ಸ್ಯಾಂಡಲ್‌ವುಡ್ ಕಾಮಿಡಿ ಕಿಂಗ್ ನವರಸ ನಾಯಕ ಜಗ್ಗೇಶ್ ತಮ್ಮ ಕೈಗೆ ಸರಿ ಸುಮಾರು 6 ರಿಂದ 8 ಉಂಗುರಗಳನ್ನು ಧರಿಸುತ್ತಾರೆ. ಹಾಸ್ಯ ರಾಜ ಚಿನ್ನದ ಮರಿ ಹಾಗೆ ಕಾಣೋದಕ್ಕೆ ಯಾರು ಕಾರಣ ಗೊತ್ತಾ?

ಹೌದು ನವರಸ ನಾಯಕ ಜಗ್ಗೇಶ್‌ಗೆ ತಾಯಿ ಅಂದ್ರೆ ಅಪಾರ ಪ್ರೀತಿ. ಅವರು ತಿದ್ದಿ ತೀಡಿದ ಹಾದಿಯಲ್ಲೇ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಈಗ ಉಂಗುರ ಧರಿಸುತ್ತಿರುವುದು ತಮ್ಮ ತಾಯಿಯನ್ನು ನೋಡಿಯೇ.

ಜಗ್ಗೇಶ್ ‘ತೋತಾಪುರಿ’ ಫಸ್ಟ್ ಲುಕ್!

ಜಗ್ಗೇಶ್ ತಾಯಿ ನಂಜಮ್ಮಗೆ ಚಿನ್ನ ಅಂದ್ರೆ ಸಿಕ್ಕಾಪಟ್ಟೆ ಇಷ್ಟವಂತೆ. ಹಾಗಾಗಿ ಅವರು ಹೆಚ್ಚಾಗಿ ಆಭರಣ ಧರಿಸುತ್ತಿದ್ದರು. ತಾಯಿಯನ್ನು ನೋಡಿ ನೋಡಿ ಜಗ್ಗೇಶ್ ಕೂಡಾ ಉಂಗುರ ಧರಿಸಲು ಶುರು ಮಾಡಿದರು. ಉಂಗುರಗಳಲ್ಲಿ ಕೆಲವು ರಾಶಿ-ನಕ್ಷತ್ರಗಳಿಗೆ ಅನುಗುಣವಾಗುವಾದ ಉಂಗುರಗಳು ಸಹ ಇದೆ. ಬಟ್ ಇಲ್ಲೊಂದು ಟ್ವಿಸ್ಟ್ ಇದೆ. ಅದುವೇ ಜಗ್ಗೇಶ್ ಪತ್ನಿ ಪರಿಮಳರಿಗೆ ಬಂಗಾರದ ಮೇಲೆ ಒಲವು ಬಹಳ ಕಡಿಮೆ. ಜಗ್ಗೇಶ್ ಡಿಸೈನರ್ ಒಡವೆ ತಂದು ಕೊಟ್ಟರೂ ಪರಿಮಳಾ ಬಳಸುವುದು ಅಷ್ಟಕ್ಕಷ್ಟೇ.