ಸ್ಯಾಂಡಲ್‌ವುಡ್ ರೋರಿಂಗ್ ಸ್ಟಾರ್ ಶ್ರೀಮುರಳಿ ಯಾರೇ ಮಾತನಾಡಿಸಿದರು ಅವರಿಗೆ ಪ್ರೀತಿ ಹಾಗೂ ಗೌರವದಿಂದ ಕಂದ, ಚಿನ್ನ, ಅಪ್ಪಿ ಎಂದು ಮಾತನಾಡಿಸುತ್ತಾರೆ. ಬಟ್ ರಿಯಲ್ ಲೈಫ್‌ನಲ್ಲಿ ಇವರ ಪ್ರೀತಿ ಹೇಗೆ ಎಂದು ತಿಳಿದುಕೊಳ್ಳಲು ಕಾಯುತ್ತಿದ್ದವರಿಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ರಿವೀಲ್ ಆಗಿದೆ.

ಮುರುಳಿಗೆ ಓದಿನ ಕಡೆ ಒಲವು ಕಡಿಮೆ. ಏನಪ್ಪಾ ಇದು ದ್ವಿತೀಯ ಪಿಯುಸಿಗೆ ಹೋಗುತ್ತಿದ್ದಾರೆ, ಯಾವ ಹುಡುಗಿನೂ ಲೈಫ್‌ನಲ್ಲಿ ಇಲ್ವಾ ಎಂದು ಯೋಚನೆ ಮಾಡುವಾಗ ಪಿಂಕ್ ಆ್ಯಂಡ್ ವೈಟ್ ಡ್ರೆಸ್ ಧರಿಸಿ ಮೆಟ್ಟಿಲಿಳಿದು ಬಂದ ಹುಡುಗಿ ವಿದ್ಯಾ.

ಶ್ರೀಮುರಳಿ ಕಷ್ಟಕ್ಕೆ ಕೈ ಹಿಡಿದ ದರ್ಶನ್!

ಏನಾದ್ರೂ ಮಾಡಿ ಮಾತನಾಡಿಸಬೇಕು ಎಂದು ಕ್ಯಾಂಟೀನ್‌ಗೆ ಹೋದ್ರೂ ಧಿಮಾಕ್ ಮಾಡಿಕೊಂಡು ಮಾತನಾಡದ ವಿದ್ಯಾ ನೋಡಿ ಮುರುಳಿಗೆ ಫುಲ್ ಕೋಪ ಬಂದಿತ್ತು. ಈ ಕಾರಣ ಇಟ್ಟುಕೊಂಡು ಕಾಲೇಜ್ ಪೂರ್ತಿ ತಾವು ವಿದ್ಯಾಳನ್ನು ಪ್ರೀತಿಸುತ್ತಿರುವುದಾಗಿ ಹೇಳಿಕೊಂಡು ಬಂದಿದ್ದರು.

ಒಂದು ದಿನ ಮನಸ್ಸು ಮಾಡಿ ವಿದ್ಯಾ ಮನೆ ಬಳಿ ಹೋಗಿ ನೇರವಾಗಿ ’ನನ್ನನ್ನು ಮದುವೆಯಾಗ್ತೀಯಾ’ ಎಂದು ಕೇಳಿಕೊಂಡಾಗ ವಿದ್ಯಾ ಮುರುಳಿಗೆ ಒಂದು ಕಂಡಿಶನ್ ಹಾಕಿದರು. ಅದು ಏನು ಗೊತ್ತಾ?

ವಿನಯಾ ಪ್ರಸಾದ್ 7 ವರ್ಷದ ಸಂಸಾರಕ್ಕೆ ಅಸಮಾಧಾನ ತಂದದ್ದು ಇದೊಂದೇ ವಿಚಾರ!

ಡಿಸೆಂಬರ್ 30, 1999 ರಲ್ಲಿ ವಿದ್ಯಾ ಮನೆಯ ಬಳಿ ಹೋಗಿ ಮುರಳಿ ಕೇಳಿದ್ದಕ್ಕೆ ವಿದ್ಯಾ ಜನವರಿ 1 ಅಂದರೆ ನ್ಯೂ ಇಯರ್ ಕ್ಷಣಗಳು ಹತ್ತಿರ ಇರುವಾಗ ಕೆಲವೇ ಕ್ಷಣಗಳು ಇದ್ದಾಗ ಕರೆ ಮಾಡು ಎಂದು ಹೇಳಿದರು. ಶಾರ್ಪ್ ಟೈಂಗೆ ಕಾಲ್ ಮಾಡಿದಾಗ ರೋರಿಂಗ್ ಸ್ಟಾರ್ ಲವ್‌ಗೆ ವಿದ್ಯಾ ಗ್ರೀನ್ ಸಿಗ್ನಲ್ ಕೊಟ್ಟರು.

ಇನ್ನು ತನ್ನ ಹುಡುಗಿ ಮೇಲೆ ಯಾರೂ ಕಣ್ಣಾಕಬಾರದೆಂದು ಬ್ರೇಕ್ ಟೈಂನಲ್ಲಿ ವಿದ್ಯಾ ಕೈ ಹಿಡಿದು ಕಾಲೇಜು ಸುತ್ತುತ್ತಿದ್ದರು. ಅಷ್ಟೇ ಅಲ್ಲದೇ ಕಾಲೇಜಿನ ಹೊರ ಭಾಗದಲ್ಲಿದ್ದ ಮರದ ಮೇಲೆ ಮುರುಳಿ ಕುಳಿತುಕೊಂಡರೆ ವಿದ್ಯಾ ಮುರುಳಿ ಹೇಳುವವರೆಗೂ ಎಲ್ಲೂ ಹೋಗುವಂತಿರಲ್ಲ.

'ನಾನು ಮಾಡಿದ ದೊಡ್ಡ ತಪ್ಪಿದು': ಪ್ರಕಾಶ್ ಬೆಳವಾಡಿ