Asianet Suvarna News Asianet Suvarna News

ಬ್ಯಾಡ್‌ ಮ್ಯಾನರ್ಸ್‌ ಚಿತ್ರದಲ್ಲಿ ಅಭಿಷೇಕ್ ಮುದ್ದಾಗಿ ಕಾಣುತ್ತಾರೆ: ದರ್ಶನ್

ನವೆಂಬರ್ 24ರಂದು ಅಭಿಷೇಕ್ ಅಂಬರೀಶ್ ನಟನೆಯ ಬ್ಯಾಡ್ ಮ್ಯಾನರ್ಸ್ ಸಿನಿಮಾ ರಿಲೀಸ್ ಅಗುತ್ತಿದೆ. ಚಿತ್ರದ ಬಗ್ಗೆ ನಟ ದರ್ಶನ್ ಮಾತು.....

Abhishek Ambareesh looks cute in Bad manners film says Darshan vcs
Author
First Published Nov 16, 2023, 9:27 AM IST

‘ನಾನು ಪೂರ್ತಿ ಸಿನಿಮಾ ನೋಡಿದ್ದೇನೆ. ನನಗಿಂತ ಎತ್ತರ ಇರುವ ಅಭಿಷೇಕ್ ಸ್ಕ್ರೀನಲ್ಲಿ ಬಹಳ ಮುದ್ದಾಗಿ ಕಾಣಿಸುತ್ತಾರೆ. ಅಷ್ಟೇ ಚೆನ್ನಾಗಿ ಅಭಿನಯಿಸಿದ್ದಾರೆ. ಸೂರಿ ಅವರ ನಿರ್ದೇಶನದಲ್ಲಿ ಬ್ಯಾಡ್‌ ಮ್ಯಾನರ್ಸ್‌ ಚಿತ್ರ ಚೆನ್ನಾಗಿ ಬಂದಿದೆ. ಈಗ ಟ್ರೇಲರ್ ಬಿಡುಗಡೆಯಾಗಿದೆ. ನವೆಂಬರ್ 24ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ನೋಡಿ ಹಾರೈಸಿ’.- ಹೀಗಂದಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್.

ದುನಿಯಾ ಸೂರಿ ನಿರ್ದೇಶನದ, ಅಭಿಷೇಕ್ ಅಂಬರೀಶ್ ಪ್ರಧಾನ ಪಾತ್ರದಲ್ಲಿ ನಟಿಸಿರುವ, ಕೆ.ಎಂ. ಸುಧೀರ್ ನಿರ್ಮಾಣದ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.ಸುಮಲತಾ ಅಂಬರೀಶ್, ‘ಸೂರಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಎಂದು ಗೊತ್ತಾದ ಮೇಲೆ ನಾನು ಕಥೆ ಕೇಳಲು ಹೋಗಲಿಲ್ಲ. ಅವರು ಚೆನ್ನಾಗಿ ಕಥೆ ಮಾಡಿಕೊಂಡಿರುತ್ತಾರೆ ಎಂಬ ನಂಬಿಕೆ ನನ್ನದು. ಕನ್ನಡ ಸಿನಿಮಾ ಪ್ರೇಕ್ಷಕರ ಆಶೀರ್ವಾದ ಅಭಿಷೇಕ್ ಮೇಲಿರಲಿ’ ಎಂದು ಹೇಳಿದರು.

ಮಂಡ್ಯ ಜನತೆ ಮನೆಗೆ ಬಂದ್ರೆ ಅವಿವಾ ರೂಮ್‌ಗೆ ಓಡೋಗ್ತಾಳೆ: ಪತ್ನಿ ಬಗ್ಗೆ ಅಭಿಷೇಕ್ ಅಂಬರೀಶ್

ಅಭಿಷೇಕ್ ಅಂಬರೀಶ್ ಮಾತಿಗೆ ಮುನ್ನ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ನಂತರ, ‘ನಾನು ನಟಿಸಿರುವ ಎರಡನೇ ಚಿತ್ರ ‘ಬ್ಯಾಡ್ ಮ್ಯಾನರ್ಸ್’ ನೋಡಿ ಹರಸಿ’ ಎಂದರು.ನಿರ್ದೇಶಕ ದುನಿಯಾ ಸೂರಿ, ‘ಈ ಸಂದರ್ಭದಲ್ಲಿ ನಾನು ಅಂಬರೀಶ್ ಹಾಗೂ ಪುನೀತ್ ರಾಜ್‌ಕುಮಾರ್ ಅವರನ್ನು ನೆನೆಸಿಕೊಳ್ಳುತ್ತೇನೆ. ಚಿತ್ರತಂಡದ ಸಹಕಾರದಿಂದ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಅಭಿಷೇಕ್ ಪಾತ್ರ ವಿಭಿನ್ನವಾಗಿದೆ’ ಎಂದರು.

ಚಿತ್ರಕ್ಕೆ ಶುಭ ಹರಸಲು ರಾಕ್‌ಲೈನ್ ವೆಂಕಟೇಶ್, ಅವಿವಾ ಅಭಿಷೇಕ್, ವಿನೋದ್ ಪ್ರಭಾಕರ್, ವಿಕ್ರಮ್ ರವಿಚಂದ್ರನ್, ಧನ್ವೀರ್ ಆಗಮಿಸಿದ್ದರು. ನಿರ್ಮಾಪಕ ಕೆ.ಎಂ ಸುಧೀರ್, ಹಿರಿಯ ನಟರಾದ ಉಮೇಶ್, ದತ್ತಣ್ಣ, ಶರತ್ ಲೋಹಿತಾಶ್ವ ಉಪಸ್ಥಿತರಿದ್ದರು.

Follow Us:
Download App:
  • android
  • ios