ನಟ ಶ್ರಿ ದತ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮೆಣಸಿ ಗ್ರಾಮದ ಶ್ರೀಧರ್ ಹೆಗಡೆ ಮತ್ತು ಮುಕ್ತ ಹೆಗಡೆ ದಂಪತಿಯ ಪುತ್ರ. ಕೃಷಿ ಕುಟುಂಬದಲ್ಲಿ ಬೆಳೆದ ಇವರು ಬಿ ಎ ಪತ್ರಿಕೋದ್ಯಮ  ಶಿಕ್ಷಣವನ್ನು ಎಂ ಎಂ ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜು ಶಿರಸಿಯಲ್ಲಿ ಮುಗಿಸಿದರು. ಚಿಕ್ಕ ವಯಸ್ಸಿನಿಂದಲೇ ಸಿನಿಮಾದಲ್ಲಿ ನಟಿಸುವ ಕನಸಕಂಡಿದ್ದ ದತ್ತ, ಶಾಲೆಯಲ್ಲೇ ನಡೆಯುವ ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಊರಿನಲ್ಲಿ ಆಯೋಜಿಸುತ್ತಿದ್ದ ಹವ್ಯಾಸಿ ನಾಟಕಗಳಲ್ಲಿ ಭಾಗವಹಿಸುತ್ತಾ, ಕಲೆಯ ಮೇಲಿನ ಅಭಿಮಾನದ ಹುಚ್ಚನ್ನು ಹೆಚ್ಚಿಸಿಕೊಂಡಿದ್ದರು. ಪದವಿ ನಂತರ ಶಿರಸಿಯ ಪತ್ರಿಯೊಂದರಲ್ಲಿ ಕಲಿಕೆಗೆಂದು ಕೆಲಸಕ್ಕೆ ಸೇರಿದರು . ಅಲ್ಲಿ  ಕೆ ಆರ್ ಪ್ರಕಾಶ್ ಎಂಬುವವರು ನಾಟಕದ ನಿರ್ದೇಶಕರಾಗಿದ್ದರು ಅವರ ಬರವಣಿಗೆಯ ಶೈಲಿಯಿಂದ ಸ್ಪೂರ್ತಿ ಕೊಂಡರು.

ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸ ಎಂಬುವುದು ಸದಾಕಾಲ ನಮಗೆ ಯಶಸ್ಸನ್ನು ಗಳಿಸಿಕೊಡುತ್ತದೆ ಎಂಬ ಮಾತಿನಂತೆ ಆಕಾಶದೆತ್ತರ ಹಾರಬೇಕೆಂಬ ಕನಸ್ಸನ್ನು ನನಸಾಗಿಸಲು ಸತತ ಪ್ರಯತ್ನದ ಹಾದಿಯಲ್ಲಿ ಹೆಜ್ಜೆಯನ್ನಿಡುತ್ತ, ಕನ್ನಡ ಚಿತ್ರರಂಗದಲ್ಲಿ ಹೊಸ ತಿರುವುಗಳ ಜೊತೆ ಗೆಲುವಿನ ದಾರಿಯ ಬೆನ್ನು ಬೆಂಬಿಡದೆ ನಿರಂತರವಾಗಿ ಜೀವನ ಸಾಗಿಸುತ್ತಿದ್ದಾರೆ ಕಲಾವಿದ ಶ್ರಿ ದತ್ತ(Sri Datta).

