ಮದುವೆ ವಾರ್ಷಿಕೋತ್ಸವದಂದು ಗುಡ್ ನ್ಯೂಸ್ ಕೊಡಲು ಸಜ್ಜಾದ ಚಿನ್ನಾರಿ ಮುತ್ತ. ತಾಯಿ ಪಾತ್ರ ನಿರ್ವಹಿಸುವುದು ಕಷ್ಟ ಅಗಿತ್ತು....

ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅಗಲಿ ಒಂದು ವರ್ಷ ಕಳೆದಿದೆ. ಪತ್ನಿ ಹೇಗೆ ತನ್ನ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿಕೊಟ್ಟ ಪಾಠವನ್ನು ವಿಜಯ್ ಹಂಚಿಕೊಂಡಿದ್ದಾರೆ. 

'ನಾವು ಇನ್ನೂ ಅಪ್ಪು ಮಾಮ ಅಗಲಿದ ನೋವಿನಿಂದ ಹೊರ ಬಂದಿರಲಿಲ್ಲ ಅಷ್ಟರಲ್ಲಿ ಸ್ಪಂದನಾಳಿಗೆ ಹೀಗೆ ಅಯ್ತು. ಜೀವನವನ್ನು ಪ್ರಶ್ನೆ ಮಾಡಬಾರದು ಎಂದು ಈ ಘಟನೆಗಳು ಹೇಳಿಕೊಟ್ಟಿದೆ. ಸ್ಪಂದನಾ ಅಗಲಿದ ಮೇಲೆ ನಮ್ಮ ಕುಟುಂಬದವರು ಮತ್ತು ನನಗೂ ತುಂಬಾ ಕಷ್ಟವಾಯ್ತುಇರಲಿ, ಆದರೆ ಈ ಸಮಯದಲ್ಲಿ ನಾನು ಕರುಣೆ ಭಯಸಲಿಲ್ಲ' ಎಂದು ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ವಿಜಯ್ ಮಾತನಾಡಿದ್ದಾರೆ.

ಯೂಟ್ಯೂಬರ್ ಸತೀಶ್‌ ಈರೇಗೌಡ್ರೇ ಯಾವುದೇ ಕಾರಣಕ್ಕೂ ಎಣ್ಣೆ ಕುಡಿಯೋದು ಮಾತ್ರ ಬಿಡ್ಬೇಡಿ; ನೊಂದ ಯುವಕರ ಸಂಘದ ಮನವಿ ವೈರಲ್!

'ಘಟನೆ ನಡೆದ ಮೇಲೆ ಮಗ ಶೌರ್ಯ ಮತ್ತು ನಾನು ನಾರ್ಮಲ್ ಜೀವನಕ್ಕೆ ಬರಲು ಪ್ರಯತ್ನಿಸಿದೆವು. ಆರಂಭದಲ್ಲಿ ತಾಯಿ ಮತ್ತು ತಂದೆ, ಎರಡೂ ಸ್ಥಾನದಲ್ಲಿ ನಿಂತುಕೊಳ್ಳುವುದು ಕಷ್ಟವಾಯ್ತು ಆದರೆ ಖುಷಿನೂ ಕೊಟ್ಟಿದೆ. ಈಗ ಅರ್ಥ ಮಾಡಿಕೊಂಡು ಹೊಂದಿಕೊಂಡು ನಾವಿಬ್ಬರು ಒಟ್ಟಿಗೆ ಗಟ್ಟಿಯಾಗಿ ನಿಂತಿದ್ದೀವಿ. ಜೀವನದ ಹಾದಿಯನ್ನು ನನ್ನ ಮಗ ಶೌರ್ಯ ತೋರಿಸಿಕೊಡುತ್ತಿದ್ದಾನೆ' ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ. 

