Asianet Suvarna News Asianet Suvarna News

ದರ್ಶನ್ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌; ಡಿ-ಬಾಸ್‌ ಗಾಗಿ ಈ ದಿನ ಫ್ರೀ ಇಟ್ಕೊಳ್ಳಿ....

ಕೊನೆಗೂ ಅಭಿಮಾನಿಗಳ ಸ್ಪೆಷಲ್‌ ದಿನಕ್ಕೆ ಡೇಟ್‌ ಫಿಕ್ಸ್‌. ಮೇಕಿಂಗ್ ವಿಡಿಯೋ ಎಲ್ಲೆಡೆ ವೈರಲ್....

Kannada actor Darshan Kaatera film release on december 29th vcs
Author
First Published Nov 30, 2023, 2:00 PM IST

ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾ ಡಿ.29ಕ್ಕೆ ಬಿಡುಗಡೆಯಾಗಲಿದೆ. ರಾಕ್‌ಲೈನ್‌ ಎಂಟರ್‌ಪ್ರೈಸಸ್‌ ಮೂಲಕ ರಾಕ್‌ಲೈನ್ ವೆಂಕಟೇಶ್‌ ಬಂಡವಾಳ ಹೂಡಿರುವ ಈ ಸಿನಿಮಾವನ್ನು ತರುಣ್ ಕಿಶೋರ್‌ ಸುಧೀರ್‌ ನಿರ್ದೇಶನ ಮಾಡಿದ್ದಾರೆ. ಮಾಲಾಶ್ರೀ ಮಗಳು ಆರಾಧನಾ ಚಿತ್ರದ ನಾಯಕಿ. ಜಗಪತಿ ಬಾಬು ಮುಖ್ಯ ಭೂಮಿಕೆಯಲ್ಲಿದ್ದಾರೆ.

ಯಾವ ಮುನ್ಸೂಚನೆಯೂ ಇಲ್ಲದೇ ದಿಢೀರ್‌ ಆಗಿ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಿದ್ದು ಅಭಿಮಾನಿಗಳು ಖುಷಿಯಾಗಿದ್ದಾರೆ. ಚಿತ್ರದ ಮೇಕಿಂಗ್ ವೀಡಿಯೋ ಜೊತೆಗೆ ದರ್ಶನ್ ಬೀಡಿ ಹಚ್ಚಿ ಸೇದುವ ಸಿನಿಮಾ ಗ್ಲಿಂಪ್ಸ್‌, ಊಟ ತಯಾರಿದೆ ಅನ್ನೋ ಬೋರ್ಡ್‌ನೊಂದಿಗೆ ಸಿನಿಮಾ ಬಿಡುಗಡೆ ದಿನಾಂಕ ರಿವೀಲ್‌ ಮಾಡಲಾಗಿದೆ.

ಅದ್ಧೂರಿಯಾಗಿ ಪತ್ನಿ ಬರ್ತಡೇ ಪಾರ್ಟಿ ಮಾಡಿದ ದರ್ಶನ್; ಅಣ್ಣ-ಅತ್ತಿಗೆ ಕ್ಯೂಟ್‌ ಫೋಟೋ ಮೇಲೆ ನೆಟ್ಟಿಗರ ಕಣ್ಣು!

ಕಾಟೇರ ಸಿನಿಮಾ ಹಳ್ಳಿ ಸೊಗಡಿನ ಕಥೆ ಹೊಂದಿದೆ. 70 ರ ದಶಕದಲ್ಲಿ ನಡೆಯುವ ಈ ಚಿತ್ರದಲ್ಲಿ ದರ್ಶನ್ ಕಾಟೇರನಾಗಿ ಮಚ್ಚು ಹಿಡಿದು ಅಬ್ಬರಿಸಿದ್ದಾರೆ. ಕುಲುಮೆಯಲ್ಲಿ ಕತ್ತಿ ಮಸೆಯುವ ಕಾಟೇರನ ಕೈಯಲ್ಲಿ ‘ಅವ್ವ’ ಅನ್ನುವ ಟ್ಯಾಟೂ ಸಹ ಗಮನಸೆಳೆಯುತ್ತದೆ.

ವಿ ಹರಿಕೃಷ್ಣ ಅವರ ಸಂಗೀತ, ಸುಧಾಕರ್‌ ಎಸ್‌ ರಾಜ್‌ ಛಾಯಾಗ್ರಹಣ, ಕೆ ಎಂ ಪ್ರಕಾಶ್‌ ಸಂಕಲನ, ಮಾಸ್ತಿ ಅವರ ಸಂಭಾಷಣೆ ಚಿತ್ರಕ್ಕಿದೆ.

ಬ್ಯಾಡ್‌ ಮ್ಯಾನರ್ಸ್‌ ಚಿತ್ರದಲ್ಲಿ ಅಭಿಷೇಕ್ ಮುದ್ದಾಗಿ ಕಾಣುತ್ತಾರೆ: ದರ್ಶನ್

ಸ್ಯಾಂಡಲ್‌ವುಡ್‌ ಕನಸಿನ ರಾಣಿ, ಹಲವು ದಶಕಗಳ ಹಿಂದೆ ಸೂಪರ್ ಸ್ಟಾರ್ ನಟಿಯಾಗಿ ಮೆರೆದ ಮಾಲಾಶ್ರೀ ಮಗಳು ಆರಾಧನಾ ಎಂಬುದು ವಿಶೇಷ ಸಂಗತಿ. ಆರಾಧನಾಗೆ ಇದು ಕೆರಿಯರ್ ಪ್ರಾರಂಭ, ಸಿನಿರಂಗದಲ್ಲಿ ಮೊಟ್ಟಮೊದಲ ಚಿತ್ರವಾಗಿದೆ. ಮಾಲಾಶ್ರೀ ಮಗಳು ಎಂಬ ಕಾರಣಕ್ಕೇ ಆರಾಧನಾರನ್ನು ನೋಡಲು ಹಲವರು ತುದಿಗಾಲಲ್ಲಿ ನಿಂತಿದ್ದಾರೆ. ಜತೆಗೆ, ಕ್ರಾಂತಿ ಬಳಿಕ ದರ್ಶನ್ ಅಭಿಮಾನಿಗಳಿಗೆ ನೋಡಲು ಯಾವುದೇ ಚಿತ್ರವೂ ಬಂದಿಲ್ಲ. ಈ ಎಲ್ಲ ಕಾರಣಗಳಿಂದ ದರ್ಶನ್ ಅಭಿನಯದ ಕಾಟೇರ' ಚಿತ್ರವು ಭಾರೀ ನಿರೀಕ್ಷೆ ಮೂಡಿಸಿದೆ. 

 

Follow Us:
Download App:
  • android
  • ios