Asianet Suvarna News Asianet Suvarna News

ಮದುವೆಯಾ ನಟಿಯರನ್ನು ನೋಡುವ ರೀತಿ ಬದಲಾಗಿದೆ: ಖುಷಿ ರವಿ

ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ನಟಿ ಖುಷಿ ತುಂಬಾ ಖುಷಿಯಾಗಿದ್ದಾರೆ. ತಮ್ಮ ಸಿನಿ ಜರ್ನಿ ಬಗ್ಗೆ ಅವರು ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. 
 

Actress Kushee Ravi says attitude towards married actresses is changing in film industries vcs
Author
Bangalore, First Published Sep 23, 2021, 4:34 PM IST
  • Facebook
  • Twitter
  • Whatsapp

'ದಿಯಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟ ರಂಗಭೂಮಿ ಕಲಾವಿದ ಖುಷಿ ರವಿ ಇದೀಗ ಬ್ಯಾಕ್ ಟು ಬ್ಯಾಕ್ ಸಿನಿಮಾ ಹಾಗೂ ಮ್ಯೂಸಿಕ್ ಆಲ್ಬಂಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲದೇ ತೆಲುಗು ಪ್ರಾಜೆಕ್ಟ್‌ಗಳಿಗೂ ಸಹಿ ಮಾಡಿರುವ ಖುಷಿ, ಮದುವೆ ಆಗಿರುವ ನಟಿಯರನ್ನು ಚಿತ್ರರಂಗ ನೋಡುತ್ತಿರುವ ದೃಷ್ಟಿ ಬದಲಾಗಿದೆ ಎಂದಿದ್ದಾರೆ. 

ಮಗಳ ಹಿಂದೆ ಓಡೋದೇ ನನ್ನ ವರ್ಕೌಟ್‌: ಖುಷಿ

'ತುಂಬಾ ಸಂತೋಷವಾಗುತ್ತಿದೆ. ದಿಯಾ ಸಿನಿಮಾ ರಿಲೀಸ್ ಆದಾಗಿನಿಂದಲೂ ಹೊಸ ಅವಕಾಶಗಳು ಬರುತ್ತಲೇ ಇವೆ. ತೆಲುಗು ಸಿನಿಮಾ ತಂಡ ದಿಯಾ ಚಿತ್ರ ನೋಡಿದ ನಂತರ ನನ್ನನ್ನು ಸಂಪರ್ಕಿಸಿದ್ದು. ಇದರಿಂದ ದಿನೇ ದಿನೇ ನಿರೀಕ್ಷೆ ಹೆಚ್ಚಾಗುತ್ತಿದೆ. ಈಗಿನ ಕಾಲದಲ್ಲಿ ನಾವು ಇಷ್ಟು ಮುಂದುವರೆದ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವುದಕ್ಕೆ ನಮಗೆ ನಾವು ಲಕ್ಕಿ ಎಂದು ಕೊಳ್ಳಬೇಕು. ನಾನು ನನ್ನ ಕುಟುಂಬಕ್ಕೆ ಸದಾ ಥ್ಯಾಂಕ್‌ಫುಲ್ ಆಗಿರುವೆ. ನನ್ನ ಪತಿ ತುಂಬಾ ಪ್ರೋತ್ಸಾಹ ಮಾಡುತ್ತಾರೆ. ನನ್ನ ಆಯ್ಕೆ ಹಾಗೂ ನಿರ್ಧಾರಗಳನ್ನು ನಂಬುತ್ತಾರೆ. ಅವರೇ ನನ್ನ ಶಕ್ತಿ,' ಎಂದು ಖುಷಿ ಟೈಮ್‌ ಆಫ್ ಇಂಡಿಯಾಗೆ ನೀಡಿರುವ ಸಂದರ್ಶನದಲ್ಲಿ ಹೇಳಿ ಕೊಂಡಿದ್ದಾರೆ.

Actress Kushee Ravi says attitude towards married actresses is changing in film industries vcs

ಕೆಲವು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಸೈಮಾ ಅವಾರ್ಡ್‌ ಕಾರ್ಯಕ್ರಮದಲ್ಲಿ ಖುಷಿ ದಿಯಾ ಚಿತ್ರದಿಂದ ಬೆಸ್ಟ್ ಲೀಡ್ ರೋಲ್‌ ನಟಿ ಕ್ರಿಟಿಕ್ 2020 ಪ್ರಶಸ್ತಿ ಸ್ವೀಕರಿಸಿದ್ದಾರೆ. 'ನನ್ನ ಕನಸುಗಳಿಗೆ ದಿಯಾ ದಾರಿ ದೀಪ ಆಗಿತ್ತು. ಸೈಮಾ ಅವಾರ್ಡ್ಸ್‌ ಅದಕ್ಕೆ ಇನ್ನೂ ಹೆಚ್ಚಿನ ಬೆಳಕು ನೀಡಿದೆ. ನನ್ನನ್ನು ಒಪ್ಪಿಕೊಂಡು, ಗೌರವಿಸಿ ಹಾಗೂ ಪ್ರೀತಿಸುತ್ತಿರುವವರಿಗೆ  ಧನ್ಯವಾದಗಳು,' ಎಂದು ಖುಷಿ ಬರೆದುಕೊಂಡಿದ್ದಾರೆ. ಸೈಮಾ ಕಾರ್ಯಕ್ರಮದಲ್ಲಿ ಫ್ರಾಕ್‌ನಲ್ಲಿ ಕಾಣಿಸಿಕೊಂಡ ಖುಷಿ ಫೋಟೋಗೆ 'ಎರಜೂವರೆ ವರ್ಷದ ಮಗಳಿಗೆ ಮಮ್ಮಿ ಆದರೂ ನೀವು ಈ ಲುಕ್‌ನಲ್ಲಿ ಸೂಪರ್ ಆಗಿದ್ದೀರಿ,' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

 

Follow Us:
Download App:
  • android
  • ios