ಡಾಲಿ ಧನಂಜಯ ಹಾಗೂ ಧನ್ಯತಾ ಮದುವೆಯಾಗಿದೆ. ಈ ವೇಳೆ ಡಾಲಿಯನ್ನು ಅಮೃತಾ ಅಯ್ಯಂಗಾರ್ ಹೊಗಳಿರುವ ವಿಡಿಯೋವೊಂದು ವೈರಲ್ ಆಗ್ತಿದೆ. ಇದರ ಸತ್ಯಾಸತ್ಯತೆ ಏನು?
ನಟ ಡಾಲಿ ಧನಂಜಯ-ಧನ್ಯತಾ ಮದುವೆಗೆ ಚಿತ್ರರಂಗದ ಬಹುತೇಕರು ಹಾಜರಿ ಹಾಕಿದ್ದರು. ಆದರೆ ಇವರ ಜೊತೆ ಕೆಲ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದ ಅಮೃತಾ ಅಯ್ಯಂಗಾರ್ ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಮೈಸೂರಿನಲ್ಲಿಯೇ ಇದ್ದರೂ ಕೂಡ ಅಮೃತಾ ಅವರು ಈ ಮದುವೆಯಲ್ಲಿ ಭಾಗಿ ಆಗಿರಲಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಧನು ಮದುವೆಗೆ ಹಾರೈಸಿರಲಿಲ್ಲ. “ಧನಂಜಯ ಅಂದ್ರೆ ನಂಗೆ ಇಷ್ಟ” ಎಂದು ಅಮೃತಾ ಅಯ್ಯಂಗಾರ್ ಅವರು ಹೇಳಿದ ವಿಡಿಯೋ ಈಗ ವೈರಲ್ ಆಗ್ತಿದೆ.
ಸತ್ಯಾಂಶ ಏನು?
ಕಳೆದ ಒಂದು ವರ್ಷದ ಹಿಂದೆ ಅಮೃತಾ ಅಯ್ಯಂಗಾರ್ ಅವರು ಸಂದರ್ಶನ ನೀಡಿದ್ದರು. ಆಗ ಧನಂಜಯ ಜೊತೆಗೆ ತನ್ನ ಹೆಸರು ಥಳುಕು ಹಾಕಿಕೊಂಡಿದ್ದರ ಬಗ್ಗೆ ಅವರು ಮಾತನಾಡಿದ್ದರು. ಆದರೆ ಅದನ್ನು ಅರ್ಧಕ್ಕೆ ಕಟ್ ಮಾಡಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
3 ವರ್ಷಗಳ ಬಳಿಕ ಮದುವೆ ಬಗ್ಗೆ ಅಧಿಕೃತ ಮಾಹಿತಿ ಕೊಟ್ಟ Bigg Boss ಕೆಪಿ ಅರವಿಂದ್, ದಿವ್ಯಾ ಉರುಡುಗ
ಅಮೃತಾ ಅಯ್ಯಂಗಾರ್ ಹೇಳಿದ್ದೇನು?
"ಡಾಲಿ ಧನಂಜಯ ಅವರು ನನಗೆ ಇಷ್ಟ. ಧನಂಜಯ ಜರ್ನಿ, ಅವರು ಮಾತನಾಡೋ ಶೈಲಿ ನನಗೆ ಇಷ್ಟ. ಚಿತ್ರರಂಗಕ್ಕೆ ಬರುವ ಮುಂಚಿನಿಂದಲೂ ನನಗೆ ಅವರು ಪರಿಚಯ ಇತ್ತು. ನಾನು ಮೈಸೂರಿನವಳು, ಅವರು ಮೈಸೂರಿನವರು. ರಂಗಭೂಮಿಯಲ್ಲಿದ್ದಾಗ ನಾನು ನಿನಗೆ ಸೈಡ್‌ಗೆ ಹೋಗು ಅಂತ ಹೇಳಿರಬಹುದು, ನಾನು ರಂಗಭೂಮಿಯಲ್ಲಿದ್ದಾಗ ನೀನು ಚಿಣ್ಣರಲೋಕದಲ್ಲಿದ್ದೆ ಅಂತ ರೇಗಿಸುತ್ತಿರುತ್ತಾರೆ" ಎಂದು ಅಮೃತಾ ಅಯ್ಯಂಗಾರ್ ಹೇಳಿದ್ದಾರೆ.
