ಇಕ್ಷಣ’ ಕಿರುಚಿತ್ರ 1 ಮಿಲಿಯನ್‌ ವೀಕ್ಷಣೆ ದಾಖಲಿಸಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌(Viral) ಹತ್ತೂವರೆ ಲಕ್ಷಗಳಷ್ಟುವೀಕ್ಷಣೆ ದಾಖಲಿಸಿರುವ ಈ ಕಿರುಚಿತ್ರಕ್ಕೆ ಡಿಸ್‌ಲೈಕ್‌ಗಳೇ ಇಲ್ಲ

ದಿಯಾ ಖ್ಯಾತಿಯ ಖುಷಿ ರವಿ(Kushee Ravi) ನಟನೆಯ ‘ಇಕ್ಷಣ’ ಕಿರುಚಿತ್ರ 1 ಮಿಲಿಯನ್‌ ವೀಕ್ಷಣೆ ದಾಖಲಿಸಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌(Viral) ಆಗಿದೆ. ಫ್ಲಿಕರಿಂಗ್‌ ಸ್ಟುಡಿಯೋಸ್‌ ಯೂಟ್ಯೂಬ್‌ ಚಾನಲ್‌ನಲ್ಲಿ ಈ ಕಿರುಚಿತ್ರ ವೀಕ್ಷಣೆಗೆ ಲಭ್ಯವಿದೆ.

ಸೀತಾ ಕೋಟೆ, ಕೆ ಎಸ್‌ ಶ್ರೀಧರ್‌ ಮುಖ್ಯಪಾತ್ರದಲ್ಲಿದ್ದಾರೆ. ಚಲನಚಿತ್ರ ಸಂಭಾಷಣೆಕಾರ ಪ್ರಸನ್ನ ವಿಎಂ ಕತೆ ಬರೆದು ನಿರ್ದೇಶಿಸಿದ್ದಾರೆ. ಸುಸ್ಮಿತಾ ಸಮೀರ ನಿರ್ಮಾಪಕರು. ಇದು ಮೇಲ್ನೋಟಕ್ಕೆ ಮನೆಯಲ್ಲಿ ಹೆಣ್ಣಿಗಾಗುವ ತಾರತಮ್ಯದ ಕಥೆಯಂತೆ ಕಾಣುತ್ತದೆ. ಆದರೆ ಅದರಿಂದ ಹೊರತಾಗಿ, ಸರಿ ತಪ್ಪುಗಳು ನಮ್ಮ ದೃಷ್ಟಿಕೋನ, ವಸ್ತುವನ್ನು ನೋಡುವ ಬಗೆಯಲ್ಲಿ ಹೇಗೆ ಬದಲಾಗ್ತಾ ಹೋಗುತ್ತದೆ ಎಂಬುದನ್ನು ಹೇಳುತ್ತದೆ. ಹತ್ತೂವರೆ ಲಕ್ಷಗಳಷ್ಟುವೀಕ್ಷಣೆ ದಾಖಲಿಸಿರುವ ಈ ಕಿರುಚಿತ್ರಕ್ಕೆ ಡಿಸ್‌ಲೈಕ್‌ಗಳೇ ಇಲ್ಲ. ಬದಲಿಗೆ ಸುಮಾರು 50 ಸಾವಿರಗಳಷ್ಟುಜನ ಲೈಕ್‌ ಮಾಡಿದ್ದಾರೆ. ಮಹೇನ್‌ ಸಿಂಹ ಸಿನಿಮಾಟೋಗ್ರಫಿ, ಜುಬಿನ್‌ ಪೌಲ್‌ ಸಂಗೀತ, ಶ್ರೀಕಾಂತ್‌ ಎಸ್‌ಎಚ್‌ ಸಂಕಲನ ಈ ಕಿರುಚಿತ್ರಕ್ಕಿದೆ.

