ರೀಲ್ಸ್ ದೀಪಕ್ ಗೌಡ Prank; ಇವನೇ ಬೇಕೆಂದು ವಿಷ ಸೇವಿಸಿದ ಯುವತಿ ಯಾರು?
ತರಲೇ ಕಾರಿನಲ್ಲಿ ದೀಪಕ್ ಗೌಡ. ಮದುವೆ ವಿಚಾರ ಬಂದಿದ್ದಕ್ಕೆ ಓಡೋಡಿ ಹೋದ ರೀಲ್ಸ್ ಕಿಂಗ್......
ರಸ್ತೆಯಲ್ಲಿ ಪ್ರಯಾಣ ಮಾಡುವಾಗ ಅನೇಕರು ಕೈ ಅಡ್ಡ ಹಾಕಿ ಡ್ರಾಪ್ ಹೇಳುವುದನ್ನು ನೋಡಿದ್ದೀರಾ. ಕೆಲವರು ನಂಬಿ ಡ್ರಾಪ್ ಕೊಡುತ್ತಾರೆ ಇನ್ನೂ ಕೆಲಸವರು ಯಾಮಾರಿಸಿ ಕಳ್ಳತನ ಅದು ಇದು ಅಂತ ಅಪಾಯ ಮೈ ಮೇಲೆ ಎಳೆದುಕೊಳ್ಳುತ್ತಾರೆ. ಈ ರೀತಿ ಡ್ರಾಪ್ ಕೇಳಬಾರದು...ಬಸ್‌ನಲ್ಲಿ ಪ್ರಯಾಣ ಮಾಡಬೇಕು ಅಂತ ಜನರಲ್ಲಿ ಅರಿವು ಮೂಡಿಸಲು ತರ್ಲೆ ಕಾರು ತಂಡ ಪ್ರ್ಯಾಂಕ್ ಮಾಡುತ್ತಾರೆ. ಈ ತಂಡಕ್ಕೆ ರೀಲ್ಸ್ ದೀಪಕ್ ಗೌಡ ಸಿಕ್ಕಿ ಬಿದ್ದಿದ್ದಾರೆ....
ಹೌದು! ದೀಪಕ್ ಗೌಡ ಮತ್ತು ತರ್ಲೆ ಕಾರು ತಂಡ ಹಾಗೆ ಒಂದು ರೌಂಡ್ ಹೋಗುತ್ತಾರೆ. ಹಾಗೆ ಮಾತನಾಡುತ್ತಾ ನಮ್ಮ ಕಡೆ ಒಂದು ಹುಡುಗಿ ಇದ್ದಾಳೆ ಮದುವೆ ವಯಸ್ಸಿಗೆ ಬಂದಿದ್ದಾರೆ ಯಾವ ಹುಡುಗನನ್ನು ತೋರಿಸಿದರೂ ಬೇಡ ಎನ್ನುತ್ತಿದ್ದರೆ ಸರಿ ನಿನಗೆ ಇಷ್ಟ ಇರವವರಿಗೆ ಕೊಟ್ಟು ಮದುವೆ ಮಾಡುತ್ತೀವಿ ಎಂದು ಹೇಳಿದ್ದಕ್ಕೆ ನಿಮ್ಮ ಫೋಟೋ ತೋರಿಸಿದಳು ಎಂದು ತಂಡದವರು ಹೇಳುತ್ತಾರೆ. ಓ.....ಈಗಿನ ಕಾಲ ಯುವತಿಯರು ತುಂಬಾ ಫಾಸ್ಟ್ ಇದ್ದಾರೆ ಎಲ್ಲರಿಗೂ ಸೌಲಭ್ಯಗಳನ್ನು ಕೊಟ್ಟರೂ ಸಾಲಲ್ಲ ಅಂತಾರೆ ನೀವು ಸುಳ್ಳು ಹೇಳುತ್ತಿದ್ದೀರಾ ನಮಗೆ ತಮಾಷೆ ಮಾಡುತ್ತಿದ್ದೀರಾ? ಎಂದು ದೀಪಕ್ ಮಾತನಾಡಿದ್ದಾರೆ.
