Asianet Suvarna News Asianet Suvarna News

ನಟ ಕಿಚ್ಚ ಸುದೀಪ್ ಸತ್ಕಾರ್ಯ ಮೆಚ್ಚಿದ ಸಚಿವ ಸುಧಾಕರ್‌; ಟ್ಟೀಟ್ ವೈರಲ್!

ನಟ ಸುದೀಪ್‌ ತಮ್ಮ ಚಾರಿಟೇಬಲ್ ಟ್ರಸ್ಟ್‌ ಮೂಲಕ ಮಾಡುತ್ತಿರುವ ಮಹತ್ವದ ಕೆಲಸಕ್ಕೆ ಸಚಿವ ಡಾ. ಸುಧಾಕರ್‌ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

Minister Dr Sudhakar appreciates kiccha sudeep charitable trust adopting government schools
Author
Bangalore, First Published Aug 10, 2020, 12:15 PM IST

ಮಹಾಮಾರಿ ಕೊರೋನಾ ವೈರಸ್‌ ಕಾಟದಿಂದ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಕೆಲವರು ಕೆಲಸ ಕಳೆದುಕೊಂಡರೆ, ಕೆಲವರು  ಕೆಲಸ ಬಿಟ್ಟಿದ್ದಾರೆ. ಇನ್ನೂ ಕೆಲವರು ತಮ್ಮ ಹುಟ್ಟೂರಿನಿಂದಲೇ ಕೆಲಸ ಮಾಡುತ್ತಿದ್ದಾರೆ. ಪುಟ್ಟ ಮಕ್ಕಳ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಮನೆಯಲ್ಲಿಯೇ ಆನ್‌ಲೈನ್‌ ಕ್ಲಾಸ್ ಅಟೆಂಡ್ ಮಾಡುತ್ತಿದ್ದಾರೆ. ಏನೇ ಕಷ್ಟ ಬಂದರೂ ಎದುರಿಸಬೇಕು, ಎಂಬ ಮನಸ್ಥಿತಿಯಲ್ಲಿ ಜನರಿದ್ದಾರೆ. ಈ ಸಮಯದಲ್ಲಿ ಸರಕಾರಿ ಶಾಲೆಗಳು ದತ್ತು ಪಡೆದು, ಹಳ್ಳಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಿರುವ ಸುದೀಪ್‌ಗೆ ಬಗ್ಗೆ ಸಚಿವ ಸುಧಾಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

'ಕೋವಿಡ್ ಸಂಕಷ್ಟ ಕಾಲದಲ್ಲಿ ನಟ ಸುದೀಪ್ ಅವರು ರಾಜ್ಯದ 4 ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದಾಗಿರುವ ಸುದ್ದಿ ಅತ್ಯಂತ ಶ್ಲಾಘನೀಯ. ಸರ್ಕಾರದ ಜೊತೆ ಕೈ ಜೋಡಿಸಿ ಶಿವಮೊಗ್ಗದ 4 ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿರುವ ಅವರ ಕಾರ್ಯ ಅತ್ಯಂತ ಸಂತಸದ ವಿಷಯ. ಅವರಿಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು,' ಎಂದು ಸುಧಾಕರ್ ಟ್ಟೀಟ್ ಮಾಡಿದ್ದಾರೆ.

Minister Dr Sudhakar appreciates kiccha sudeep charitable trust adopting government schools

ಜುಲೈನಲ್ಲಿ ಸುದೀಪ್‌ ಚಾರಿಟೇಬಲ್‌ ಟ್ರಸ್ಟ್‌ ವತಿಯಿಂದ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಲ್ಕು ಸರ್ಕಾರಿ ಶಾಲೆಗಳನ್ನು ದತ್ತು ಪಡೆದುಕೊಂಡಿದ್ದರು. ಆ ನಂತರ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ವಾಸಿಸುತ್ತಿದ್ದ ವೃದ್ಧ ದಂಪತಿ ಮೂರು ವರ್ಷಗಳಿಂದ ಕತ್ತಲಲ್ಲಿ ಜೀವನ ನಡೆಸುತ್ತಿದ್ದರು. ಅವರ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇದಾದ ನಂತರ ಆಗಸ್ಟ್‌ 9ರಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಿಂದ 49 ಕಿ.ಮೀ. ದೂರದಲ್ಲಿರುವ ಆವಿಗೆ ಎನ್ನುವ ಹಳ್ಳಿಯಲ್ಲಿ ಕಿರಿಯ ಪ್ರಥಮಿಕ ಶಾಲೆಯನ್ನು ದತ್ತು ಪಡೆದುಕೊಂಡಿದ್ದಾರೆ. 

ಕಾಡಿನ ಮಕ್ಕಳ ಅಕ್ಷರ ಕಲಿಕೆಗೆ ಕಿಚ್ಚ ಅಭಿಮಾನಿಗಳ ಸಾಥ್‌;ಮತ್ತೊಂದು ಶಾಲೆಯನ್ನು ದತ್ತು ಪಡೆದ ಸುದೀಪ್‌! 

ಕಿಚ್ಚ ಸುದೀಪ್‌ ಟ್ರಸ್ಟ್‌ನಿಂದ ಇಂಥಹ ಅನೇಕ ಮಹತ್ವದ ಕಾರ್ಯಗಳು ನಡೆಯುತ್ತಿದ್ದು ಜನ ಸಾಮಾನ್ಯರು ಹಾಗೂ ಗಣ್ಯಾತಿ ಗಣ್ಯರು ನೆಚ್ಚಿನ ನಟನ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.

"

Follow Us:
Download App:
  • android
  • ios