ಇತ್ತೀಚಿನ ದಿನಗಳಲ್ಲಿ ಕಿಚ್ಚ ಸುದೀಪ್‌ ಚಾರಿಟಬಲ್ ಟ್ರಸ್ಟ್‌ ಅನೇಕ ಮಹತ್ವದ ಕೆಲಸಗಳನ್ನು ಕೈಗೊಳ್ಳುತ್ತಿದೆ. ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು, ಸರ್ಕಾರಿ ಶಾಲೆ ದತ್ತು ಪಡೆಯುವುದು, ಕರೆಂಟ್‌ ಇಲ್ಲದೆ ಮೂರು ವರ್ಷಗಳ ಕಾಲ ವಾಸಿಸುತ್ತಿದ್ದರ ಮನೆಗೆ ವಿದ್ಯುತ್  ಸಂಪರ್ಕ ನೀಡುವುದು. ಈಗ ಶಾಂತಿ ನಿವಾಸ ಹೆಸರಿನಲ್ಲಿ ವೃದ್ಧಾಶ್ರಮ ಆರಂಭಿಸುತ್ತಿದ್ದಾರೆ.

ದಟ್ಟ ಕಾಡಿನ ಮಧ್ಯೆ ವಾಸಿಸುತ್ತಿರುವ ಮಕ್ಕಳಿಗೆ ವಿದ್ಯಭ್ಯಾಸ ಕೊಡಿಸಲು ಮುಂದಾದ ಕಿಚ್ಚ!

ಕಿಚ್ಚ ಸುದೀಪ್‌ ನಟನೆಯ ಹಾಗೂ ನಿರ್ದೇಶನದ ಸೂಪರ್ ಹಿಟ್ ಸಿನಿಮಾ 'ಶಾಂತಿ ನಿವಾಸ'  ಮನಸ್ತಾಪಗಳಿಂದ ಒಡೆದು ಹೋಗಿದ್ದ ತುಂಬು ಕುಟುಂಬಕ್ಕೆ ಅಡುಗೆಯವನಾಗಿ ಬಂದು ನಾಜೂಕಾಗಿ ಅವರನ್ನೆಲ್ಲ ಒಂದುಗೂಡಿಸುವ ಪಾತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ. ಮನಸ್ಸುನಗಳನ್ನು ಒಂದು ಮಾಡಿದ ಶಾಂತಿ ನಿವಾಸ ಹೆಸರನ್ನು ವೃದ್ಧಾಶ್ರಮಕ್ಕೆ ಇಡಲಾಗುತ್ತಿದೆ. 

ಸೆಪ್ಟೆಂಬರ್ 2ರಂದು  47 ವರ್ಷಕ್ಕೆ ಕಾಲಿಡುತ್ತಿರುವ ಕಿಚ್ಚ ಸುದೀಪ್ ಅಂದು ಗುದ್ದಲಿ ಪೂಜೆ ಮಾಡಲಿದ್ದಾರೆ. ಈ ವೃದ್ಧಾಶ್ರಮಲ್ಲಿ ಮೆಡಿಕಲ್ ಸೌಲಭ್ಯಗಳು ಹಾಗೂ ಮನಸ್ಸಿಗೆ ನೆಮ್ಮದಿ ನೀಡುವ ಕೌನ್ಸೆಲಿಂಗ್ ಲಭ್ಯವಿರುತ್ತದೆ. ಸುದೀಪ್‌ ಫ್ಯಾಂಟಮ್‌ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ ಕುಟುಂಬದವರಲ್ಲಿ ಯಾರಾದರೂ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ.