ಆ. 5ಕ್ಕೆ ಜಗ್ಗೇಶ್ ನಟನೆಯ ರಾಘವೇಂದ್ರ ಸ್ಟೋರ್ಸ್ ರಿಲೀಸ್!
ರಿಲೀಸ್‌ಗೆ ಸಜ್ಜಾಯ್ತು ರಾಘವೇಂದ್ರ ಸ್ಟೋರ್ಸ್ ಸಿನಿಮಾ. ಇನ್ಮುಂದೆ ತೆರೆ ಮೇಲೆ ಜಗ್ಗೇಶ್ ಹವಾ ಜೋರು.
ಜಗ್ಗೇಶ್ (Jaggesh) ನಟನೆಯ ಹಾಸ್ಯ ಪ್ರಧಾನ ಚಿತ್ರ ‘ರಾಘವೇಂದ್ರ ಸ್ಟೋರ್ಸ್’ (Raghavendra Stores) ಆಗಸ್ಟ್ 5ಕ್ಕೆ ಥಿಯೇಟರ್‌ಗೆ ಬರಲಿದೆ.
ಈ ಚಿತ್ರ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ (Hombale Films) ವರಮಹಾಲಕ್ಷ್ಮೇ ಹಬ್ಬದ ದಿನ ಚಿತ್ರದ ಬಿಡುಗಡೆಯನ್ನು ಘೋಷಿಸಿದೆ.
ಸಂತೋಷ್ ಆನಂದ್‌ರಾಮ್ (Santhosh Anandram) ನಿರ್ದೇಶನದ ಚಿತ್ರದಲ್ಲಿ ಜಗ್ಗೇಶ್ ಅವಿವಾಹಿತ ಅಡುಗೆ ಭಟ್ಟನ ಪಾತ್ರದಲ್ಲಿ ನಟಿಸಿದ್ದಾರೆ.
ಶ್ವೇತಾ ಶ್ರೀವಾತ್ಸವ್ (Shwetha Srivatsav) ನಾಯಕಿ. ಅಜನೀಶ್ ಲೋಕನಾಥ್ (Ajaneesh Loknath) ಸಂಗೀತವಿದೆ. ವಿಜಯ ಕಿರಗಂದೂರು ಚಿತ್ರದ ನಿರ್ಮಾಪಕರು.
ಇತ್ತೀಚಿಗೆ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ವರ್ಕೌಟ್ ವಿಡಿಯೋ(Workout Video) ಶೇರ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಜಗ್ಗೇಶ್ ವರ್ಕೌಟ್ ವಿಡಿಯೋ ನೋಡಿ ಅಭಿಮಾನಿಗಳಿಂದ ತರಹೇವಾರಿ ಪ್ರಶ್ನೆಗಳು ಹರಿದುಬಂದಿವೆ. ಇದು ನಿಜಕ್ಕೂ ಈಗಿನ ವಿಡಿಯೋನಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಅನೇಕರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.