Asianet Suvarna News Asianet Suvarna News

ಅಪ್ಪನ ರೀತಿ ಯೋಗ ಮಾಡಬೇಕು ಅಂತಿದ್ದರು;ದೇಹವನ್ನು ಫ್ಲೆಕ್ಸಿಬಲ್‌ ಆಗಿಸಲು ಶ್ರಮಿಸುತ್ತಿದ್ದರು Puneeth Rajkumar!

- ಹಿಮಾಲಯಕ್ಕೆ ಹೋಗಿ ಫೋಟೋಗ್ರಫಿ ಮಾಡುವ ಒಲವು ಪುನೀತ್‌ಗೆ ಇತ್ತು

- ಅಕ್ಷರಯೋಗ ಫೌಂಡೇಶನ್‌

- ದೊಡ್ಡಸ್ತಿಕೆ ಇಲ್ಲದ ಬಹಳ ವಿನಮ್ರ ವ್ಯಕ್ತಿ ಪುನೀತ್‌ ರಾಜಕುಮಾರ್‌

Kannada actor Puneeth Rajkumar love for a healthy body says Yoga gym trainer vcs
Author
Bangalore, First Published Oct 30, 2021, 10:48 AM IST

ಅಕ್ಷರನಾಥ್‌ ಜೀ

ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮ ಮಿತ್ರರು, ವಿದ್ಯಾರ್ಥಿ. ಅವರು ಮಾತ್ರ ಅಲ್ಲ ಅವರ ಇಡೀ ಕುಟುಂಬದವರು ನಮ್ಮ ಯೋಗ ಶಾಲೆಗೆ ಆರೇಳು ವರ್ಷಗಳಿಂದ ಬರುತ್ತಿದ್ದರು. ನಮ್ಮ ಯೋಗ ಸ್ಕೂಲ್‌ನ ಎಲ್ಲ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದರು. ವಿಶೇಷ ತರಬೇತಿಗಳಲ್ಲೂ ಪಾಲ್ಗೊಳ್ಳುತ್ತಿದ್ದರು.

ಮತ್ತೊಮ್ಮೆ ವೈರಲ್ ಆಯ್ತು ಪುನೀತ್ ರಾಜ್‌ಕುಮಾರ್ ವರ್ಕೌಟ್ ವಿಡಿಯೋ!

ಯೋಗ ತರಗತಿಯ ಬಳಿಕ ನಾವಿಬ್ಬರೂ ಕೂತು ಸಾಕಷ್ಟುಹೊತ್ತು ಮಾತನಾಡುತ್ತಿದ್ದೆವು. ಅದರಲ್ಲಿ ಯೋಗದ ಬಗೆಗಿನ ಚರ್ಚೆಗಳು, ಯೋಗ ಸಾಧನೆಗಳ ಬಗೆಗೆಲ್ಲ ಮಾತುಕತೆ ನಡೆಯುತ್ತಿತ್ತು. ಅವರಿಗೆ ಹಿಮಾಲಯಕ್ಕೆ ಹೋಗಬೇಕು, ಅಲ್ಲಿ ಯೋಗ ಸಾಧನೆ ಮಾಡಬೇಕು ಅನ್ನುವ ಆಸೆ ಇತ್ತು. ನಮ್ಮ ಟೀಮ್‌ ಜೊತೆಗೆ ಒಮ್ಮೆ ಹಿಮಾಲಯಕ್ಕೆ ಹೋಗಬೇಕು, ಅಲ್ಲಿಯ ನಿಸರ್ಗ ಸೌಂದರ್ಯವನ್ನು ಸವಿಯಬೇಕು, ಫೋಟೋಗ್ರಫಿ ಮಾಡಬೇಕು ಎಂದು ಹೇಳುತ್ತಿದ್ದರು.

"

