ದಿಯಾ ಸಿನಿಮಾದ ಮೂಲಕ ಎಂಟ್ರಿಕೊಟ್ಟಖುಷಿ ಅವರ ಬಳಿ ಈಗ ನಾಲ್ಕೈದು ಸಿನಿಮಾಗಳಿವೆ. ಆ ನಡುವೆ ಅವರ ನಟನೆಯ ತಮಿಳು ಆಲ್ಬಂ ವೈರಲ್‌ ಆಗಿದೆ. ಇಷ್ಟರ ನಡುವೆ ಮಗಳ ಜೊತೆ ಸಮಯ ಕಳೆಯೋದನ್ನೂ ಎನ್‌ಜಾಯ್‌ ಮಾಡ್ತಿದ್ದಾರೆ.

ಪ್ರಿಯಾ ಕೆರ್ವಾಶೆ

ಖುಷಿ ಲೈಫ್‌ ಹೇಗಿದೆ?

ಖುಷ್‌ ಖುಷಿಯಾಗಿದೆ.

ಬೇರೆ ಭಾಷೆಯಿಂದ ಆಫರ್‌ಗಳು ಬರ್ತಿವೆಯಂತೆ?

ನಮ್ಮ ದಿಯಾ ಸಿನಿಮಾ ತೆಲುಗಲ್ಲಿ ರಿಲೀಸ್‌ ಆಗಿದೆಯಲ್ಲಾ, ನನ್ನ ಪಾತ್ರವನ್ನು ಮೆಚ್ಚಿಕೊಂಡು ಸಾಕಷ್ಟುಜನ ಕಾಲ್‌ ಮಾಡಿದ್ರು. ತೆಲುಗು, ತಮಿಳು ಸಿನಿಮಾಗಳ ಆಫರ್‌ಗಳೂ ಬರ್ತಿವೆ. ಸದ್ಯಕ್ಕೆ ಕೈಯಲ್ಲಿರುವ ಚಿತ್ರಗಳನ್ನು ಮುಗಿಸಬೇಕು ಅಂತ ಅಂದುಕೊಂಡಿದ್ದೀನಿ.

ಹಾರ್ಡ್‌ವರ್ಕ್ ಗೆಲ್ಲಿಸುತ್ತ: ದಿಯಾ ಚಿತ್ರದ ನಾಯಕಿ ಖುಷಿ

ಮಲಯಾಳಿ ಕುಟ್ಟಿಲುಕ್‌ನಲ್ಲೂ ಗಮನಸೆಳೆದಿರಿ?

ಹೌದು, ಅದೊಂದು ತಮಿಳು ಆಲ್ಬಂ. ಅಡಿ ಪೊಲಿ ಅಂತ. 75 ಲಕ್ಷಕ್ಕೂ ಅಧಿಕ ವೀಕ್ಷಣೆ ದಾಖಲಿಸಿದೆ. ಇದರಲ್ಲಿ ನಾನು ಮಲಯಾಳಿ ಹುಡುಗಿ, ನನ್ನ ಇಷ್ಟಪಡೋ ತಮಿಳು ಹುಡುಗನ ಪಾತ್ರದಲ್ಲಿ ಅಶ್ವಿನ್‌ ಕುಮಾರ್‌ ಇದ್ದಾರೆ. ಓಣಂ ಸಮಯ, ತಮ್ಮಿಬ್ಬರ ಪ್ರೇಮದ ವಿಷಯ ತಿಳಿಸಲು, ಹುಡುಗ ಹುಡುಗಿ ಮನೆಗೆ ಬರುವ ಸನ್ನಿವೇಶವೇ ಆಲ್ಬಂ ಆಗಿದೆ. ಜನ ಇದನ್ನು ಈ ಲೆವೆಲ್‌ನಲ್ಲಿ ಇಷ್ಟಪಟ್ಟಿದ್ದಕ್ಕೆ ಬಹಳ ಖುಷಿ.

ಯಾವೆಲ್ಲ ಸಿನಿಮಾಗಳು ಕೈಯಲ್ಲಿವೆ?

ಪ್ರಥ್ವಿ ಅಂಬರ್‌ ಜೊತೆಗೆ ಒಂದು ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ನಕ್ಷೆ ಅನ್ನೋ ಸಿನಿಮಾ ಶೂಟಿಂಗ್‌ ಮುಗಿಸಿ ಅಕ್ಟೋಬರ್‌ನಲ್ಲಿ ಓಟಿಟಿಯಲ್ಲಿ ರಿಲೀಸ್‌ ಆಗುತ್ತೆ. ಚೇತನ್‌ ಅಹಿಂಸಾ ಜೊತೆ ಮಾರ್ಗ ಅನ್ನೋ ಸಿನಿಮಾ ಮಾಡ್ತಿದ್ದೀನಿ. ಇನ್ನೊಂದು ಚಿತ್ರ ಸ್ಪೂಕಿ ಕಾಲೇಜ್‌.

ಒಂದು ಗೆಲುವು ನನ್ನ ವರ್ಷ ಪೂರ್ತಿ ಬ್ಯುಸಿಯಾಗಿಸಿತು: ಖುಷಿ

ಇಷ್ಟುಸ್ಲಿಮ್‌ ಆ್ಯಂಡ್‌ ಫಿಟ್‌ನೆಸ್‌ ಹಿಂದಿನ ರಹಸ್ಯ?

ನಾನು ವರ್ಕೌಟ್‌, ಡಯಟ್‌ ಮಾಡಲ್ಲ. ಬದಲಿಗೆ ಎರಡೂವರೆ ವರ್ಷದ ಮಗಳು ತನಿಷಾ ಹಿಂದೆ ಓಡಾಡೋದೇ ವರ್ಕೌಟ್‌ಗಿಂತ ಹೆಚ್ಚಾಗುತ್ತೆ. ಗರ್ಭಿಣಿ ಆಗಿದ್ದಾಗ ದಪ್ಪಗಿದ್ದೆ. ಸ್ಟ್ರಿಕ್ಟ್ ಆಗಿ ಬಾಣಂತನ ಮಾಡಿಸಿಕೊಂಡ ಪರಿಣಾಮ ಫಿಟ್‌ನೆಸ್‌ ಮರಳಿ ಬಂತು. ಜೊತೆಗೆ ನನ್ನ ಮೆಟಬಾಲಿಸಂ ಚೆನ್ನಾಗಿದೆ.

ಶೂಟಿಂಗ್‌ ಹೋಗೋಕೆ ಪಾಪು ತಕರಾರು ಮಾಡಲ್ವಾ?

ಇಲ್ಲ, ಅವಳು ನನ್ನ ಅಮ್ಮ ಅಥವಾ ಅತ್ತೆ ಜೊತೆಗೆ ಇದ್ದು ಬಿಡ್ತಾಳೆ. ಬಹಳ ಫ್ರೆಂಡ್ಲಿ ಮಗು ಅದು. ಮಗಳು ಅಷ್ಟುಹೊಂದಿಕೊಳ್ಳುವ ಕಾರಣ, ನನ್ನ ಫ್ಯಾಮಿಲಿ ಸಪೋರ್ಟ್‌ನಿಂದ ಇಷ್ಟೆಲ್ಲ ಮಾಡೋದು ಸಾಧ್ಯವಾಗುತ್ತೆ.