ಯೂಟ್ಯೂಬರ್ ಸತೀಶ್‌ ಈರೇಗೌಡ್ರೇ ಯಾವುದೇ ಕಾರಣಕ್ಕೂ ಎಣ್ಣೆ ಕುಡಿಯೋದು ಮಾತ್ರ ಬಿಡ್ಬೇಡಿ; ನೊಂದ ಯುವಕರ ಸಂಘದ ಮನವಿ ವೈರಲ್!

ಯೂಟ್ಯೂಬರ್‌ನ ಫ್ಯಾಮಿಲಿ ರೀತಿ ನೋಡುತ್ತಿರುವ ಅಭಿಮಾನಿಗಳು. ಈರೇಗೌಡರು ಎಣ್ಣೆ ಹೊಡೆದಿಲ್ಲ ಅಂದ್ರೆ ಜನರಿಗೆ ಬೇಸರ.......

Kannada vlogger Sathish Eeragowda stops drinking fans ask to enjoy life with family vcs

ಕನ್ನಡ ಯೂಟ್ಯೂಬರ್‌ಗಳ ಸಂಖ್ಯೆ ಬಹಳ ಕಡಿಮೆ ಅದರಲ್ಲೂ ಸತೀಶ್ ಈರೇಗೌಡ ಮತ್ತು ಪೂಜಾ ಕೆ ರಾಜ್‌ ದಂಪತಿ ಕ್ರಿಯೇಟ್ ಮಾಡುವ ವಿಡಿಯೋವನ್ನು ನೆಟ್ಟಿಗರು ಸಖತ್ ಎಂಜಾಯ್ ಮಾಡುತ್ತಾರೆ. ಈರೇಗೌರ ಜೀವನ ಪಾಠ, ವಾವಾ ಎಂದುಕೊಂಡು ರಚಿ ನೋಡುವ ಅಡುಗೆಳು, ಅಯ್ಯೋ ನಾನು ಸೈಲೆಂಟ್ ಪಾಪದವಳು ಎಂದು ಮುದ್ದು ಮುದ್ದಾಗಿ ಮಾತನಾಡುವ ಪೂಜಾ ಕೆ ರಾಜ್‌ಗೆ ಸಿಕ್ಕಾಪಟ್ಟೆ ಫ್ಯಾನ್ಸ್‌ ಇದ್ದಾರೆ. ಹಾಗೆ ಸುಮ್ಮನೆ ರೋಡಿನಲ್ಲಿ ಗಾಡಿ ನಿಲ್ಲಿಸಿಕೊಂಡು ನಿಂತಿದ್ದರೆ ಸುಮಾರು 20-30 ಜನರು ಬಂದು ಮಾತನಾಡಿಸಿ ಸೆಲ್ಫಿ ಕೇಳುತ್ತಾರೆ. 

ಕೆಲವು ತಿಂಗಳುಗಳ ಹಿಂದೆ ಪೂಜಾ ಕೆ ರಾಜ್‌ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಹೀಗಾಗಿ ಬಾಣಂತನಕ್ಕೆಂದು ತಮ್ಮ ತವರು ಮನೆಗೆ ಹೋಗಿದ್ದಾರೆ. ಈ ನಡುವೆ ಸಿನಿಮಾ ಕೆಲಸದ ವಿಚಾರವಾಗಿ ಹಾಸನದಲ್ಲಿ ಇರುವ ಸತೀಶ್ ಈರೇಗೌಡರ ಆರೋಗ್ಯದಲ್ಲಿ ಏರುಪೇರು ಕಂಡು ಬಂದಿದ್ದರು ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಸತೀಶ್ ಈರೇಗೌಡರು ಕುಡಿಯುವುದನ್ನು ಬಿಟ್ಟು ಬಿಟ್ಟಿದ್ದಾರೆ. ಪೂಜಾ ಕೆ ಆರ್‌ ತೋರಿಸುವ ಯೂಟ್ಯೂಬ್ ವಿಡಿಯೋದಲ್ಲಿ ಸತೀಶ್ ಈರೇಗೌಡರು ತಮ್ಮ ಮಾವಂದೀರ ಜೊತೆ ಜಾಲಿ ಮಾಡಿಕೊಂಡು ಕುಡಿಯುವುದನ್ನು ನೋಡಬಹುದು. ಈ ವೇಳೆ ಈರೇಗೌಡರು ಕೊಡುವ ಜೀವನದ ಟಿಪ್ಸ್‌ಗಳು ಸಖತ್ ವೈರಲ್ ಆಗುತ್ತಿತ್ತು. ಸತೀಶ್ ಈರೇಗೌಡ ಖಾತೆಯಲ್ಲಿ 1 ಲಕ್ಷ 66 ಸಾವಿರ ಸಬ್‌ಸ್ಕ್ರೈಬರ್‌ಗಳು ಇದ್ದಾರೆ, ಪೂಜಾ ಖಾತೆಯಲ್ಲಿ 1 ಲಕ್ಷ 20 ಸಾವಿರ ಸಬ್‌ಸ್ಕ್ರೈಬರ್‌ಗಳು ಇದ್ದಾರೆ. 

ಯೂಟ್ಯೂಬ್ ಸಂಪಾದನೆಯಿಂದ ಬೆಂಗಳೂರಿನಲ್ಲಿ ದುಬಾರಿ ಅಪಾರ್ಟ್ಮೆಂಟ್ ಖರೀದಿಸಿದ ಸತೀಶ್ ಈರೇಗೌಡ- ಪೂಜಾ!

ಇತ್ತೀಚಿಗೆ ಅಪ್ಲೋಡ್ ಮಾಡಿದ ವಿಡಿಯೋದಲ್ಲಿ 'ನಮ್ಮ ಮನೆಯವರು ಮತ್ತೆ ಕುಡಿಯಲು ಶುರು ಮಾಡುತ್ತಾರೆ ಆದರೆ ಒಂಡು ಕಂಡಿಷನ್ ಮೇಲೆ ಅದುವೇ ನಮ್ಮ ತಂದೆ ಜೊತೆ ನಮ್ಮ ಮನೆಯಲ್ಲಿ ಮಾತ್ರ ಕುಡಿಯಬೇಕು. ಸುಮಾರು 3 ತಿಂಗಳ ನಂತರ ಕುಡಿಯುತ್ತಿದ್ದಾರೆ' ಎಂದು ಪೂಜಾ ಹೇಳಿದ್ದರು. ಈ ಮಾತುಗಳನ್ನು ನೆಟ್ಟಿಗರು ಕೇಳಿ ಖುಷಿ ಪಟ್ಟಿದ್ದಾರೆ. ಸತೀಶ್ ಈರೇಗೌಡರೇ ನೀವೇ ನಮಗೆ ಸ್ಫೂರ್ತಿ ನೀವು ಕುಡಿಯುವುದು ಬಿಟ್ಟರೆ ನಾವು ಏನು ಮಾಡಬೇಕು? ನೊಂದ ಯುವರಿಗೆ ನಿಮ್ಮ ಮಾತುಗಳಿಂದ ಸ್ಫೂರ್ತಿ ಸಿಗುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios