6 ವರ್ಷಗಳ ನಂತರ ಮಗಳ ಫೋಟೋ ರಿವೀಲ್ ಮಾಡಿದ ನಟ Sathish Ninasam!

ಸಂಕ್ರಾಂತಿ ಹಬ್ಬದ ಪ್ರಯುಕ್ತ ಮಗಳ ಪೋಟೋ ಹಂಚಿಕೊಂಡ ನಟ ಸತೀಶ್, 6 ವರ್ಷಕ್ಕೆ ಕಾಲಿಡುತ್ತಿರುವ ಮನಸ್ವಿತಾ. 

Kannada actor Sathish Ninasam reveals daughter Manasvitha photo vcs

ಸ್ಯಾಂಡಲ್‌ವುಡ್ (Sandalwood) ಸರಳ ಸಜ್ಜನ ನಟ ಸತೀಶ್ ನೀನಾಸಂ (Sathish Ninasam) ಬ್ಯಾಕ್ ಟು ಬ್ಯಾಕ್ ಸಿನಿಮಾ ಪ್ರಾಜೆಕ್ಟ್‌ಗಳನ್ನು ಒಪ್ಪಿಕೊಂಡು ಬ್ಯುಸಿಯಾಗಿದ್ದಾರೆ. ಸಿನಿಮಾ ವಿಚಾರಗಳನ್ನು ಹಂಚಿಕೊಳ್ಳುವ ನಟ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಏನೂ ರಿವೀಲ್ ಮಾಡಿರಲಿಲ್ಲ. ಆದರೆ ಮಗಳಿಗೆ 6 ವರ್ಷ ತುಂಬುತ್ತಿದ್ದಂತೆ ಮೊದಲು ಕ್ಲಿಕ್ ಮಾಡಿದ ಫೋಟೋವನ್ನು ಹಂಚಿಕೊಂಡಿದ್ದಾರೆ. 

'ನಿಮಗೆಲ್ಲ ಸಂಕ್ರಾಂತಿ (Makara Sankranti) ಶುಭಾಶಯ ಕೋರುತ್ತಿದ್ದಾಳೆ ನನ್ನ ಮಗಳು ಮನಸ್ವಿತ (Manasvitha). ಇದು ಸಾಮಾಜಿಕ ಜಾಲತಾಣದಲ್ಲಿ (Social Media) ಹಾಕುತ್ತಿರುವ ಅವಳ ಮೊದಲ ಚಿತ್ರ. ಅವಳ ಪ್ರೈವೆಸಿಯ ಕಾರಣದಿಂದ ಇದುವರೆಗೂ ನಮ್ಮ ಕುಟುಂಬದ ಯಾವ ಚಿತ್ರಗಳನ್ನು ಹಂಚಿಕೊಂಡಿಲ್ಲ. ಅಭಿಮಾನಿಗಳು ಮತ್ತು ಸ್ನೇಹಿತರು ನನ್ನ ಮಗಳ ಚಿತ್ರ ಹಂಚಿಕೊಳ್ಳುವಂತೆ ಕೇಳಿಕೊಂಡ ಕಾರಣ ಈ ಚಿತ್ರ ಹಾಕುತ್ತಿರುವೆ' ಎಂದು ಸತೀಶ್ ಟ್ವೀಟ್ ಮಾಡಿದ್ದಾರೆ. 

ಪೆಟ್ರೋಮ್ಯಾಕ್ಸ್ ಟ್ರೈಲರ್ ಸಖತ್ ವೈರಲ್!

ಸತೀಶ್ ಅವರ ಮಗಳು ಮನಸ್ವಿತಗೆ ಈಗ 5 ವರ್ಷ ತುಂಬಿ 6 ವರ್ಷಕ್ಕೆ ಕಾಲಿಟ್ಟಿದ್ದಾಳೆ. ಸತೀಶ್ ಹಂಚಿಕೊಂಡಿರುವುದು ಆಕೆ ಮೊದಲ ವರ್ಷದ ಫೋಟೋ ಎನ್ನಲಾಗಿದೆ. ಸುಪ್ರೀತಾ (Supritha) ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಾಗಲ್ಲೂ ಎಲ್ಲಿಯೂ  ಹಂಚಿಕೊಂಡಿರಲಿಲ್ಲ, ಮಗಳು ಹುಟ್ಟಿದ ದಿನವೇ ಅವರ ಮದುವೆ (Marriage) ವಿಚಾರ ದೊಡ್ಡ ಸುದ್ದಿ ಆಗಿತ್ತು. ಪ್ರೈವೆಸಿಯ ಕಾರಣ ಯಾವ ಮಾಹಿತಿಯನ್ನು ಹಂಚಿಕೊಂಡಿರಲಿಲ್ಲ. 

