ನನ್ನ ಸೊಸೆಗೆ ನನ್ನ ಮೊಮ್ಮಗ ಕನ್ನಡ ಹೇಳಿಕೊಡುತ್ತಿದ್ದಾನೆ. ಜೀವನ ಎಷ್ಟು ಸುಂದರವಾಗಿದೆ ಎಂದು ಹಂಚಿಕೊಂಡ ಪರಿಮಳ ಜಗ್ಗೇಶ್.
ಕನ್ನಡ ಚಿತ್ರರಂಗ ನವರಸ ನಾಯಕ ಜಗ್ಗೇಶ್ (Jaggesh) ಮತ್ತು ಪರಿಮಳ (Parimala Jaggesh) ಅವರ ಪುತ್ರ ನಟ ಗುರುರಾಜ್ (Gururaj Jaggesh) ಎಂಟು ವರ್ಷಗಳ ಹಿಂದೆ ವಿದೇಶಿ ಹುಡುಗಿ ಕೇಟಿಯನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸೊಸೆ ಪಬ್ಲಿಕ್‌ನಲ್ಲಿ ಕಾಣಿಸಿಕೊಳ್ಳುವುದು ಕಡಿಮೆ, ಹೀಗಾಗಿ ಅವರು ಫ್ಯಾಮಿಲಿ ಬಗ್ಗೆ ಅಭಿಮಾನಿಗಳಿಗೆ ಇರುವ ಕ್ಯೂರಿಯಾಸಿಟಿಯನ್ನು ಪರಿಮಳ ಕ್ಲಿಯರ್ ಮಾಡಿದ್ದಾರೆ.
ಪರಿಮಗಳ ಜಗ್ಗೇಶ್ ಮಾತು:
'ನಾನು ಜಗ್ಗಿನ ನೋಡಿ ಇಷ್ಟ ಪಟ್ಟಿ ಗುರು ಕೇಟಿನ ನೋಡಿ ಇಷ್ಟ ಪಟ್ಟಿದ್ದಾರೆ ಇಲ್ಲಿ ಏನೂ ಡಿಫರೆನ್ಸ್ ಇಲ್ಲ. ನನ್ನ ಪೋಷಕರಿಗೆ ಹೇಗೆ ಭಯ ಇತ್ತು ಜಗ್ಗಿ ನನ್ನ ಹೇಗೆ ನೋಡಿಕೊಳ್ಳುತ್ತಾರೆ ಅಂತ ಹಾಗೆ ನನಗೆ ಗುರು ಬಗ್ಗೆ ಗೊತ್ತು. ಜವಾಬ್ದಾರಿ ಇರುವ ಹುಡುಗ ಚಿಕ್ಕವನಲ್ಲ ಅವನು ನಿರ್ಧಾರ ತೆಗೆದುಕೊಂಡಾಗ ನಮಗೆ ಭರವಸೆ ಇತ್ತು. ನಮ್ಮ ಮನೆಯವರು ಕ್ಲಿಯರ್ ಆಗಿದ್ದರು ಏನೇ ಸಮಸ್ಯೆ ಬಂದು ನೀವಿಬ್ಬರು ಒಟ್ಟಿಗೆ ಇರುತ್ತಿರಾ ಅಂದ್ರೆ ಮದುವೆ ಮಾಡಿಸುತ್ತೀನಿ. ಬೇರೆ ದೇಶ ಊಟ ವ್ಯತ್ಯಾಸ ಅವರಿಗೆ ಕಾರ ತಿನ್ನುವುದಕ್ಕೆ ಕಷ್ಟ ಆಗುತ್ತದೆ ಹೀಗೆ ಅನೇಕ ಚಾಲೆಂಚ್‌ಗಳು ಇರುತ್ತದೆ ನೀವಿಬ್ಬರು ರೆಡಿ ಅಂದ್ರೆ ಏನ್ ಬೇಕು?ನನ್ನ ಮಗ ಖುಷಿಯಾಗಿರಬೇಕು, ನಾಳೆ ದಿನ ನಾನು ಹೋದಾಗ ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳುಬೇಕು. ಮೊನ್ನೆ ಅವರಿಬ್ಬರು ಮದುವೆಯಾಗಿ 8 ವರ್ಷ ಆಯ್ತು ಎಲ್ಲೋ ಹುಟ್ಟಿ ಇಲ್ಲಿಗೆ ಬಂದು ಸೆಟೆಲ್ ಆಗಿ ಹೊಂದಿಕೊಳ್ಳುತ್ತಿದ್ದಾರೆ. ಹೈಲೈಟ್ ಅಂದ್ರೆ ಮೊಮ್ಮಗ ಅಮ್ಮನಿಗೆ ಕನ್ನಡ ಹೇಳಿಕೊಡುತ್ತಿದ್ದಾನೆ' ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಹೇಳಿದ್ದಾರೆ.

