'ಅಯೋಗ್ಯ' ಚಿತ್ರದ ಈ ಹಾಡು ಫಾಲೋ ಮಾಡಿದ್ರೆ ಪಕ್ಕಾ ಪೊಲೀಸ್ ಕೇಸ್ ಆಗುತ್ತೆ: ನಟಿ ರಮ್ಯಾ
ಅಯೋಗ್ಯ ಚಿತ್ರದ ಈ ಹಾಡಿಗೆ ನಟಿ ರಮ್ಯಾ ಫಿದಾ. ಫ್ಲೀಸ್ ಸೀರಿಯಸ್ ಆಗಿ ಫಾಲೋ ಮಾಡಬೇಡಿ ಎಂದು ನೆಟ್ಟಿಗರಿಗೆ ಸಲಹೆ
ಕನ್ನಡ ಚಿತ್ರರಂಗದ ಮೋಹಕ ತಾರೆ ರಮ್ಯಾ ಇದೀಗ ನೀನಾಸಂ ಸತೀಶ್ ಮತ್ತು ರಚಿತಾ ರಾಮ್ ಅಭಿನಯದ 'ಅಯೋಗ್ಯ' ಚಿತ್ರದ ಈ ಒಂದು ಹಾಡಿಗೆ ಫಿದಾ ಆಗಿದ್ದಾರೆ. ಹಾಡು ಶೇರ್ ಮಾಡಿಕೊಂಡು ರಮ್ಯಾ ಪಡ್ಡೆ ಹುಡುಗರಿಗೆ ಒಂದು ಸಲಹೆ ಕೊಟ್ಟಿದ್ದಾರೆ.
ಪದೇ ಪದೇ ಸ್ಯಾಂಡಲ್‌ವುಡ್ ಪದ್ಮಾವತಿಗೆ ಕಾಡುತ್ತಿದೆ ಅದೇ ಪ್ರಶ್ನೆ!
ರಮ್ಯಾ ಶೇರ್ ಮಾಡಿಕೊಂಡಿರುವ ವಿಡಿಯೋ 'ಹಿಂದೆ ಹಿಂದೆ ಹಿಂದೆ ಹೋಗು ಮಕ್ ಉಗುದ್ರು ಹಿಂದೆ ಹೋಗು..' ಹಾಡು. ಪಕ್ಕಾ ಮಂಡ್ಯ ಶೈಲಿಯ ಹಾಡು. 'ಸತೀಶ್ ನೀನಾಸಂ ಮತ್ತು ರಚಿತಾ ರಾಮ್‌ಗೆ ಆಲ್ ದಿ ಬೆಸ್ಟ್. ದಯವಿಟ್ಟು ಈ ಹಾಡಿನ ಸಾಲುಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ನಿಮಗೆ ಹುಡುಗಿ ಸಿಗುವುದಿಲ್ಲ ಸಿಗೋದು ಸೆಕ್ಷನ್ 294/509,' ಎಂದು ತಮಾಷೆ ಮಾಡಿದ್ದಾರೆ.
2018ರಲ್ಲಿ ಬಿಡುಗಡೆಯಾದ ಅಯೋಗ್ಯ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಕಂಡಿತ್ತು. 2019ರಲ್ಲಿ ಫಿಲ್ಮಫೇರ್ ಬೆಸ್ ಸಿನಿಮಾ ಪ್ರಶಸ್ತಿ ಪಡೆದಿದೆ. ನಟ ನೀನಾಸಂ ಸತೀಶ್ ಫಿಲ್ಮಫೇರ್ ಬೆಸ್ಟ್ ನಟ ಪ್ರಶಸ್ತಿ ಪಡೆದಿದ್ದರು. ಹಾಗೂ ನಟಿ ರಚಿತಾ ರಾಮ್ ಈ ಚಿತ್ರಕ್ಕೆ ಸೈಮಾ ಬೆಸ್ಟ್ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಈಗಲೂ ಟಿವಿಯಲ್ಲಿ ಸಿನಿಮಾ ಪ್ರಸಾರವಾದರೆ ಅತಿ ಹೆಚ್ಚಿನ ವೀಕ್ಷಣೆ ಪಡೆದುಕೊಂಡ ಸಿನಿಮಾ ಲಿಸ್ಟ್‌ಗೆ ಈ ಚಿತ್ರ ಸೇರುತ್ತದೆ.
ರಮ್ಯಾ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವುದಕ್ಕೆ ನೆಟ್ಟಿಗರು ಸಂತಸ ವ್ಯಕ್ತ ಪಡಿಸಿದ್ದಾರೆ. ನೆಟ್ಟಿಗರಿಗೆ ಉತ್ತರ ನೀಡುವುದಲ್ಲದೆ, ಹೊಸ ಕಲಾವಿದರ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡಿ, ಶೇರ್ ಮಾಡಿಕೊಂಡು ಶುಭ ಹಾರೈಸುತ್ತಾರೆ.