ನಮ್ಮಿಬ್ಬರ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬಂದೇ ಬರುತ್ತದೆ. ಅದು ‘ಉಗ್ರಂ 2’. ಇದರಲ್ಲಿ ಯಾರಿಗೂ ಯಾವ ಅನುಮಾನವೂ ಬೇಡ.

- ಹೀಗೆ ಖಡಕ್‌ ಆಗಿ ಹೇಳಿದ್ದು ನಟ ಶ್ರೀಮುರಳಿ. ಹಾಗಾದರೆ ಯಾವಾಗ ಆರಂಭವಾಗಲಿದೆ ಎನ್ನುವ ಪ್ರಶ್ನೆ ಸಹಜವಾಗಿ ಅವರ ಮುಂದೆ ಬಂತು. ಅಲ್ಲಿಗೆ ‘ಉಗ್ರಂ 2’ ಸೆಟ್ಟೇರುವ ಪೂರ್ಣ ಮಾಹಿತಿ ಕೊಡಲು ರೋರಿಂಗ್‌ ಸ್ಟಾರ್‌ ಮುಂದಾದರು. ಅವರ ಮಾತುಗಳಲ್ಲೇ ಕೇಳಿ.

ಚಿತ್ರ ವಿಮರ್ಶೆ: ಭರಾಟೆ

‘ನನಗೆ ಉಗ್ರಂ ಹೊಸ ಇಮೇಜ್‌ ಕೊಟ್ಟಸಿನಿಮಾ. ಅದರ ಮುಂದುವರಿದ ಭಾಗ ಮಾಡಲೇಬೇಕು ಎಂಬುದು ನಾನು ಮತ್ತು ಪ್ರಶಾಂತ್‌ ನೀಲ್‌ ಆಗಲೇ ನಿರ್ಧಾರ ಮಾಡಿಕೊಂಡಿದ್ವಿ. ಆದರೆ, ಗ್ಯಾಪ್‌ ಕೊಟ್ಟು ‘ಉಗ್ರಂ 2’ ಚಿತ್ರ ಶುರು ಮಾಡೋಣ ಎನ್ನುವ ಹೊತ್ತಿಗೆ ಅವರು ‘ಕೆಜಿಎಫ್‌’ ಚಿತ್ರದಲ್ಲಿ ಬ್ಯುಸಿ ಆದರು. ಅದು ಎರಡು ಭಾಗಗಳವರೆಗೆ ಬೆಳೆಯಿತು. ಈಗ ‘ಕೆಜಿಎಫ್‌ 2’ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಚಿತ್ರೀಕರಣ ಮುಗಿದು ಬಿಡುಗಡೆ ಆಗುವ ಹೊತ್ತಿಗೆ ತೆಲುಗಿನಲ್ಲಿ ಸಿನಿಮಾ ಶುರುವಾಗಲಿದೆ.

ಅಬ್ಬಾ...! ರೋರಿಂಗ್ ಸ್ಟಾರ್ ಶೇಷಾದ್ರಿಪುರಂ ಕಾಲೇಜ್ ಲವ್ ಸ್ಟೋರಿ ಕೇಳಿದ್ದೀರಾ ?

ಈ ಎರಡೂ ಚಿತ್ರಗಳನ್ನು ಮುಗಿಸುವ ಹೊತ್ತಿಗೆ ನಾನು ‘ಮದಗಜ’ ಚಿತ್ರ ಮುಗಿಸಲಿದ್ದೇನೆ. ಇದು ಮುಗಿದ ಕೂಡಲೇ ನನ್ನ ಮತ್ತು ಪ್ರಶಾಂತ್‌ ನೀಲ್‌ ಅವರ ಕಾಂಬಿನೇಷನ್‌ನಲ್ಲಿ ‘ಉಗ್ರಂ 2’ ಸಿನಿಮಾ ಸೆಟ್ಟೇರುವುದು ಪಕ್ಕಾ. ಯಾಕೆಂದರೆ ನಮಗೆ ಹೊಸ ಹೆಸರು ಕೊಟ್ಟಚಿತ್ರದ ಮುಂದುವರಿದ ಕತೆ. ಹೀಗಾಗಿ ಈ ಚಿತ್ರವನ್ನು ನಾವು ಯಾವ ಕಾರಣಕ್ಕೂ ಬಿಡಲ್ಲ...’

ಅಂದಹಾಗೆ ‘ಕೆಜಿಎಫ್‌ 2’ ಮುಗಿಸಿದ ಮೇಲೆ ನಿರ್ದೇಶಕ ಪ್ರಶಾಂತ್‌ ನೀಲ್‌ ಅವರ ನಿರ್ದೇಶನದಲ್ಲಿ ತೆಲುಗಿನ ಯಾವ ಸ್ಟಾರ್‌ ನಟಿಸಲಿದ್ದಾರೆ ಎಂಬುದಕ್ಕೆ ಈಗಾಗಲೇ ಇಬ್ಬರು ಹೆಸರು ಗಟ್ಟಿಯಾಗಿ ಕೇಳಿ ಬರುತ್ತಿದೆ. ಜ್ಯೂ.ಎನ್‌ಟಿಆರ್‌ ಹಾಗೂ ಪ್ರಿನ್ಸ್‌ ಮಹೇಶ್‌ ಬಾಬು. ಈ ಇಬ್ಬರ ಪೈಕಿ ಜ್ಯೂ.ಎನ್‌ಟಿಆರ್‌ ರಾಜ್‌ಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಹೆಸರಿನ ಚಿತ್ರಕ್ಕೆ ಬುಕ್‌ ಆಗಿದ್ದರೆ, ಮಹೇಶ್‌ ಬಾಬು ‘ಸರಿಲೇರು ನಿಕ್ಕೇವ್ವರು’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.

'ಭರಾಟೆ' ಅಚ್ಚರಿಗಳ ಮೂಟೆ; ಚಿತ್ರವನ್ನು ಯಾಕೆ ನೋಡಬೇಕು?

ಈ ಇಬ್ಬರಲ್ಲಿ ಒಬ್ಬರು ಪ್ರಶಾಂತ್‌ ನೀಲ್‌ ಚಿತ್ರದಲ್ಲಿ ನಟಿಸುವುದು ಗ್ಯಾರಂಟಿ ಆಗಿದ್ದು, ಮಹೇಶ್‌ ಬಾಬು ಅವರ ಹೆಸರೇ ಬಹುತೇಕ ಅಂತಿಮವಾಗಲಿದೆ ಎನ್ನುವುದು ಲೇಟೆಸ್ಟ್‌ ನ್ಯೂಸ್‌. ಆದರೆ, ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ಮೈತ್ರಿ ಮೂವೀ ಮೇಕರ್ಸ್‌ ಅವರೇ ಯಾರು ಹೀರೋ ಎಂಬುದನ್ನು ಆಯ್ಕೆ ಮಾಡಲಿದ್ದಾರೆಂಬುದು ಮತ್ತೊಂದು ಮೂಲದ ಸುದ್ದಿ. ಒಟ್ಟಿನಲ್ಲಿ ಒಂದೆರಡು ಚಿತ್ರಗಳ ನಂತರ ಬಾವ ಬಾಮೈದನ ಕಾಂಬಿನೇಷನ್‌ನಲ್ಲಿ ‘ಉಗ್ರಂ 2’ ಟೇಕಾಫ್‌ ಆಗೋದು ಖಚಿತ.