ಸ್ಯಾಂಡಲ್‌ವುಡ್ ನಟ ದಿಗಂತ್‌ಗೆ ಅಪಘಾತವಾಗಿದೆ. ಕುಟುಂಬದ ಜೊತೆ ಗೋವಾ ಪ್ರವಾಸಕ್ಕೆ ಹೋಗಿದ್ದ ದಿಂಗತ್ ಕತ್ತಿಗೆ ಬಲವಾದ ಪೆಟ್ಟು ಬಿದ್ದಿದ್ದು ಅವರನ್ನು ಗೋವಾದಿಂದ ಬೆಂಗಳೂರಿನ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗುತ್ತಿದೆ. ಗೋವಾ ಸಮುದ್ರ ತೀರದಲ್ಲಿ ಸಮ್ಮರ್ ಶಾಟ್ ಹೊಡೆಯಲು ಹೇಗೆ ದಿಗಂತ್ ಮಿಸ್ಸಾಗಿ ಬಿದ್ದು ಕುತ್ತಿಗೆಗೆ ಬಲವಾಗಿ ಪೆಟ್ಟು ಬಿದ್ದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.   

ಸ್ಯಾಂಡಲ್‌ವುಡ್ ನಟ ದಿಗಂತ್‌ಗೆ ( Diganth ) ಅಪಘಾತವಾಗಿದೆ. ಕುಟುಂಬದ ಜೊತೆ ಗೋವಾ (Goa) ಪ್ರವಾಸಕ್ಕೆ ಹೋಗಿದ್ದ ದಿಂಗತ್ ಕತ್ತಿಗೆ ಬಲವಾದ ಪೆಟ್ಟು (Injury) ಬಿದ್ದಿದ್ದು ಅವರನ್ನು ಗೋವಾದಿಂದ ಬೆಂಗಳೂರಿನ ಆಸ್ಪತ್ರೆಗೆ (Hospital) ಏರ್ ಲಿಫ್ಟ್ ಮಾಡಲಾಗುತ್ತಿದೆ. ಗೋವಾ ಸಮುದ್ರ ತೀರದಲ್ಲಿ ಸಮ್ಮರ್ ಸಾಲ್ಟ್ ಹೊಡೆಯಲು ಹೋಗೆ ದಿಗಂತ್ ಆಯತಪ್ಪಿ ಬಿದ್ದು ಕುತ್ತಿಗೆಗೆ ಬಲವಾಗಿ ಪೆಟ್ಟು ಬಿದ್ದಿದೆ ಎನ್ನುವ ಮಾಹಿತಿ ತಿಳಿದುಬಂದಿದೆ.

Add Asianetnews Kannada as a Preferred SourcegooglePreferred

ದಿಂಗತ್ ಪತ್ನಿ ಐಂದ್ರಿತಾ (Aindrita ray) ಜೊತೆ ಇತ್ತೀಚಿಗಷ್ಟೆ ಗೋವಾ ಪ್ರವಾಸಕ್ಕೆ ತೆರಳಿದ್ದರು. ಸದಾ ಟ್ರಿಪ್, ಸೈಕ್ಲಿಂಗ್ ಅಂತ ದಿಂಗತ್ ದಂಪತಿ ಓಡಾಡುತ್ತಿದ್ದರು. ಗೋವಾಗೆ ವೀಕೆಂಡ್ ಟ್ರಿಪ್ ಹೋಗಿದ್ದರು. ಈ ವೇಳೆ ದಿಗಂತ್ ಬಲವಾದ ಪೆಟ್ಟು ಮಾಡಿಕೊಂಡಿದ್ದಾರೆ. ಸಮ್ಮರ್ ಸಾಲ್ಟ್ ಮಾಡಲು ಹೋಗಿ ದಿಂಗತ್ ಕುತ್ತಿಗೆಗೆ ಬಲವಾದ ಏಟು ಬಿದ್ದಿದ್ದು ಕಿತ್ತಿಗೆಯ ಮೂಳೆ ಮುರಿದಿರಬಹುದು ಅಂತ ಆಪ್ತರು ಮಾಹಿತಿ ನೀಡಿದ್ದಾರೆ. ದಿಗಂತ್ ಅವರನ್ನು ಕೆಲವೇ ಗಂಟೆಗಳಲ್ಲಿ ಏರ್ ಲಿಪ್ಟ್ ಮೂಲಕ ಬೆಂಗಳೂರಿನ ಓಲ್ಡ್ ಏರ್ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್‌ ಆಸ್ಪತ್ರೆಗೆ ಕರೆತರಲಾಗುತ್ತಿದೆ. ದಿಗಂತ್ ಜೊತೆ ಪತ್ನಿ ಐಂದ್ರಿತಾ ಜೊತೆಯಲ್ಲಿದ್ದಾರೆ. ಸದ್ಯ ಗೋವಾದಲ್ಲೆ ದಿಗಂತ್ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗ್ತಿದೆ.

