- Home
- Entertainment
- Sandalwood
- ಡೇಂಜರ್ ಬಣ್ಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ವಿಜಯಲಕ್ಷ್ಮಿ ದರ್ಶನ್; ರೆಡ್ ಹಿಂದಿರುವ ಗುಟ್ಟು ಏನು?
ಡೇಂಜರ್ ಬಣ್ಣದಲ್ಲಿ ಹೆಚ್ಚಾಗಿ ಕಾಣಿಸಿಕೊಂಡ ವಿಜಯಲಕ್ಷ್ಮಿ ದರ್ಶನ್; ರೆಡ್ ಹಿಂದಿರುವ ಗುಟ್ಟು ಏನು?
ವಿಜಯಲಕ್ಷ್ಮಿ ಧರಿಸಿರುವ ಉಡುಪುಗಳ ಬಣ್ಣದ ಮೇಲೆ ಬಿತ್ತು ನೆಟ್ಟಿಗರ ಕಣ್ಣು...ಯಾಕೆ ಕೆಂಪು ಎಂದು ಪ್ರಶ್ನಿಸುತ್ತಿದ್ದಾರೆ.

ಕನ್ನಡದ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡ ಸಿಕ್ಕಾಪಟ್ಟೆ ಅಭಿಮಾನಿಗಳನ್ನು ಹೊಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ವಿಜಿ ಮೇಲೆ ನೆಟ್ಟಿಗರ ಕಣ್ಣು ಬಿದ್ದಿದೆ.
ಫ್ಯಾಷನ್ ಮತ್ತು ಸ್ಟೈಲಿಂಗ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ವಿಜಯಲಕ್ಷ್ಮಿ ದುಬಾರಿ ಬ್ರ್ಯಾಂಡ್‌ಗಳ ಬಟ್ಟೆಗಳನ್ನು ಧರಿಸುವುದು. ಅಷ್ಟೇ ಅಲ್ಲಅದಕ್ಕೆ ಮ್ಯಾಚ್ ಆಗುವ ಬ್ಯಾಗ್ ಕೂಡ ಹಿಡಿಯುತ್ತಾರೆ.
ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿರುವ ಫೋಟೋಗಳಲ್ಲಿ ಅತಿ ಹೆಚ್ಚು ಕೆಂಪು ಬಣ್ಣದ ಡ್ರೆಸ್‌ಗಳನ್ನು ಧರಿಸಿದ್ದಾರೆ ಅನ್ನೋದು ನೆಟ್ಟಿಗರು ಹುಡುಕಿರುವ ವಿಚಾರ.
ರೆಡ್ ಲವ್ ಕಲರ್ ಎಂದು ಕೆಲವರು ಹೇಳಿದ್ದರೆ ಇನ್ನೂ ಕೆಲವರು ಅದು ಡೇಂಜರ್ ಬಣ್ಣ ಎನ್ನುತ್ತಾರೆ. ಆದರೆ ವಿಜಯಲಕ್ಷ್ಮಿ ಯಾಕೆ ಡೇಂಬರ್ ಬಣ್ಣ ಆಯ್ಕೆ ಮಾಡಿದ್ದಾರೆ ಅಂತ ನೆಟ್ಟಿಗರು ಪ್ರಶ್ನಿಸಿದ್ದಾರೆ.
ಕೆಂಪು ಬಣ್ಣ ಅಂದ್ರೆ ಅಷ್ಟೋಂದು ಇಷ್ಟವೇ? ಕೆಂಪು ಮೊದಲು ಕಣ್ಣಿಗೆ ಬೀಳುತ್ತಾ ಅಥವಾ ಇಷ್ಟ ಇಲ್ಲ ಅಂದ್ರೂ ಚೆನ್ನಾಗಿ ಕಾಣಿಸುತ್ತಾ? ಒಟ್ಟಾರೆ ಅಭಿಮಾನಿಗಳಿಗೆ ಇರುವ ಪ್ರಶ್ನೆಗಳು ಒಂದೆರಡಲ್ಲ. ಅದನ್ನು ಕಾಮೆಂಟ್ ಕೂಡ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ನಂತರ ವಿಜಯಲಕ್ಷ್ಮಿ ಮೇಲೆ ಅಭಿಮಾನಿಗಳಿಗೆ ಗೌರವ ಹೆಚ್ಚಾಗಿದೆ. ಎಷ್ಟೇ ಕಷ್ಟ ಇದ್ದರೂ ದೂರ ಬಿಡದೆ ಇಡೀ ಕುಟುಂಬವನ್ನು ಬಿಗಿಯಾಗಿ ಹಿಡಿದು ಗಟ್ಟಿಗಿತ್ತಿಯಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.