ಸೆ.30ಕ್ಕೆ ಜಗ್ಗೇಶ್‌ ನಟನೆಯ ಚಿತ್ರ ತೆರೆಗೆ ದಸರಾ ಸಂಭ್ರಮದಲ್ಲಿ ತೋತಾಪುರಿ ಸಿನಿಮಾ ಘಮಲು

ನವರಸ ನಾಯಕ ಜಗ್ಗೇಶ್‌ ಅಭಿನಯದ ‘ತೋತಾಪುರಿ’ ಚಿತ್ರದ ಬಿಡುಗಡೆಯ ದಿನಾಂಕ ಕೊನೆಗೂ ಘೋಷಣೆ ಆಗಿದೆ. ಸೆ.30ಕ್ಕೆ ಅದ್ದೂರಿಯಾಗಿ ಚಿತ್ರವನ್ನು ತೆರೆಗೆ ತರಲು ನಿರ್ಮಾಪಕ ಕೆ ಎ ಸುರೇಶ್‌ ಅವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಹಾಡು, ಟೀಸರ್‌, ಡೈಲಾಗ್‌ಗಳಿಂದಲೇ ಗಮನ ಸೆಳೆದಿದ್ದ ಈ ಚಿತ್ರ ಯಾವಾಗ ಬಿಡುಗಡೆ ಆಗುತ್ತದೆಂಬ ನಿರೀಕ್ಷೆ ಹಾಗೂ ಕುತೂಹಲದಲ್ಲಿದ್ದ ಪ್ರೇಕ್ಷಕರಿಗೆ ನಾಡ ಹಬ್ಬದ ಸಂಭ್ರಮದಲ್ಲಿ ‘ತೋತಾಪುರಿ’ ರುಚಿ ಸವಿಯಬಹುದು, ಜಂಬೂ ಸವಾರಿಯಲ್ಲಿ ನಮ್ಮ ಮರಂಜನೆಯ ಜಾತ್ರೆಯನ್ನು ನೋಡಿ ಎನ್ನುತ್ತಿದ್ದಾರೆ ಚಿತ್ರದ ನಿರ್ದೇಶಕ ವಿಜಯ್‌ ಪ್ರಸಾದ್‌.

ಅಂದಹಾಗೆ ಬಿಡುಗಡೆಗೆ ಮೊದಲೇ ಎರಡು ಭಾಗಗಳಲ್ಲಿ ಸಿದ್ದಗೊಂಡಿರುವ ಬಹು ನಿರೀಕ್ಷೆಯ ‘ತೋತಾಪುರಿ’ ಚಿತ್ರದ ಪಾರ್ಚ್‌ 1 ಮಾತ್ರ ಸೆ.30ಕ್ಕೆ ಬಿಡುಗಡೆ ಆಗುತ್ತಿದೆ. ಮೈಸೂರು ಭಾಗದಲ್ಲಿ ನಡೆಯುವ ಕತೆಯ ಈ ಸಿನಿಮಾ ಮೈಸೂರು ದಸರಾ ಹೊತ್ತಿನಲ್ಲಿ ಬರುತ್ತಿರುವುದು ಮತ್ತಷ್ಟುಕುತೂಹಲಕ್ಕೆ ಕಾರಣವಾಗಿದೆ. ‘ನೀರ್‌ದೋಸೆ’ ಕಾಂಬಿನೇಶನ್‌ನ ನಾಯಕ ಹಾಗೂ ನಿರ್ದೇಶಕ, ಜತೆಗೆ ಡಾಲಿ ಧನಂಜಯ್‌, ಮಾತಿನಮಲ್ಲಿ ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ಹಿರಿಯ ನಟ ದತ್ತಣ್ಣ, ವೀಣಾ ಸುಂದರ್‌ ಹೀಗೆ ಬಹುತಾರಾಗಣ ಇರುವ ಈ ಚಿತ್ರವನ್ನು ವಿದೇಶಗಳಲ್ಲೂ ಬಿಡುಗಡೆ ಮಾಡುತ್ತಿದ್ದಾರೆ. ಕನ್ನಡಿಗರು ನೆಲೆಸಿರುವ ಸುಮಾರು 40 ದೇಶಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕರ ಜತೆಗೆ ಈಗಾಗಲೇ ಮಾತುಕತೆ ಮಾಡಿದ್ದಾರೆ. ಇದರ ಜತೆಗೆ ಕರ್ನಾಟಕದಲ್ಲೂ ದೊಡ್ಡ ಮಟ್ಟದಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಅಲ್ಲದೆ ತುಂಬಾ ವರ್ಷಗಳ ನಂತರ ಜಗ್ಗೇಶ್‌ ನಟನೆಯ ಸಿನಿಮಾ ಬಿಡುಗಡೆ ಆಗುತ್ತಿರುವುದರಿಂದ ಚಿತ್ರರಂಗದಲ್ಲೂ ದೊಡ್ಡ ಮಟ್ಟದಲ್ಲಿ ನಿರೀಕ್ಷೆಗಳು ಇವೆ. ವಿಶೇಷ ಎಂದರೆ ಕನ್ನಡದ ಜತೆಗೆ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಈ ಚಿತ್ರ ಬಿಡುಗಡೆ ಆಗುತ್ತಿರುವುದು.