Diganth In Murdeshwar : ನೇತ್ರಾಣಿ ಸಮುದ್ರದಾಳದಲ್ಲಿ ವಿಹರಿಸಿದ ದಿಗಂತ್!

ಈ ಬಗ್ಗೆ ದಿಗಂತ್ ತಾಯಿ ಮಲ್ಲಿಕಾ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ದಿಗಂತ್ ಪತ್ನಿ ಜೊತೆ ಗೋವಾಗೆ ತೆರಳಿದ್ದರು. ನಿನ್ನೆ ಈ ಘಟನೆ ಸಂಭವಿಸಿದೆ. ದಿಗಂತ್ ಜೊತೆ ಮಾತನಾಡಿದೆ. ಕುತ್ತಿಗೆಗೆ ಏಟಾಗಿದೆ ಏನು ಆಗಿಲ್ಲ ಗಾಬರಿ ಆಗಬೇಡ ಅಂತ ಹೇಳಿದ. ಇವತ್ತು ಗೋವಾದಿಂದ ಏರ್ ಲಿಫ್ಟ್ ಮಾಡುತ್ತಿದ್ದೇವೆ. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆತರಲಾಗುತ್ತದೆ' ಎಂದು ಹೇಳಿದರು. 

ಸಂಗೀತಾ ಶೃಂಗೇರಿ, ದಿಗಂತ್ ನಟನೆಯ 'ಮಾರಿಗೋಲ್ಡ್‌' ರಿಲೀಸ್‌ಗೆ ಸಿದ್ಧತೆ!

 ದಿಗಂತ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ದಿಗಂತ್ ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ (kshamisi nimma katheyalli hanavilla) ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇದೀಗ ದಿಗಂತ್ ಬಳಿ ಮಾರಿಗೋಲ್ಡ್ (Marigold), ಎಡಗೈ ಅಪಘಾತಕ್ಕೆ ಕಾರಣ, ಗಾಲಿಪಟ-2 (Galipata 2) ಮತ್ತು ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

ಮಿಸ್ ಕ್ಯಾಲಿಪೋರ್ನಿಯಾ (Miss California) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನದಿಗಂತ್ ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೀರಾ ಮಾದವ ರಾಘವ, ಮಸ್ತ್ ಮಜಾ ಮಾಡಿ, ಮನಸಾರೆ, ಮಳೆಬಿಲ್ಲೆ, ಬಿಸಿಲೆ, ಪಂಚರಂಗಿ, ಬರ್ಫಿ, ಚೌಕ ಸೇರಿದಂತೆ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸಿನಿಮಾಗಳ ಜೊತೆಗೆ ತುಳು, ತೆಲುಗು, ಹಿಂದಿ ಸಿನಿಮಾಗಳಲ್ಲೂ ಮಿಂಚಿದ್ದಾರೆ. ವೆಡ್ಡಿಂಗ್ ಪುಲಾವ್ ಸಿನಿಮಾ ಮೂಲಕ ದಿಂಗತ್ ಬಾಲಿವುಡ್‌ಗೆ ಹಾರಿದ್ದರು. ಆದರೆ ಅಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಕಂಡಿಲ್ಲ. ಮತ್ತೆ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದರು. ಬಳಿಕ ಮತ್ತೆ ಸ್ಯಾಂಡಲ್ ವುಡ್‌ನಲ್ಲಿ ಬ್ಯುಸಿಯಾದರು. 

ದಿಗಂತ್‌ಗೆ ಈಗಾಗಲೇ ಬಲಭಾಗದ ಕಣ್ಣಿಗೆ ಬಲವಾದ ಏಟು ಬಿದ್ದಿದ್ದು 30ರಷ್ಟು ಕಣ್ಣು ಕಾಣಿಸುವುದಿಲ್ಲ. ದಿಗಂತ್ ಹಿಂದಿಯ ವೆಡ್ಡಿಂಗ್ ಪುಲಾವ್ ಸಿನಿಮಾದ ಚಿತ್ರೀಕರಣ ವೇಳೆ ಕಣ್ಣಿಗೆ ಏಟು ಮಾಡಿಕೊಂಡಿದ್ದರು. ಈ ಸಿನಿಮಾ ಬಳಿಕ ದಗಂತ್ ಮತ್ತೆ ಬಾಲಿವುಡ್ ಕಡೆ ಮುಖಮಾಡಿಲ್ಲ. ಇದೀಗ ಕುತ್ತಿಗೆಗೆ ಬಲವಾದ ಏಟು ಮಾಡಿಕೊಂಡಿದ್ದಾರೆ.

"