ಹ್ಯಾಪಿ ಬರ್ತಡೇ ಕಿಚ್ಚ ಸುದೀಪ್; 'ಕೋಟಿಗೊಬ್ಬ' 3 ಟೀಸರ್ ರಿಲೀಸ್!
ಕಿಚ್ಚ ಸುದೀಪ್ ಅವರ 47ನೇ ವರ್ಷದ ಹುಟ್ಟುಹಬ್ಬವನ್ನು ಎಂದಿಗಿಂತ ಭಿನ್ನವಾಗಿ ಆಚರಿಸಲು ಅವರ ಅಭಿಮಾನಿಗಳು ನಿರ್ಧರಿಸಿದ್ದಾರೆ. ಈ ಬಾರಿ ಕೇಕ್, ಕಟೌಟ್, ಹೂವಿನ ಹಾರಗಳ ಭರಾಟೆ ಇಲ್ಲ. ಬದಲಾಗಿ ಸಾಮಾಜಿಕ ಕಾರ್ಯಗಳಿವೆ. ‘ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ’ ವತಿಯಿಂದ ಇಂದು ನಡೆಯುವ ಕಾರ್ಯಕ್ರಮಗಳು ಹೀಗಿವೆ.
1. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಬೆಳಗ್ಗೆ 6 ಗಂಟೆಗೆ ಸುದೀಪ್ ಹೆಸರಿನಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ.
2. ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿರುವ ಒಂದೊಂದು ಅಶ್ರಮಕ್ಕೆ ಒಂದು ತಿಂಗಳಿಗೆ ಆಗುವಷ್ಟುದಿನಸಿ ವಿತರಣೆ.
3. ಕೂಲಿ ಕಾರ್ಮಿಕರಿಗೆ, ಬಡವರಿಗೆ, ನಿರಾಶ್ರಿತರಿಗೆ ಮಾಸ್ಕ್ ವಿತರಣೆ.
5. ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಮಾಸ್ಕ್ ವಿತರಣೆ ಇರುತ್ತದೆ. ಜತೆಗೆ ಬೆಂಗಳೂರಿನ ಗಾಳಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಲಿದೆ.
'ಶಾಂತಿ ನಿವಾಸ' ಹೆಸರಿನಲ್ಲಿ ವೃದ್ಧಾಶ್ರಮ ಆರಂಭಿಸಿದ ಕಿಚ್ಚ ಸುದೀಪ್!
6. ಬೆಂಗಳೂರಿನ ಕೊಡಿಗೆಹಳ್ಳಿಯ ನೈಸ್ ರಸ್ತೆ ಬಳಿ ‘ಕಿಚ್ಚನ ಶಾಂತಿ ನಿವಾಸ’ ವೃದ್ಧಾಶ್ರಮದ ಶಂಕುಸ್ಥಾಪನೆ ನಡೆಯಲಿದೆ. ಸುದೀಪ್ ಪತ್ನಿ ಪ್ರಿಯಾ ಸುದೀಪ್ ಇದನ್ನು ನೆರವೇರಿಸುತ್ತಾರೆ.
7. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳ 47 ಅಶ್ರಮಗಳಿಗೆ ಒಂದು ತಿಂಗಳಿಗೆ ಆಗುವಷ್ಟುಧವಸ ಧಾನ್ಯಗಳನ್ನು ವಿತರಣೆ.
8. ಸಾವು ಬದುಕಿನ ನಡುವೆ ಹೋರಾಡುತ್ತಿರುವ, ನಿರ್ಗತಿಕ ಹಿರಿಯ ಜೀವಗಳ ಬದುಕಿಗೆ ಬೆಳಕಾಗಿರುವ ಆಟೋರಾಜ ಅವರ ಜತೆ ಕಿಚ್ಚನ ಹುಟ್ಟು ಹಬ್ಬದ ಸೆಲೆಬ್ರೆಷನ್ ನಡೆಯಲಿದೆ. ಬೆಂಗಳೂರಿನ ನಾಗವಾರದಲ್ಲಿರುವ ಆಟೋರಾಜ ಅವರ ಅಶ್ರಮದಲ್ಲಿ 700 ಜನ ಇದ್ದಾರೆ. ಇವರ ಜತೆ ಊಟ ಮಾಡುವ ಮೂಲಕ ಕಿಚ್ಚ ಸುದೀಪ್ ಹುಟ್ಟು ಹಬ್ಬ ಆಚರಣೆ ಮಾಡಲಿದ್ದಾರೆ.
ನಟ ಕಿಚ್ಚ ಸುದೀಪ್ ಸತ್ಕಾರ್ಯ ಮೆಚ್ಚಿದ ಸಚಿವ ಸುಧಾಕರ್; ಟ್ಟೀಟ್ ವೈರಲ್!
9.ವಾಸುಕಿ ವೈಭವ್ ಅವರ ಸಂಯೋಜನೆಯಲ್ಲಿ ರಚನೆ ಆಗಿರುವ ‘ಮೊದಲು ಮಾನವನಾಗು’ ಹಾಡಿನ ಬಿಡುಗಡೆ.
ಕೋಟಿಗೊಬ್ಬ 3 ಜಾಲಿ ಟೀಸರ್
ಶಿವ ಕಾರ್ತಿಕ್ ನಿರ್ದೇಶಿಸಿ, ಸೂರಪ್ಪ ಬಾಬು ನಿರ್ಮಿಸಿರುವ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಚಿತ್ರದ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್‌ನಲ್ಲಿ ಇಂದು 11 ಗಂಟೆಗೆ ಬಿಡುಗಡೆ ಆಗುತ್ತಿದೆ. ಇದು ಡಾನ್, ಲೋಕಲ್ ರೌಡಿ ಲುಕ್‌ಅನ್ನು ರಿವೀಲ್ ಮಾಡುವ ಟೀಸರ್. ಸಾಹಸ ದೃಶ್ಯಗಳಿಲ್ಲದೇ ಲೈಫ್ ಬಗ್ಗೆ ಹೇಳುತ್ತಾ, ಮೆಲೋಡಿಯಿಂದ ಅಭಿಮಾನಿಗಳಿಗೆ ಖುಷಿ ಕೊಡುವ ಜಾಲಿ ಟೀಸರ್ ಕೂಡ ಹೌದು.
ಸುದೀಪ್ ಬಯೋಗ್ರಫಿ ಬಿಡುಗಡೆ
ನಟ ಸುದೀಪ್ ಅವರ ಕುರಿತಾದ ಹಲವು ಆಸಕ್ತಿಕರ ಮಾಹಿತಿ ಹಾಗೂ ಫೋಟೋಗಳನ್ನು ಒಳಗೊಂಡಿರುವ ಬಯೋಗ್ರಫಿ ಇಂದು ಬಿಡುಗಡೆ ಆಗಲಿದೆ. ಕಿಚ್ಚನ ಮೊದಲ ಬಯೋಗ್ರಫಿ ಇದಾಗಿದ್ದು, ಪತ್ರಕರ್ತ ಶರಣ್ ಹುಲ್ಲೂರು ನಿರೂಪಣೆಯಲ್ಲಿದೆ. ಇದನ್ನು ಸುದೀಪ್ ಬಿಡುಗಡೆ ಮಾಡುತ್ತಿದ್ದಾರೆ.