ಲವ್ ಸ್ಟೋರಿ:
'ಗುರು ಥೈಲೈಂಡ್‌ನಲ್ಲಿ ಬಾಕ್ಸಿಂಗ್ ಟ್ರೈನಿಂಗ್ ಹೋಗಿದ್ದ, ಕೇಟಿ ಥೈಲ್ಯಾಂಡ್‌ನಲ್ಲಿ ಹುಟ್ಟಿದ್ದು UKನಲ್ಲಿ ಕೆಲಸ ಮಾಡುತ್ತಿದ್ದರು. ಕೇಟಿ ಪ್ರಯಾಣ ಮಾಡಲು ಶುರು ಮಾಡಿದಾಗ ಅವರು ಎರಡು ತಿಂಗಳು ಅದೇ ಕ್ಯಾಂಪ್ ಸೇರಿಕೊಂಡರು. ನನ್ನ ಸೊಸೆ ಕೇಟಿ ತುಂಬಾ ಕೆಲಸ ಮಾಡುತ್ತಿದ್ದರು ಹೀಗಾಗಿ ಅವರ ತಾತ ಪ್ರಪಂಚ ಸುಂದರವಾಗಿದೆ ನೀನು ಯಾಕೆ ಕೆಲಸ ಅಂತ ಇದ್ಯಾ ಪ್ರಯಾಣ ಮಾಡು ಎಂದು ಸಲಹೆ ಕೊಟ್ಟರು. ನನ್ನ ಸೊಸೆ ಮಾರ್ಷಿಯಲ್ ಆರ್ಟ್ಸ್‌ನಲ್ಲಿ ಬ್ಲ್ಯಾಕ್ ಬೆಲ್ಟ್ ಇದೆ ಹಾಗೂ ಮೂರು ಪದವಿಗಳಿಗೆ. ನನ್ನ ಹುಟ್ಟುಹಬ್ಬ ಅಕ್ಟೋಬರ್ 27 ಕೇಟಿ ಹುಟ್ಟುಹಬ್ಬ 28, ನನ್ನ ಮಗ ಇಬ್ಬರ ಬರ್ತಡೇ ಮರೆಯುವುದಕ್ಕೆ ಆಗೋಲ್ಲ ಇಬ್ಬರು ಮಧ್ಯ ಅವನು ಸ್ಯಾಂಡ್ವಿಚ್ ಆಗಿದ್ದಾನೆ' ಎಂದು ಪರಿಮಳ ಹೇಳಿದ್ದಾರೆ.
ಜಗ್ಗೇಶ್ ವರ್ಕೌಟ್ ನೋಡಿ ಮತ್ತೊಂದು ಮದುವೆಗೆ ತಯಾರಿನಾ ಎಂದ ಅಭಿಮಾನಿ; ನವರಸನಾಯಕನ Reply ಹೀಗಿದೆ
' ಎರಡು ತಿಂಗಳ ಕ್ಯಾಂಪ್ ಆದ ಮೇಲೆ ನನಗೆ ಕರೆ ಮಾಡಿ ವೀಕೆಂಡ್‌ಗೆ ಬಾ ಎಂದು ಕೇಳಿದ, ನನ್ನ ಕಿರಿಯ ಪುತ್ರ Yathirajನ ಕರೆದುಕೊಂಡು ಬಾ ಎಂದು ಹೇಳಿದ ಆಗಲೇ ನನಗೆ ಕ್ಲಿಯರ್ ಆಯ್ತು.ಇವನನ್ನು ಕೇಳಿದೆ ಏನೋ ನಿಮ್ಮ ಅಣ್ಣ ಯಾರ್ನಾದ್ರೂ ಕ್ಯಾಚ್ ಹಾಕೊಂಡಿದ್ದಾನಾ ಅಂತ. ಅವನು ಏನೂ ಮಾಹಿತಿ ಬಿಟ್ಟು ಕೊಡಲಿಲ್ಲ ಅವರಿಬ್ಬರು ತುಂಬಾ ಕ್ಲೋಸ್ ಆಗಿದ್ದಾರೆ. ಎಲ್ಲಿ ಹೋದಾಗ ಕೇಟಿ ನನ್ನ ಒಳ್ಳೆ ಸ್ನೇಹಿತೆ ಎಂದು ಪರಿಚಯ ಮಾಡಿಕೊಟ್ಟರು ನಮಗೆ ಗೊತ್ತು ಒಳ್ಳೆಯ ಸ್ನೇಹಿತೆ ಅಂದ್ರೆ ಹೇಗೆ ಅಂತ ನಾವು ಆ ಸ್ನೇಹ ಎಲ್ಲಾ ಎಷ್ಟು ನೋಡಿದ್ದೀನಿ. ಆಕೆಗೆ ತುಂಬಾ ಜವಾಬ್ದಾರಿ ಇದೆ. ಈ ವಿಚಾರನ ಜಗ್ಗಿಗೆ ಹೇಳಿದೆ ಅವರು ಏನೂ ಉತ್ತರ ಕೊಡಲಿಲ್ಲ. ನಾವಿಬ್ಬರು ಒಪ್ಪಿಕೊಂಡೆವು' ಎಂದಿದ್ದಾರೆ ಪರಿಮಳ.