"ನನ್ನ ಧನಂಜಯ ಗಾಸಿಪ್ ವಿಷಯದಿಂದ ಎರಡೂ ಕುಟುಂಬದಲ್ಲಿ ತೊಂದರೆಯಾಗಿದೆ. ಈ ಬಗ್ಗೆ ನನ್ನ ತಾಯಿ ಬೇಸರ ಮಾಡಿಕೊಂಡಿದ್ದಾರೆ. ನಾವು ಲವ್ ಬಗ್ಗೆ ಘೋಷಣೆ ಮಾಡಿದ್ದೀವಿ ಅಂತ ಮನೆಯವರು ಅಂದುಕೊಂಡು ಕೇಳಿದ್ದೂ ಇದೆ. ಆದರೆ ನಮ್ಮ ಮಧ್ಯೆ ಏನೂ ಇಲ್ಲ. ಈ ಲವ್ ಗಾಸಿಪ್ ಬಗ್ಗೆ ಉತ್ತರ ಕೊಟ್ಟು, ಕೊಟ್ಟು ಸಾಕಾಗಿದೆ. ಉತ್ತರ ಕೊಟ್ಟರೂ ತಪ್ಪು, ಉತ್ತರ ಕೊಡದಿದ್ರೂ ತಪ್ಪು ಎನ್ನುವ ರೀತಿ ಆಗತ್ತೆ" ಎಂದು ಅಮೃತಾ ಅಯ್ಯಂಗಾರ್ ಹೇಳಿದ್ದಾರೆ.
ತಮ್ಮ ರಾಣಾ ಮದುವೆ ಮುಗಿಸಿ ಭರ್ಜರಿ ಪಾರ್ಟಿ ಮಾಡಿದ Crazy Queen Rakshitha: ಮೇಘನಾ ರಾಜ್ ಭರ್ಜರಿ ಡ್ಯಾನ್ಸ್!
ಕೆಲ ಸಿನಿಮಾಗಳಲ್ಲಿ ನಟನೆ!
ಡಾಲಿ ಧನಂಜಯ ಜೊತೆಗೆ ʼಪಾಪ್‌ಕಾರ್ನ್ ಮಂಕಿ ಟೈಗರ್ʼ ಸಿನಿಮಾದಲ್ಲಿ ಸಪ್ತಮಿ ಗೌಡ, ಅಮೃತಾ ಅಯ್ಯಂಗಾರ್ ನಟಿಸಿದ್ದರು. ಆನಂತರದಲ್ಲಿ ʼಹೊಯ್ಸಳʼ, ʼಬಡವ ರಾಸ್ಕಲ್ʼ ಸಿನಿಮಾದಲ್ಲಿಯೂ ಈ ಜೋಡಿ ಒಟ್ಟಿಗೆ ನಟಿಸಿತ್ತು. ಧನಂಜಯ ಮದುವೆಯಲ್ಲಿ ಸಪ್ತಮಿ ಗೌಡ ಭಾಗಿಯಾಗಿದ್ದರೂ ಕೂಡ, ಅಮೃತಾ ಗೈರು ಹಾಕಿದ್ದರು.
ಗೈನಕಾಲಜಿಸ್ಟ್ ಧನ್ಯತಾ ಜೊತೆಗೆ ಧನಂಜಯ ಮದುವೆ ನಡೆದಿದೆ. ಮೈಸೂರಿನಲ್ಲಿ ಈ ಜೋಡಿ ಅದ್ದೂರಿಯಾಗಿ ಅರಿಷಿಣ ಶಾಸ್ತ್ರ, ಸಂಗೀತ, ಮೆಹೆಂದಿ, ಆರತಕ್ಷತೆ ಕಾರ್ಯಕ್ರಮ ಆಯೋಜಿಸಿಕೊಂಡಿತ್ತು. ಕಳೆದ ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಈ ಜೋಡಿ ಕುಟುಂಬಸ್ಥರು, ಸ್ನೇಹಿತರು, ಚಿತ್ರರಂಗದವರ ಸಾಕ್ಷಿಯಾಗಿ ಮದುವೆಯಾಗಿತ್ತು.
ಡಾಲಿ ಧನಂಜಯ ಹಾಗೂ ಅಮೃತಾ ಅವರು ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಯಾವಾಗ ಮತ್ತೆ ತೆರೆ ಮೇಲೆ ಒಟ್ಟಿಗೆ ಕಾಣಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.