ಮದುವೆಯಾ ನಟಿಯರನ್ನು ನೋಡುವ ರೀತಿ ಬದಲಾಗಿದೆ: ಖುಷಿ ರವಿ

ತುಂಬಾ ಸಂತೋಷವಾಗುತ್ತಿದೆ. ದಿಯಾ ಸಿನಿಮಾ ರಿಲೀಸ್ ಆದಾಗಿನಿಂದಲೂ ಹೊಸ ಅವಕಾಶಗಳು ಬರುತ್ತಲೇ ಇವೆ. ತೆಲುಗು ಸಿನಿಮಾ ತಂಡ ದಿಯಾ ಚಿತ್ರ ನೋಡಿದ ನಂತರ ನನ್ನನ್ನು ಸಂಪರ್ಕಿಸಿದ್ದು. ಇದರಿಂದ ದಿನೇ ದಿನೇ ನಿರೀಕ್ಷೆ ಹೆಚ್ಚಾಗುತ್ತಿದೆ. ಈಗಿನ ಕಾಲದಲ್ಲಿ ನಾವು ಇಷ್ಟು ಮುಂದುವರೆದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ನಮಗೆ ನಾವು ಲಕ್ಕಿ ಎಂದು ಕೊಳ್ಳಬೇಕು. ನಾನು ನನ್ನ ಕುಟುಂಬಕ್ಕೆ ಸದಾ ಥ್ಯಾಂಕ್‌ಫುಲ್ ಆಗಿರುವೆ. ನನ್ನ ಪತಿ ತುಂಬಾ ಪ್ರೋತ್ಸಾಹ ಮಾಡುತ್ತಾರೆ. ನನ್ನ ಆಯ್ಕೆ ಹಾಗೂ ನಿರ್ಧಾರಗಳನ್ನು ನಂಬುತ್ತಾರೆ. ಅವರೇ ನನ್ನ ಶಕ್ತಿ,' ಎಂದು ಖುಷಿ ಟೈಮ್‌ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಈ ಹಿಂದೆ ಹೇಳಿದ್ದರು.

ಅಡಿಪೊಳಿ ಆಲ್ಬಂ ಸಾಂಗ್

ದಿಯಾ ಸಿನಿಮಾದಲ್ಲಿ ಮಿಂಚಿ ಬೆಸ್ಟ್ ಲೀಡ್ ರೋಲ್‌ಗೆ ಸೈಮಾ ಅವಾರ್ಡ್ ಮುಡಿಗೇರಿಸಿಕೊಂಡ ನಟಿ ಖುಷಿ ರವಿ(Khushi Ravi) ಈಗ ಕಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಟಾಲಿವುಡ್‌ನಲ್ಲಿ ನಟಿಸಿರೋ ಖುಷಿ, ಸ್ಯಾಂಡಲ್‌ವುಡ್‌ನಲ್ಲಿ ಮಿಂಚಿ, ಕಾಲಿವುಡ್‌ಗೂ ಹೆಜ್ಜೆ ಇಟ್ಟು ಸೌತ್‌ನ ಪ್ರಮುಖ 4 ಭಾಷೆಗಳಲ್ಲಿ 3 ಭಾಷೆಗಳಲ್ಲಿ ಈಗಾಗಲೇ ಛಾಪು ಮೂಡಿಸಿಬಿಟ್ಟಿದ್ದಾರೆ. ಇನ್ನು ಮಾಲಿವುಡ್‌ಗೆ ಬರೋದಂದು ಬಾಕಿ.