ಆ. 5ಕ್ಕೆ ಜಗ್ಗೇಶ್‌ ನಟನೆಯ ರಾಘವೇಂದ್ರ ಸ್ಟೋರ್ಸ್‌ ರಿಲೀಸ್!

ಒಬ್ಬ ನಿರ್ಮಾಪಕನಾಗಿ ಈ ಚಿತ್ರದ ಮೇಲೆ ನನಗೆ ಯಶಸ್ಸಿನ ನಂಬಿಕೆ ಮೂಡಿಸಿರುವುದು ಈ ಚಿತ್ರದ ಕಾಂಬಿನೇಶನ್‌ ಹಾಗೂ ಈಗಾಗಲೇ ಹಾಡು ಹಾಗೂ ಟೀಸರ್‌ ಮೂಲಕ ಚಿತ್ರದ ಬಗ್ಗೆ ಹುಟ್ಟಿಕೊಂಡಿರುವ ನಿರೀಕ್ಷೆಗಳು. ಹೀಗಾಗಿ ‘ತೋತಾಪುರಿ 1’ ಚಿತ್ರವನ್ನು ಏಕಾಕಲಕ್ಕೆ ಕರ್ನಾಟಕ ಸೇರಿದಂತೆ ವಿದೇಶಗಳಲ್ಲೂ ಬಿಡುಗಡೆ ಮಾಡುತ್ತಿದ್ದೇವೆ.

- ಕೆ ಎ ಸುರೇಶ್‌, ನಿರ್ಮಾಪಕ

5 ಮಿಲಿಯನ್‌ಗೂ ಹೆಚ್ಚು ಮನಗಳ ಗೆದ್ದ ಟ್ರೇಲರ್

ನೀರ್ ದೋಸೆ ಸಿನಿಮಾ ಕಾಂಬಿನೇಶನ್ ಮತ್ತೆ ಒಂದಾಗಿದೆ ಅಂದಾಗಲೇ ಒಂದು ಸೆನ್ಸೇಶನ್ ಕ್ರಿಯೇಟ್ ಆಗಿ ಹೋಗಿತ್ತು.ಆ ಕಾಂಬಿನೇಶನ್ ಗೆ ‘ತೋತಾಪುರಿ’ ಎಂದು ಹೆಸರಿಟ್ಟಾಗ ಇದೇನಪ್ಪ ಇದು ಎಂದು ಗಲ್ಲಿ ಗಲ್ಲಿಗಳಲ್ಲೂ ಟೈಟಲ್ ನದ್ದೇ ಸದ್ದು ಸುದ್ದಿ. ವಿಜಯಪ್ರಸಾದ್ ಸಿನಿಮಾ, ಅವ್ರಿಡೋ ಟೈಟಲ್, ಸಂಭಾಷಣೆ ಎಲ್ಲವೂ ಡಿಫ್ರೆಂಟ್ ಅನ್ನೋದು ಜಗಜ್ಜಾಹೀರು ಆಗಿದೆ. ಇದೀಗ ಆರಂಭದಿಂದಲೂ ಸೆನ್ಸೇಶನ್ ಕ್ರಿಯೇಟ್ ಮಾಡಿಕೊಂಡು ಬಂದ ‘ತೋತಾಪುರಿ’ ಬಿಡುಗಡೆ ಸನಿಹಕ್ಕೆ ಬಂದು ನಿಂತಿದೆ. ತೋತಾಪುರಿ ಅಂತ ಯಾಕಿಟ್ರು, ಏನ್ ಹೇಳೋಕೆ ಹೊರಟಿದ್ದಾರೆ ಅನ್ನೋದನ್ನ ತಿಳಿದುಕೊಳ್ಳೋಕು ಹೆಚ್ಚು ದಿನ ಇಲ್ಲ.

