೊತೆನೇ ಇದ್ದಾರೆ; ಫೋಟೋ ವೈರಲ್
ಎಲ್ಲೋದ್ರು ಅಮೃತಾ ಅಯ್ಯಂಗಾರ್ ಎಂದು ಹುಡುಕಬೇಡಿ, ರಮ್ಯಾ ಜೊತೆನೇ ಇದ್ದಾರೆ; ಫೋಟೋ ವೈರಲ್
ಸಾಮಾಜಿಕ ಜಾಲತಾಣದಲ್ಲಿ ಅಮೃತಾ ಮತ್ತು ರಮ್ಯಾ ಫೊಟೋ ವೈರಲ್. ಮದ್ವೆಗೆ ಬಂದಿಲ್ಲ ಆದರೆ ಎಲ್ಲಿ ಸುತ್ತಾಡುತ್ತಿದ್ದೀರಾ?

ಲವ್ ಮಾಕ್ಟೇಲ್ 2 ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಅಮೃತಾ ಅಯ್ಯಂಗಾರ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಮೋಸ್ಟ್ ಸರ್ಚ್ ಆಗಿರುವ ಸುಂದರಿ.
ಇಡೀ ಕನ್ನಡ ಚಿತ್ರರಂಗದ ನಟ ಧನಂಜಯ್ ಮದುವೆಯಲ್ಲಿ ಭಾಗಿಯಾಗುತ್ತಿದ್ದಾರೆ ಆದರೆ ಅಮೃತಾ ಅಯ್ಯಂಗಾರ್ ಮಾತ್ರ ಯಾಕೆ ಕಾಣಿಸಿಕೊಂಡಿಲ್ಲ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಹೌದು! ಸ್ಯಾಂಡಲ್‌ವುಡ್ ಗೋಲ್ಡನ್ ಕ್ವೀನ್ ಮೋಹಕ ತಾರೆ ರಮ್ಯಾ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಂಡಿರುವ ಫೋಟೋವನ್ನು ಅಮೃತಾ ಅಯ್ಯಂಗಾರ್ ಇನ್‌ಸ್ಟಾಗ್ರಾಂನಲ್ಲಿ ಅಪ್ಲೊಡ್ ಮಾಡಿದ್ದಾರೆ.
'ತುಂಬಾ ಸಮಯದ ನಂತರ ನಮ್ಮ Qನ ಭೇಟಿ ಮಾಡಿದ್ದೀನಿ. ಮನಸ್ಸಿನೊಳಗೆ ಕಿರುಚಾಡುತ್ತಿದ್ದೀನಿ ಆದರೆ ಹೊರಗಡೆ ಶಾಂತವಾಗಿದ್ದೀನಿ' ಎಂದು ಅಮೃತಾ ಅಯ್ಯಂಗಾರ್ ಬರೆದುಕೊಂಡಿದ್ದಾರೆ.
ರಮ್ಯಾರನ್ನು ಭೇಟಿ ಮಾಡಿದ್ದಕ್ಕೆ ಮನಸ್ಸಿನಲ್ಲಿ ಕಿರುಚುತ್ತಿರುವುದು ಆದರೆ ಹೊರಗಡೆ ತಾಳ್ಮೆಯಿಂದ ಇರುವುದು ಎಂದು ಅಮೃತಾ ಬರೆದುಕೊಂಡರೂ ಕೂಡ ಅಭಿಮಾನಿಗಳು ಅದನ್ನು ಮತ್ತೊಂದು ಘಟನೆ ಮತ್ತೊಬ್ಬ ವ್ಯಕ್ತಿಗೆ ಕನೆಕ್ಟ್ ಮಾಡಿ ಮಾತನಾಡುತ್ತಿದ್ದಾರೆ.
ನಟಿ ರಮ್ಯಾ ಕೂಡ ಡಾಲಿ ಧನಂಜಯ್ ಮದುವೆಯಲ್ಲಿ ಭಾಗಿಯಾಗಿದ್ದರು. ಅದಾದ ಮೇಲೆ ಅಮೃತಾ ಅಯ್ಯಂಗಾರ್ ಭೇಟಿ ಮಾಡಿರುವುದು. ಈ ಹಿಂದೆ ಕೂಡ ರಮ್ಯಾ ಮತ್ತು ಅಮೃತಾ ಆಗಾಗ ಭೇಟಿ ಮಾಡುತ್ತಿರುತ್ತಾರೆ.