ಇತ್ತೀಚೆಗೆ ರಿಲೀಸ್ ಆದ ಆಲ್ಬಂ ಸಾಂಗ್‌ನಲ್ಲಿ ನಟಿ ಕೇರಳ(Kerala) ಕುಟ್ಟಿಯಾಗಿ ಮಿಂಚಿದ್ದಾರೆ. ಈ ಆಲ್ಬಂ ಸಾಂಗ್ ಅಂತೂ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಡಿಪೊಳಿ ಅನ್ನೋ ಹಾಡಿನಲ್ಲಿ ಡ್ಯಾನ್ಸ್‌ಗೂ ಕಮ್ಮಿ ಇಲ್ಲ ಅಂತ ತೋರಿಸಿಕೊಟ್ಟಿದ್ದಾರೆ ಖುಷಿ.

ಮಗಳ ಹಿಂದೆ ಓಡೋದೇ ನನ್ನ ವರ್ಕೌಟ್‌: ಖುಷಿ

ಮತ್ತೆ ಕೆಲಸಕ್ಕೆ ಮರಳುವಂತಾಗಿರುವುದು ತುಂಬಾ ರೋಮಾಂಚನಕಾರಿಯಾಗಿದೆ. ಇದು ತಮಿಳಿನಲ್ಲಿ ನನ್ನ ಮೊದಲ ಅಸೈನ್‌ಮೆಂಟ್ ಆಗಿದ್ದು, ಇದು ಸೂಪರ್‌ಹಿಟ್ ಕುಟ್ಟಿ ಪಟ್ಟಾಸ್‌ನ ಹಿಂದಿರುವ ಜನರ ಆಲ್ಬಂ ಹಾಡು ಎಂಬುದು ಎರಡು ಪಟ್ಟು ವಿಶೇಷವಾಗಿದೆ. ಈ ಆಲ್ಬಂ ಸಾಂಗ್ 1 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ನಿಸ್ಸಂಶಯವಾಗಿ, ಅದೇ ತಂಡವು ನನ್ನನ್ನು ಸಂಪರ್ಕಿಸಿದಾಗ, ನಾನು ಉತ್ಸುಕಳಾಗಿದ್ದೆ ಎಂದು ಖುಶಿ ಹೇಳಿದ್ದಾರೆ. ಈ ಹಾಡಿಗೆ ಅಡಿಪೊಳಿ ಎಂದು ಹೆಸರಿಡಲಾಗಿದೆ.

YouTube video player

ಇದರಲ್ಲಿ ಖುಶಿಯನ್ನು ಮಲಯಾಳಿ ಚೆಲುವೆಯಾಗಿ ತೋರಿಸಲಾಗಿದೆ. ಕುಟ್ಟಿ ಪಟ್ಟಾಸ್‌ನಲ್ಲಿ ಸಹ ಕುಮಾಲ್ ಖ್ಯಾತಿಯ ಕುಕ್‌ನ ಅಶ್ವಿನ್ ಕುಮಾರ್ ಹಿರೋ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ಅವರು ನನಗೆ ಪ್ರಪೋಸ್ ಮಾಡೋಕೆ ಬರುವ ತಮಿಳು ಹುಡುಗನ ಪಾತ್ರವನ್ನು ಮಾಡಿದ್ದಾರೆ ಎಂದು ಹೇಳಿದ್ದಾರೆ. ನಿಜ ಜೀವನದಲ್ಲಿ ಶಾಸ್ತ್ರೀಯ ನೃತ್ಯ ಅಭ್ಯಾಸ ಮಾಡಿರುವ ಖುಷಿಗೆ ಈ ಸೂಪರ್ ಡ್ಯಾನ್ಸ್ ಹೊಸ ಸ್ಟೈಲ್. ಈ ಪ್ರಾಜೆಕ್ಟ್ ನನಗೆ ತುಂಬಾ ಹೊಸದಾಗಿದೆ. ನಾವು ಅದಕ್ಕಾಗಿ ಅಭ್ಯಾಸ ಮಾಡುತ್ತಿದ್ದಾಗ ನಾನು ಅದನ್ನು ಸಂಪೂರ್ಣವಾಗಿ ಎಂಜಾಯ್ ಮಾಡಿದೆ ಎಂದಿದ್ದಾರೆ.