Kannada actor Puneeth Rajkumar love for a healthy body says Yoga gym trainer vcs

ಅವರಿಗೆ ತಮ್ಮ ದೇಹ ಫ್ಲೆಕ್ಸಿಬಲ್‌ ಆಗಬೇಕು ಅನ್ನುವ ತುಡಿತ ಇತ್ತು. ಅದಕ್ಕಾಗಿ ಬಹಳ ಎಫರ್ಟ್‌ ಹಾಕುತ್ತಿದ್ದರು. ಅವರ ತಂದೆ ಡಾ. ರಾಜ್‌ಕುಮಾರ್‌ ಅವರ ಬಗ್ಗೆ ಸಾಕಷ್ಟುಸಲ ನನ್ನ ಬಳಿ ಅನೇಕ ವಿಚಾರ ಹಂಚಿಕೊಂಡಿದ್ದರು. ತಂದೆಯವರು ಹೇಗೆ ಯೋಗ ಮಾಡುತ್ತಿದ್ದರು, ಅವರ ಯೋಗ ಸಾಧನೆ ಎಂಥಾದ್ದು, ಅವರ ಮೈಕಟ್ಟು ಹೇಗಿತ್ತು ಅಂತೆಲ್ಲ ವಿವರಿಸುತ್ತಿದ್ದರು. ಅವರು ಹಾಗೆ ಹೇಳಿದ ಕೊನೆಯಲ್ಲಿ ಹೇಳುತ್ತಿದ್ದ ಮಾತು ಅಂದರೆ- ನಾನೂ ಅಪ್ಪನ ಥರವೇ ಯೋಗ ಮಾಡಬೇಕು ಅಂತ. ಇದೀಗ ಅವರು ನಮ್ಮನ್ನು ಅಗಲಿರುವುದು ಬಹಳ ನೋವು ತಂದಿದೆ.

Kannada actor Puneeth Rajkumar love for a healthy body says Yoga gym trainer vcs

ರವಿ ನಾಯ್‌್ಕ, ಸಹ ಯೋಗಪಟು

ನನಗೆ ಪುನೀತ್‌ ಅವರು ಬಹಳ ವರ್ಷಗಳಿಂದ ಪರಿಚಯ. ಅಂಥ ದೊಡ್ಡ ನಟನಾದರೂ ಬಹಳ ಹಂಬಲ್‌ ಆಗಿರುತ್ತಿದ್ದ ವ್ಯಕ್ತಿ. ಯೋಗ ಕೇಂದ್ರದ ಇತರ ವಿದ್ಯಾರ್ಥಿಗಳಂತೆ ಆರಾಮವಾಗಿ, ಯಾವ ದೊಡ್ಡಸ್ತಿಕೆಗಳೂ ಇಲ್ಲದೆ ಇರುತ್ತಿದ್ದರು. ಅವರು ನನ್ನ ಬಳಿ ಸದಾ ಕೇಳುತ್ತಿದ್ದ ಮಾತು- ‘ಸರ್‌, ನಿಮ್ಮ ದೇಹ ಅಷ್ಟುಫ್ಲೆಕ್ಸಿಬಲ್‌ ಆಗಿದೆಯಲ್ಲಾ, ಇದು ಹೇಗೆ ಸಾಧ್ಯ ಆಯ್ತು?’ ಅಂತ. ‘ನನ್ನ ದೇಹ ಪ್ರಕೃತಿ ಹಾಗಿದೆ, ಚಿಕ್ಕ ವಯಸ್ಸಿಂದಲೇ ನನ್ನ ದೇಹ ಫ್ಲೆಕ್ಸಿಬಲ್‌ ಆಗಿದೆ’ ಅನ್ನುತ್ತಿದ್ದೆ. ಅವರ ದೇಹ ಸ್ಟಿಫ್‌ ಆಗಿರುತ್ತಿತ್ತು. ದೇಹವನ್ನು ಫ್ಲೆಕ್ಸಿಬಲ್‌ ಆಗಿಸಬೇಕು ಅಂತ ಬಹಳ ಶ್ರಮ ಹಾಕುತ್ತಿದ್ದರು.

ಯುವಜನತೆ ಕಾಡುತ್ತಿರುವ ಹೃದಯಾಘಾತಕ್ಕೆ 13 ಕಾರಣ.. ಇದರಿಂದ ದೂರ ಇರಿ

ನಾವು ವರ್ಷಾನುಗಟ್ಟಲೆ ಸುಮಾರು 1 ಗಂಟೆಗಳ ಕಾಲ ಪವರ್‌ ಯೋಗ ಅಭ್ಯಾಸ ಮಾಡುತ್ತಿದ್ದೆವು. ಇದರಲ್ಲಿ ಸೂರ್ಯ ನಮಸ್ಕಾರ, ಚಂದ್ರ ನಮಸ್ಕಾರಗಳಿಂದ ಹಿಡಿದು ಅನೇಕ ಯೋಗಪಟ್ಟುಗಳನ್ನು ಅಭ್ಯಾಸ ಮಾಡುತ್ತಿದ್ದೆವು. ಇದಲ್ಲದೆ ನಾವು ಜೊತೆಯಾಗಿ ಬ್ಯಾಡ್ಮಿಂಟನ್‌ ಆಡುತ್ತಿದ್ದೆವು. ಉತ್ಸಾಹದ ಚಿಲುಮೆಯಂತಿದ್ದ ವ್ಯಕ್ತಿ ಪುನೀತ್‌.

 

Follow Us:
Download App:
  • android
  • ios