ಯುವಜನತೆ ಕಾಡುತ್ತಿರುವ ಹೃದಯಾಘಾತಕ್ಕೆ 13 ಕಾರಣ.. ಇದರಿಂದ ದೂರ ಇರಿ

* ಹೃದಯಾಘಾತಕ್ಕೆ ತುತ್ತಾಗುತ್ತಿರುವ ಯುವಜನತೆ
* ಮಿತಿಮೀರಿದ ವ್ಯಾಯಾಮ ಸಲ್ಲ
* ಕೊರೋನಾದಿಂದ ಬದಲಾದ ಜೀವನ ಶೈಲಿ
* ಸಾವಿಗೆ ಕಾರಣವಾಗಬಲ್ಲದು ಮಾದಕ ವಸ್ತುಗಳು

Reason for sudden Heart attack in young people and Coronavirus mah

ಬೆಂಗಳೂರು(ಅ. 30)  ಚಿರಂಜೀವಿ  ಸರ್ಜಾ(Chiranjeevi Sarja),  ಸಿದ್ಧಾರ್ಥ ಶುಕ್ಲಾ ಇದೀಗ ಪುನೀತ್ ರಾಜ್ ಕುಮಾರ್(Puneeth Rajkumar) ಅವರನ್ನು ಹೃದಯಾಘಾತದಿಂದ ಕಳೆದುಕೊಂಡಿದ್ದೇವೆ. ಹಾಗಾದರೆ ಯುವ ಜನತೆ ಹೃದಯಾಘಾತಕ್ಕೆ(Heart Attack) ತುತ್ತಾಗುತ್ತಿರುವ ಕಾರಣಗಳು ಏನು? ಮಹತ್ವದ ವಿಚಾರದ ಬಗ್ಗೆ ಅರಿವು ಬೆಳೆಸಿಕೊಳ್ಳಲೇಬೇಕಿದೆ. 

ಇದನ್ನು ಕಾಕತಾಳೀಯ ಎಂದು ಕರೆಯಲು ಸಾಧ್ಯವಿಲ್ಲ ಎನ್ನುವ ಡಾ. ಜಗದೀಶ್ ಚತುರ್ವೇದಿ ವಿವರಣೆ ನೀಡುತ್ತ ಹೋಗುತ್ತಾರೆ.  ಕೊರೋನಾ (Coronavirus) ಕಾರಣಕ್ಕೆ ನಮ್ಮ ಜೀವನ ಶೈಲಿಯೇ ಬದಲಾಗಿ ಹೋಗಿದೆ. ಜಿಮ್ ಗಳು ಕ್ಲೋಸ್ ಆಗಿದ್ದವು. ಕೆಲವು ಸಲಹೆಗಳನ್ನು ನೀಡುತ್ತ ಹೋಗುತ್ತಾರೆ.  

ಕೊರೋನಾ ಮತ್ತು ಹೃದಯ ತೊಂದರೆ;   ಕೊರೋನಾದಿಂದ ತೊಂದರೆಗೆ ಒಳಗಾದವರಿಗೆ  subclinical myocarditis ತೊಂದರೆ  ಕಾಣಿಸಿಕೊಳ್ಳುವ ಸಾಧ್ಯತೆ ಇದೆ. 
subclinical myocarditis ಅಂದರೆ ಯಾವುದೇ ಸೂಚನೆಗಳನ್ನು ನೀಡದೆ ಎದುರಾಗುವ ಹೃದಯ ಸ್ತಂಭನ . ಕೊರೋನಾ ವೈರಸ್ ದೇಹದ ರೋಗ ನಿರೋಧಕ ಶಕ್ತಿಯನ್ನು ಅರ್ಧ ತಿಂದಿರುತ್ತದೆ.  ಕೊರೋನಾ ಸೋಂಕಿಗೆ ಒಳಗಾದವರು ಎಚ್ಚರಿಕೆ ತೆಗೆದುಕೊಳ್ಳುವುದು ಅಗತ್ಯ ಎನ್ನುತ್ತಾರೆ.

ನಿರ್ಲಕ್ಷ್ಯ ಬೇಡ: ಯುವಕರೇ ಹೃದಯದ ಕಡೆ ಗಮನ ಹರಿಸಿ..!

ಜಿಮ್ ಮತ್ತು ವ್ಯಾಯಾಮ; ಕೊರೋನಾ ಕಾರಣಕ್ಕೆ ಬಂದ್ ಆಗಿದ್ದ ಜಿಮ್ ಗಳು ಈಗ ತೆರೆದುಕೊಂಡಿವೆ. ತೆರೆದುಕೊಂಡಿದೆ ಎಂಬ ಮಾತ್ರಕ್ಕೆ ಏಕಾಏಕಿ  ಜಿಮ್ ಕಡೆ ಓಡಬೇಡಿ. ಮಿತಿಮೀರಿದ ವ್ಯಾಯಾಮ ಮಾಡುವ ದುಸ್ಸಾಹಸ ಮಾಡಬೇಡಿ. ಒಂದು ಸ್ವಲ್ಪ ನಡೆದರೆ.. ಅಥವಾ ಕೊಂಚ ಆಟವಾಡಿದರೆ  ಹಿಂದಿಗಿಥ ಜಾಸ್ತಿ ಸುಸ್ತು ಕಾಣಿಸಿಕೊಳ್ಳುತ್ತಿದ್ದರೆ ಕೂಡಲೇ ಹೃದಯ ತಜ್ಞರನ್ನು ಭೇಟಿ ಮಾಡುವುದು ಉತ್ತಮ ಎನ್ನುತ್ತಾರೆ.