 

ಸತೀಶ್ ಮಗಳ ಫೋಟೋ ನೋಡಿ ಅಭಿಮಾನಿಗಳು ಸಂತಸ ಪಟ್ಟಿದ್ದಾರೆ. ಕೆಲವರು ಇಡೀ ಫ್ಯಾಮಿಲಿ ಫೋಟೋ (Family Photo) ಹಂಚಿಕೊಳ್ಳಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. 

ಚಿತ್ರರಂಗದಲ್ಲಿ ಎರಡು ರೀತಿಯ ಮಂದಿ ಇದ್ದಾರೆ. ಒಬ್ಬರು ಎಲ್ಲಾ ವಿಚಾರಗಳ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವವರು. ಮತ್ತೊಬ್ಬರು ಸಿನಿಮಾ ವಿಚಾರಕ್ಕೆ ಮಾತ್ರ ಪ್ರಚಾರ ಸಿಗಲಿ ಜೀವನದಲ್ಲಿ ಪ್ರೈವೆಸಿ ಸಿಗಲಿ ಎನ್ನುವವರು. ನಟಿ ಅನುಷ್ಕಾ ಶರ್ಮಾ (Anushka Sharma) ಮತ್ತು ವಿರಾಟ್‌ (Virat) ಕೂಡ ಮಗಳಿಗೆ ಒಂದು ವರ್ಷ ತುಂಬಿದ್ದರೂ ಎಲ್ಲಿಯೂ ಫೋಟೋ ಹಂಚಿಕೊಡಿಲ್ಲ. ಪ್ಯಾಪರಾಜಿಗಳು (Paparazi) ಫೋಟೋ ಕ್ಲಿಕ್ ಮಾಡದಂತೆ ಆಗಾಗ ಮನವಿ ಮಾಡಿಕೊಳ್ಳುತ್ತಾರೆ. ಮಕ್ಕಳು ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆಳೆಯಬೇಕು ಎನ್ನುವ ಉದ್ದೇಶ ಪೋಷಕರದ್ದು. 

'ಅಯೋಗ್ಯ' ಚಿತ್ರದ ಈ ಹಾಡು ಫಾಲೋ ಮಾಡಿದ್ರೆ ಪಕ್ಕಾ ಪೊಲೀಸ್ ಕೇಸ್ ಆಗುತ್ತೆ: ನಟಿ ರಮ್ಯಾ

ಬ್ರಹ್ಮಚಾರಿ (Brahmachari) ಸಿನಿಮಾ ನಂತರ ಸತೀಶ್ ಯಾವ ಸಿನಿಮಾನೂ ರಿಲೀಸ್ ಆಗಿಲ್ಲ. ಅದಿತಿ ಪ್ರಭುದೇವ (Aditi Prabhudeva) ಜೊತೆ ಈ ಚಿತ್ರದಲ್ಲಿ ರೊಮ್ಯಾನ್ಸ್‌ ಮಾಡಿದ್ದು ದೊಡ್ಡ ಹಿಟ್ ಆಗಿತ್ತು. 2020 ಮತ್ತು 2021ರಲ್ಲಿ ಸತೀಶ್ ಸಿನಿಮಾ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಪೋಸ್ಟರ್ ಲುಕ್ ಮತ್ತು ಟೀಸರ್‌ ಸಿಕಿತ್ತು. ಅವರ ನಟನೆಯ ಪೆಟ್ರೋಮ್ಯಾಕ್ಟ್‌ (Petromax), ಗೋದ್ರಾ (Godra), ದಸರಾ (Dasara) ಮತ್ತು ತಮಿಳು ಸಿನಿಮಾ ಪಗೈವನುಕು ಅರುಳ್ವೈ ಶೂಟಿಂಗ್ ಮುಗಿಸಿದ್ದಾರೆ. 2022ರಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡಬೇಕಿದ್ದ ತಂಡಕ್ಕೆ ಮತ್ತೆ ಕೊರೋನಾ ಕಾಟ ಶುರುವಾಗಿದೆ.

Latest Videos
Follow Us:
Download App:
  • android
  • ios