ಅದ್ಧೂರಿಯಾಗಿ ಪತ್ನಿ ಬರ್ತಡೇ ಪಾರ್ಟಿ ಮಾಡಿದ ದರ್ಶನ್; ಅಣ್ಣ-ಅತ್ತಿಗೆ ಕ್ಯೂಟ್ ಫೋಟೋ ಮೇಲೆ ನೆಟ್ಟಿಗರ ಕಣ್ಣು!
ಸ್ನೇಹಿತರ ಜೊತೆ ಅದ್ಧೂರಿಯಾಗಿತ್ತು ಡಿ-ಬಾರ್ಸ್ ಪತ್ನಿ ಬರ್ತಡೇ. ಪಾರ್ಟಿಯಲ್ಲಿ ಯಾರೆಲ್ಲಾ ಇದ್ರು?
ಕನ್ನಡ ಚಿತ್ರರಂಗ ಓನ್ ಆಂಡ್ ಓನ್ಲಿ ಜಾಲೆಂಜಿಂಗ್ ಸ್ಟಾರ್ ಅಂದ್ರೆ ಅದು ದರ್ಶನ್. ಅಭಿಮಾನಿಗಳ ಪ್ರೀತಿಯ ಡಿ-ಬಾಸ್. ಸೋಷಿಯಲ್ ಮೀಡಿಯಾ ತುಂಬಾ ಡಿ-ಬಾಸ್ ಫೋಟೋ ವೈರಲ್ ಆಗುತ್ತಿದೆ.
ಕೆಲವು ದಿನಗಳ ಹಿಂದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹುಟ್ಟುಹಬ್ಬವಿತ್ತು. ಹೀಗಾಗಿ ಆಪ್ತ ಸ್ನೇಹಿತರು ಮಾತ್ರ ಸೇರಿಕೊಂಡು ಬರ್ತಡೇ ಪಾರ್ಟಿಯನ್ನು ಅದ್ಧೂರಿ ಮಾಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಫೋಟೋ ಮತ್ತು ವಿಡಿಯೋದಲ್ಲಿ ದರ್ಶನ್ ಮತ್ತು ವಿಜಯಲಕ್ಷ್ಮಿ ಫೋಟೋ ನೋಡಿ ಅಣ್ಣ-ಅತ್ತಿಗೆ ಅಂತ ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.
ಕಿರುತೆರೆ ನಟಿ ಕಾವ್ಯಾ ಗೌಡ, ಡಾಕ್ಟರ್ ಮತ್ತು ಮಾಡಲ್ ಆಗಿರುವ ಶ್ರುತಿ, ಅಭಿಷೇಕ್ ಅಂಬರೀಶ್, ಅವಿವಾ ಬಿಡಪ್ಪ ಸೇರಿದಂತೆ ದೊಡ್ಡ ಬಳಗವೇ ಪಾರ್ಟಿಯಲ್ಲಿ ಭಾಗಿಯಾಗಿತ್ತು.
ಹೀಗೆ ಗುಂಪಿನೊಂದರ ಜೊತೆ ದರ್ಶನ್ ಮತ್ತು ವಿಜಯಲಕ್ಷ್ಮಿ ಫೋಸ್ ಕೊಟ್ಟಿದ್ದಾರೆ. ಆಗ ವಿಜಯಲಕ್ಷ್ಮಿ ದರ್ಶನ ಕೆನ್ನಿ ಹಿಡಿದು ಪೋಸ್ ಕೊಟ್ಟಿದ್ದಾರೆ. ನೆಟ್ಟಿಗರ ಕಣ್ಣು ಈ ಫೋಟೋ ಮೇಲಿದೆ.
ವಾವ್ ಎಷ್ಟು ಕ್ಯೂಟ್ ಆಗಿದೆ, ನೀವಿಬ್ಬರು ಯಾಕೆ ಒಟ್ಟಿಗೆ ಸಿನಿಮಾ ಮಾಡಬಾರದು ಹಾಗೂ ಅಕ್ಕ ನಿರ್ಮಾಣ ಮಾಡಲಿ ಅಣ್ಣ ನಟಿಸಲಿ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿರುವ ವಿಜಯಲಕ್ಷ್ಮಿ ಮೈ ಫ್ರೆಶ್ ಬ್ಯಾಸ್ಕೆಟ್ ಕಂಪನಿಯ ಸಂಸ್ಥಾಪಕಿ. ವಿಜಯ್ ಲಕ್ಷ್ಮಿ ಸಖತ್ ಸ್ಟೈಲಿಷ್ ಆಗಿದ್ದಾರೆ.