ಎದೆನೋವು  ಮತ್ತು ಸಾಧ್ಯತೆ: ಹಲವಾರು ಕಾರಣಗಳಿಂದ ಎದೆಯಲ್ಲಿ ನೋವು ಕಾಣಿಸಿಕೊಳ್ಳಬಹುದು. ಆಸಿಡಿಟಿ ಮತ್ತು ಜೀರ್ಣಾಂಗದಲ್ಲಿ ತೊಂದರೆ ಇದ್ದಾಗಲೂ ಕಾಣಿಸಿಕೊಳ್ಳಬಹುದು. ಆದರೆ  ಮೇಲಿಂದ ಮೇಲೆ  ಕಾಡುತ್ತಿದೆ. ಮೈ ಆಗಾಗ  ಕಾರಣವಿಲ್ಲದೆ ಬೆವರುತ್ತಿದೆ ಎಂದಾದರೆ ಕೂಡಲೆ ತಪಾಸಣೆಗೆ ಒಳಗಾಗುವುದು ಉತ್ತಮ

ಮಧುಮೇಹ ಮತ್ತು ಹೃದಯ: ಬೆಂಗಳೂರಿನಲ್ಲಿ(Bengaluru) ಮಧುಮೇಹಿಗಳ (Diabetes)ಸಂಖ್ಯೆ ವಿಪರೀತವಾಗಿದೆ.  ಇದು ಸಹ ಹೃದಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಜಯದೇವ ಆಸ್ಪತ್ರೆಯ ಡಾ. ಮಂಜುನಾಥ್ (DR. CN Manjunath)ಹೇಳುತ್ತಾರೆ.

ಮಾದಕ ವಸ್ತುಗಳು; ಮಾದಕ ವಸ್ತುಗಳು (Drugs)ನೇರವಾಗಿ ಹೃದಯ ಮತ್ತು ನರವ್ಯೂಹವನ್ನು ಘಾಸಿಗೊಳಿಸಬಹುದು.. ಗಾಂಜಾ,..ಕೋಕೇನ್ ನಂತಹ ಡ್ರಗ್ಸ್ ಗಳು ಜೀವಕ್ಕೆ ಎರವಾಗಬಲ್ಲದು ಎಂದು ಡಾ. ಮಂಜುನಾಥ್ ಎಚ್ಚರಿಕೆ ನೀಡುತ್ತಾರೆ. 

ಹೃದಯಾಘಾತಕ್ಕೆ ಕಾರಣವಾಗುವ ಕೆಲವು ರಿಸ್ಕ್ ಫ್ಯಾಕ್ಟರ್‍ಗಳು:

1 .ತಂಬಾಕು ಸೇವನೆ/ಧೂಮಪಾನ 
2. ಅಧಿಕ ಕೊಲೆಸ್ಟರಾಲ್
3. ಅಧಿಕ ಎಲ್‍ಡಿಎಲ್ ಕೊಲೆಸ್ಟರಾಲ್
4. ಕಡಿಮೆ ಎಚ್‍ಡಿಎಲ್ ಕೊಲೆಸ್ಟರಾಲ್
5. ಅಧಿಕ ಬ್ಲಡ್ ಷುಗರ್/ಡಯಾಬಿಟಿಸ್ 
6. ಅಧಿಕ ರಕ್ತದೊತ್ತಡ
7. ಅಧಿಕ ತೂಕ
8 ದೈಹಿಕ ಶ್ರಮವಿಲ್ಲದ ಜೀವನ 
9 ಐಷಾರಾಮಿ ಅಭ್ಯಾಸಗಳು/ಸೇಡೆಂಟರಿ ಲೈಫ್ ಸ್ಟೈಲ್ 
10 ಉದ್ವೇಗ ಮಾನಸಿಕ, ಉದ್ಯೋಗದ , ನಗರ ಜೀವನದ ಒತ್ತಡಗಳು ಮತ್ತು ಆಯಾಸ
11 ಸಂಸ್ಕರಿಸಿದ ಆಹಾರ/ಅತಿಯಾದ ಜಿಡ್ಡು ಪದಾರ್ಥ ಸೇವನೆ 
12 ಪರಿಸರ  ಮಾಲಿನ್ಯ 
13 ಅನುವಂಶಿಯ ಅಂಶಗಳು

"

 


 

Latest Videos
Follow Us:
Download App:
  • android
  • ios