ಆರೋಗ್ಯ ಸಮಸ್ಯೆಯಿಂದಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸದ ದರ್ಶನ್, ಅಭಿಮಾನಿಗಳ ಭೇಟಿ ಸಾಧ್ಯವಾಗದ್ದಕ್ಕೆ ಪತ್ರದ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಪ್ರೀತಿ, ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿ, ಶೀಘ್ರದಲ್ಲೇ ಭೇಟಿಯಾಗುವ ಭರವಸೆ ನೀಡಿದ್ದಾರೆ. ಬೆನ್ನುನೋವಿನ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಅಗತ್ಯವಿದ್ದು, ಕನ್ನಡ ಚಿತ್ರರಂಗದಲ್ಲೇ ಮುಂದುವರಿಯುವುದಾಗಿ ತಿಳಿಸಿದ್ದಾರೆ.
ಕನ್ನಡ ನಟ ದರ್ಶನ್ ತಮ್ಮ ಹುಟ್ಟುಹಬ್ಬದ ದಿನ ತಪ್ಪದೆ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಮಧ್ಯರಾತ್ರಿ 12 ಗಂಟೆಯಿಂದ ರಾತ್ರಿ 7-8 ಗಂಟೆವರೆಗೂ ಅಭಿಮಾನಿಗಳನ್ನು ಭೇಟಿ ಮಾಡುತ್ತಾರೆ. ಬರುವ ಅಷ್ಟೂ ಜನರಿಗೆ ಅನ್ನದಾನ ಏರ್ಪಾಟು ಮಾಡಿರುತ್ತಾರೆ. ಆದರೆ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ದರ್ಶನ್ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಹೀಗಾಗಿ ಈ ವರ್ಷ ಹುಟ್ಟುಹಬ್ಬದಂದು ಯಾರನ್ನೂ ಭೇಟಿ ಮಾಡಿಲ್ಲ ಆದರೂ ಮನೆ ಬಳಿ ಬಂದು ಕಾಯುತ್ತಿದ್ದ ಜನರಿಗೆ ಬೇಸರ ಆಗಬಾರದು ಎಂದು ಪತ್ರ ಬರೆದಿದ್ದಾರೆ.
ಪ್ರೀತಿಯ ಸೆಲೆಬ್ರಿಟಿಸ್ ಗಳೇ
ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ.
ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ. ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ.
ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ.
ನಿಮ್ಮ ದಾಸ ದರ್ಶನ್
ಡೇಂಜರ್ ಬಣ್ಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ವಿಜಯಲಕ್ಷ್ಮಿ ದರ್ಶನ್; ರೆಡ್ ಹಿಂದಿರುವ ಗುಟ್ಟು ಏನು?
ದರ್ಶನ್ ವಿಡಿಯೋದಲ್ಲಿ ಹೇಳಿದ ಮತುಗಳು:
ನನ್ನ ಅಭಿಮಾನಿಗಳಿಗೆ ಧನ್ಯವಾದ ಹೇಳಲಾ? ಥ್ಯಾಂಕ್ಸ್ ಹೇಳಲಾ? ಯಾವ ಪದ ಬಳಸಬೇಕು ಅಂತ ಗೊತ್ತಾಗ್ತಿಲ್ಲ. ನೀವು ತೋರಿಸಿದ ಪ್ರೀತಿಗೆ ಬೆಲೆ ಕಟ್ಟೋಕೆ ಆಗೋದಿಲ್ಲ. ನಾನು ಈ ವಿಡಿಯೋ ಮಾಡೋಕೆ ಜನ್ಮದಿನ ಕಾರಣ. ಪ್ರತಿಸಲವೂ ನಾನು ನಿಂತುಕೊಂಡು ನಿಮಗೆ ಶೇಕ್‌ಹ್ಯಾಂಡ್ ಕೊಟ್ಟು ಶುಭಾಶಯ ಹೇಳ್ತಿದ್ದೆ. ಆದರೆ ಈ ಸಲ ಜನ್ಮದಿನ ಆಚರಿಸಿಕೊಳ್ತಿಲ್ಲ. ಯಾವತ್ತೂ ಒಂದು ಇಂಜೆಕ್ಷನ್ ತಗೊಂಡು ನಿಂತುಕೊಳ್ತಿದ್ದೆ, ಹದಿನೈದು ಆರಾಮ್ ಇರ್ತಿದ್ದೆ. ಆದರೆ ಈ ಸಲ ಆಗ್ತಿಲ್ಲ. ಇದೊಂದು ಸಲ ನನ್ನನ್ನು ಕ್ಷಮಿಸಿ. ನಾನು ಇನ್ನು ಸ್ವಲ್ಪ ದಿನಗಳ ಬಳಿಕ ನಿಮ್ಮೆಲ್ಲರನ್ನು ವೈಯಕ್ತಿಕವಾಗಿ ಭೇಟಿ ಆಗ್ತೀನಿ. ಸ್ಪೈನಲ್ ಕಾರ್ಡ್ ಸಮಸ್ಯೆ ಆಗಿರೋದು ಎಲ್ಲರಿಗೂ ಗೊತ್ತಿದೆ. ನಾನು ಆಪರೇಶನ್ ಮಾಡಿಸಲೇಬೇಕು. ನನ್ನ ಕಾಲು ಈಗಾಗಲೇ ನಂಬ್ ಆಗ್ತಿದೆ. ಹೀಗಾಗಿ ಆರೋಗ್ಯದ ಕಡೆಗೆ ಗಮನ ಕೊಡಲೇಬೇಕು. ನನ್ನ ಸಿನಿಮಾಗಳು ಬೇರೆ ಭಾಷೆಗೆ ಡಬ್ ಆಗಬಹುದು, ಆದರೆ ನಾನು ಇಲ್ಲೇ ಇರ್ತೀನಿ. ನಾನು ಕನ್ನಡದಲ್ಲಿಯೇ ಇರ್ತೀನಿ, ಕನ್ನಡದಲ್ಲೇ ಸಿನಿಮಾ ಮಾಡ್ತೀನಿ. ನನ್ನ ಜನ್ಮದಿನಕ್ಕೆ ಶುಭಾಶಯ ತಿಳಿಸಿದ ಎಲ್ಲರಿಗೂ ಧನ್ಯವಾದಗಳು. ಆದಷ್ಟು ಬೇಗ ನಿಮ್ಮೆಲ್ಲರಿಗೂ ತಿಳಿಸುವೆ.
ದರ್ಶನ್ ಮೇಲಿನ ಕೋಪ ನನ್ನ ಮೇಲೆ ತೀರಿಸಿಕೊಳ್ಳುತ್ತಿದ್ದಾರೆ ಅನ್ಸುತ್ತೆ: ದಿನಕರ್ ತೂಗುದೀಪ ಬೇಸರ