'ಸದಾ ದೇವರ ಹಾಡುಗಳನ್ನು ಹಾಡಲು ಸ್ಪಂದನಾ ನನಗೆ ಸ್ಫೂರ್ತಿ. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ವಿಡಿಯೋಗಳಲ್ಲಿ ನಾನು ಪಾಸಿಟಿವ್ ಆಗಿರಲು ಸ್ಪಂದನಾ ಕಾರಣ. ಸೋಷಿಯಲ್ ಮೀಡಿಯಾದಲ್ಲಿ ನಾನು ಸದಾ ಆಕ್ಟಿವ್ ಆಗಿ ಇರಬೇಕು ಹಾಗೂ ಹೆಚ್ಚಿಗೆ ಹಾಡುಗಳನ್ನು ಹಾಡಬೇಕು ಅನ್ನೋದು ಆಕೆಯ ಆಸೆ ಆಗಿತ್ತು.ಈಗ ನಾನು ಪಾಸಿಟಿವ್ ಆಗಿದ್ದೀನಿ, ಅದ್ಭುತ ಹಾಡುಗಳನ್ನು ಹಾಡುತ್ತೀನಿ, ನನ್ನ ಮಗನಿಗೆ ತಾಯಿ ಅಗಿದ್ದೀನಿ, ಕೆಲಸದ ಕಡೆ ಗಮನ ಕೊಟ್ಟಿದ್ದೀನಿ ಹಾಗೂ ಜೀವನದಲ್ಲಿ ನಾನು ಅಂದುಕೊಂಡ ವ್ಯಕ್ತಿ ಆಗುತ್ತಿದ್ದೀನಿ' ಎಂದಿದ್ದಾರೆ ವಿಜಯ್ ರಾಘವೇಂದ್ರ.

ಮದುವೆ ಸೀರೆ ಸಿಕ್ತು, ಛತ್ರ ಬುಕ್ ಆಯ್ತು; ಫಸ್ಟ್‌ ನೈಟ್‌ನೂ ತೋರ್ಸಮ್ಮ ಎಂದು ಮಧು ಗೌಡ ಕಾಲೆಳೆದ ನೆಟ್ಟಿಗರು!

'ಈಗ ಕೆಲಸದ ಮೇಲೆ ಇರುವ ನನ್ನ ಆಟಿಟ್ಯೂಡ್‌ ತುಂಬಾ ಬದಲಾಗಿದೆ. ಹಾರ್ಡ್‌ ವರ್ಕ್ ಮಾಡುತ್ತಲೇ ಇರುತ್ತೀನಿ. ಎಲ್ಲಾ ರೀತಿಯ ಕೆಲಸಗಳನ್ನು ಮಾಡಬೇಕು ಅನ್ನೋದು ಸ್ಪಂದನಾ ಆಸೆ ಆಗಿತ್ತು. ಹೊಸ ಪಾತ್ರಗಳನ್ನು ಅಯ್ಕೆ ಮಾಡುತ್ತಿರುವ ಈ ಖುಷಿ ನನಗಿದೆ. ಶೀಘ್ರದಲ್ಲಿ ನಮ್ಮ ವಿವಾಗ ವಾರ್ಷಿಕೋತ್ಸವ ಬರಲಿದೆ, ಪ್ರತಿ ವರ್ಷವೂ ಮನೆಯಲ್ಲಿ ವಿಶೇಷ ಪೂಜೆ ಮಾಡಿಸುತ್ತೀವಿ ಆದರೆ ಈ ವರ್ಷ ಹೊಸ ವಿಚಾರವೊಂದನ್ನು ಹಂಚಿಕೊಳ್ಳುವೆ. ಖಂಡಿತಾ ಈ ಕೆಲಸವನ್ನು ನೋಡಿ ಸ್ಪಂದನಾ ಖುಷಿ ಪಡುತ್ತಾಳೆ' ಎಂದು ವಿಜಯ್ ರಾಘವೇಂದ್ರ ಹೇಳಿದ್ದಾರೆ.