ನನ್ನ ಸೊಸೆ ತ್ರಿಪಲ್ ಗ್ರಾಜುಯೇಟ್, ಮಗನ ಲವ್ ಸ್ಟೋರಿ ರಿವೀಲ್ ಮಾಡಿದ ಪರಿಮಳ ಜಗ್ಗೇಶ್!

ಹೌದು, ಸೆನ್ಸೇಷನಲ್ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಸದ್ಯದಲ್ಲೇ ಚಿತ್ರಮಂದಿರಕ್ಕೆ ಕಾಲಿಡ್ತೀವಿ ಅನ್ನೋ ಸುಳಿವನ್ನು ಚಿತ್ರತಂಡ ನೀಡಿದೆ. ಡೇಟ್ ಅನೌನ್ಸ್ ಆಗಬೇಕಿದೆಯಷ್ಟೇ. ಟ್ರೇಲರ್ ಬಿಡುಗಡೆ ಆಗಿದ್ದೇ ಆಗಿದ್ದು ತೋತಾಪುರಿ ಹವಾ ಮತ್ತಷ್ಟು ಜೋರಾಗಿದೆ. ಸಿನಿಮಾದಲ್ಲೇನೋ ವಿಶೇಷ ಅಂಶ ಇದೆ ಅನ್ನೋದನ್ನು ಅದೇ ಟ್ರೇಲರ್ ಹೇಳುತ್ತಿದೆ. ಸಾಮರಸ್ಯ, ಕರ್ಮ, ಧರ್ಮ, ಜಾತಿ, ನಂಬಿಕೆ ಹೀಗೆ ನಾನಾ ವಿಚಾರಗಳು ಟ್ರೇಲರ್ ಝಲಕ್ ನಲ್ಲಿವೆ ಇವೆಲ್ಲವೂ ತೋತಾಪುರಿ ಬಗೆಗಿದ್ದ ಮೊದಲಿನ ಇಮ್ಯಾಜಿನೇಶನ್ ನನ್ನು ಬೇರೆ ಲೆವೆಲ್ಗೆ ಕೊಂಡೊಯ್ದಿದೆ. ಅಲ್ಲಿಗೆ ಕಾಮಿಡಿ ಜೊತೆಗೆ ಒಂದೊಳ್ಳೆ ವಿಚಾರವನ್ನು ಚಿತ್ರ ಸಾರುತ್ತೆ ಅನ್ನೋದು ಕನ್ಫರ್ಮ್ ಅದೇನು ಎತ್ತ ಅನ್ನೋದಕ್ಕೆ ಸಿನಿಮಾ ಬಿಡುಗಡೆಯಾಗಬೇಕು. ಸದ್ಯಕ್ಕಂತೂ ಮಿಲಿಯನ್ಗೂ ಹೆಚ್ಚಿನ ವೀಕ್ಷಣೆ ಪಡೆದು ಬಿಡುಗಡೆಯಾದ ಟ್ರೇಲರ್ ಟ್ರೆಂಡಿಂಗ್ ನಲ್ಲಿದೆ.