ದಿನ ಭೇಟಿ ಮಾಡುತ್ತಿದ್ದ ಸ್ನೇಹಿತನಿಂದ ತರುಣ್ ಸುಧೀರ್‌ಗೆ ಅವಮಾನ; 'ಕಾಟೇರ' ಚಿತ್ರದವರೆಗೂ ಬರಲು ಇದೇ ಕಾರಣ ಎಂದ
'ಹುಡುಗಿ ತಂದೆ ದೊಡ್ಡ ರೌಡಿ ಮಗಳು ಲವ್ ಮಾಡುತ್ತಿದ್ದಾಳೆ ಅಂದ್ರೆ ಸುಮ್ಮನೆ ಬಿಡುವುದಿಲ್ಲಆ ಭಯದಿಂದ ಆಕೆ ವಿಷ ಕುಡಿದುಬಿಟ್ಟಿದ್ದಳು. ಈಗ ಕಾಲೇಜ್‌ಗೆ ಹೋಗಿದ್ದಾಳೆ ನಾವು ಹೋಗೂ ಒಂದು ರೌಂಡ್ ಹೋಗುತ್ತಿದ್ದೀವಿ..ಅವಳ ಕಾಲೇಜ್ ಬಳಿ ಹೋಗೋಣ ನೀವು ಒಮ್ಮೆ ಮಾತನಾಡಿ ಮದುವೆ ಮಾಡಿಕೊಳ್ಳಿ' ಎಂದು ತರ್ಲೆ ತಂಡ ಹೇಳುತ್ತದೆ. 'ದಯವಿಟ್ಟು ಆಗುವುದಿಲ್ಲ ನನಗೆ ಸಾಕಷ್ಟು ಕೆಲಸಗಳು ಇದೆ....ಹಸುಗಳನ್ನು ಹಾಗೆ ಬಿಟ್ಟು ಬಂದಿದ್ದೀನಿ ನಮ್ಮ ಮನೆಯಲ್ಲಿ ಕೇಳುತ್ತಾರೆ ದಯವಿಟ್ಟು ನನ್ನನ್ನು ಇಲ್ಲಿಯೇ ನಿಲ್ಲಿಸಿಬಿಡಿ ಎಂದು ದೀಪಕ್ ಗೌಡ ಮನವಿ ಮಾಡಿಕೊಳ್ಳುತ್ತಾರೆ.
ಅಪ್ಪನ ಹೆಸರು ಕೇಳ್ಕೊಂಡು ಬೆಳೆಯಲ್ಲ ಎಂದ ಉಪೇಂದ್ರ ಪುತ್ರ; ನನ್ನ ಮಗನನ್ನು ಹೆತ್ತಿದ್ದಕ್ಕೂ ಸಾರ್ಥಕ ಅಂದಿದ್ಯಾಕೆ?
ಹಠ ಮಾಡಿ ಕಾರನ್ನು ಅರ್ಧ ರಸ್ತೆಯಲ್ಲಿ ನಿಲ್ಲಿಸಿದ ದೀಪಕ್ ಗೌಡ ಗದ್ದೆ ಕಡೆ ಓಡಿ ಹೋಗಲು ಪ್ರಯತ್ನ ಮಾಡುತ್ತಾರೆ. ತರ್ಲೆ ಕಾರಿನ ತಂಡದವರು ಇದು ಪ್ರ್ಯಾಂಕ್ ಎಂದು ಎಷ್ಟೇ ಸತ್ಯ ಹೇಳಲು ಪ್ರಯತ್ನ ಪಟ್ಟರೂ ದೀಪಕ್ ಒಪ್ಪಿಕೊಳ್ಳಲು ರೆಡಿಯಾಗಿ ಇರಲಿಲ್ಲ. ಕೊನೆಯಲ್ಲಿ ದೀಪಿಕ್ ಗೌಡ ಮನೆ ಬಳಿ ಹೋಗಿ ತರ್ಲೆ ಕಾರು ತಂಡ ಅವರ ತಾಯಿ ಜೊತೆ ಮಾತನಾಡಿ ಸಂಪೂರ್ಣವಾಗಿ ವಿವರಿಸಿ ಕ್ಷಮೆ ಕೇಳಿ ಬರುತ್ತಾರೆ.