ಜಗ್ಗೇಶ್ ದಂಪತಿಯ ವಿವಾಹ ವಾರ್ಷಿಕೋತ್ಸವ; ವಿಶೇಷ ವಿಡಿಯೋ ಶೇರ್ ಮಾಡಿದ ನವರಸನಾಯಕ
'ಅವರಿಬ್ಬರು ಖುಷಿಯಾಗಿದ್ದರೆ ಸಾಕು ನಾವು ಖುಷಿಯಾಗಿರುತ್ತೀವಿ. ಎಷ್ಟೋ ಜನ ಕೇಳುತ್ತಾರೆ ನೀವು ಅತ್ತೆ ಸೊಸೆ ಜಗಳ ಮಾಡಿಲ್ವಾ ಎಂದು. ಯಾಕೆ ಜಗಳ ಮಾಡಬೇಕು ಅಂತ ನಾನು. ದೊಡ್ಡದಾಗಿ ಯೋಚನೆ ಮಾಡಬೇಕು. ಅವರಿಬ್ಬರ ನಡುವೆ ಹೊಂದಾಣಿಗೆ ಇದ್ದರೆ ಸಾಕು ಎಲ್ಲಾ ಸಣ್ಣ ಪುಟ್ಟ ಜಗಳ. ನಾನು ತಾಯಿ ಆಕೆ ಸೊಸೆ ನಮ್ಮ ಸ್ಥಾನ ನಮಗೆ ಎಲ್ಲಾನೂ ಎಂಜಾಯ್ ಮಾಡಬೇಕು. ಕಂಡೂ ಕಾಣದಂತೆ ಇದ್ದರೆ ಲೈಫ್ ಸೂಪರ್ ಆಗಿರುತ್ತೆ. ಒಳ್ಳೆ ವಿಚಾರಕ್ಕೆ ನನಗೆ ತುಂಬಾ ದಿನಗಳು ನೆನಪು ಇರುತ್ತದೆ ದುಖಃ ಕೊಟ್ಟರೆ ಅಲ್ಲೇ ಮರೆತು ಬಿಡುತ್ತೀನಿ ಏಕೆಂದರೆ ನಾನು ಜನರಿಗೆ ದೊಡ್ಡ ರೋಪ್ ಕೊಡುತ್ತೀನಿ ಬೇಗ ಅವರನ್ನು ಜಡ್ಜ್ ಮಾಡಲ್ಲ ಅವರಿಗೆ ಸಮಯ ಕೊಟ್ಟು ತಿಳಿದುಕೊಳ್ಳುತ್ತಿನಿ. ಅವರು ಹೀಗೆ ಎಂದು ಫಿಕ್ಸ್ ಆದ ಮೇಲೆ ಬೇರೆ ಅವರ ಮಾತು ಕೇಳಿ ಬದಲಾಗಬಾರದು. ಯಾರೇ ಎದುರಿಗೆ ಇದ್ದರೂ ಅದನ್ನು ಅರ್ಥ ಮಾಡಿಕೊಳ್ಳಬೇಕು ದೊಡ್ಡ ವಿಚಾರ ಮಾಡಬಾರದು' ಎಂದು ಪರಿಮಗಳ ಮಾತನಾಡಿದ್ದಾರೆ.