ಶ್ರಿ ದತ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಮೆಣಸಿ ಗ್ರಾಮದ ಶ್ರೀಧರ್ ಹೆಗಡೆ ಮತ್ತು ಮುಕ್ತ ಹೆಗಡೆ ದಂಪತಿಯ ಪುತ್ರ. ಕೃಷಿ ಕುಟುಂಬದಲ್ಲಿ ಬೆಳೆದ ಇವರು ಬಿ ಎ ಪತ್ರಿಕೋದ್ಯಮ ಶಿಕ್ಷಣವನ್ನು ಎಂ ಎಂ ಆರ್ಟ್ಸ್ ಆಂಡ್ ಸೈನ್ಸ್ ಕಾಲೇಜು ಶಿರಸಿಯಲ್ಲಿ ಮುಗಿಸಿದರು. ಚಿಕ್ಕ ವಯಸ್ಸಿನಿಂದಲೇ ಸಿನಿಮಾದಲ್ಲಿ ನಟಿಸುವ ಕನಸಕಂಡಿದ್ದ ದತ್ತ, ಶಾಲೆಯಲ್ಲೇ ನಡೆಯುವ ನಾಟಕಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಊರಿನಲ್ಲಿ ಆಯೋಜಿಸುತ್ತಿದ್ದ ಹವ್ಯಾಸಿ ನಾಟಕಗಳಲ್ಲಿ ಭಾಗವಹಿಸುತ್ತಾ, ಕಲೆಯ ಮೇಲಿನ ಅಭಿಮಾನದ ಹುಚ್ಚನ್ನು ಹೆಚ್ಚಿಸಿಕೊಂಡಿದ್ದರು. ಪದವಿ ನಂತರ ಶಿರಸಿಯ ಪತ್ರಿಯೊಂದರಲ್ಲಿ ಕಲಿಕೆಗೆಂದು ಕೆಲಸಕ್ಕೆ ಸೇರಿದರು . ಅಲ್ಲಿ ಕೆ ಆರ್ ಪ್ರಕಾಶ್ ಎಂಬುವವರು ನಾಟಕದ ನಿರ್ದೇಶಕರಾಗಿದ್ದರು ಅವರ ಬರವಣಿಗೆಯ ಶೈಲಿಯಿಂದ ಸ್ಪೂರ್ತಿ ಕೊಂಡರು.

ಪ್ರಯತ್ನದ ಹಾದಿಯಲ್ಲಿ

ಮೈಸೂರು ರಂಗಾಯಣ, ನಟನೆಯಲ್ಲಿ ಆಸಕ್ತಿ ಇರುವವರಿಗೆ ಪತ್ರಿಕೆಯಲ್ಲಿ ರಂಗ ಶಿಕ್ಷಣ ತರಭೇತಿ ನೀಡುವುದಾಗಿ ಜಾಹೀರಾತನ್ನು ಪ್ರಕಟಿಸಿರುವುದನ್ನು ಗಮನಿಸಿದ ಶ್ರಿ ದತ್ತ, ತರಭೇತಿ ಪಡೆಯಲೆಂದು ಅರ್ಜಿ ಹಾಕಿದರು ಸಂದರ್ಶನ ಕೊಟ್ಟು ಆಡಿಷನ್ ನಲ್ಲಿ ಆಯ್ಕೆಯಾದರು

ರಂಗಾಯಣದಲ್ಲಿ ಕಲಿಕೆ

ಮೈಸೂರಿನಲ್ಲಿ ರಂಗಾಯಣ ಸೇರಿಕೊಂಡು ಒಂದು ವರ್ಷದ ಡಿಪ್ಲೊಮಾ ಇನ್ ಥಿಯೇಟರ್ ಆರ್ಟ್ಸ್ ಮಾಡಿದರು. ನಂತರ ಅವಕಾಶಗಳ ದಾರಿ ಹಿಡಿದು ಬೆಂಗಳೂರಿನ ಕಡೆ ಮುಖ ಮಾಡಿದ್ದರು. ಸ್ನೇಹಿತನಾದ ವಿವೇಕ್ ಸಿಂಹ ಅವರ ಜೊತೆಗೂಡಿ ಒಂದಷ್ಟು ನಾಟಕಗಳಲ್ಲಿ ಅಭಿನಯಿಸಿ '55 ನಿಮಿಷದ ಪ್ರೇಮಕಥೆ' ಎಂಬ ನಾಟಕವನ್ನು ಪ್ರದಶಿಸಿದರು ಇವರ ಪಾತ್ರವನ್ನು ಮೆಚ್ಚಿಕೊಂಡ ಸ್ನೇಹಿತರು ಜೀ ಕನ್ನಡ ವಾಹಿನಿಯಲ್ಲಿ ರಮೇಶ್ ಇಂದಿರಾ ನಿರ್ದೇಶನದ ಮಹಾದೇವಿ ಧಾರಾವಾಹಿಗೆಂದು ಯುವ ಕಲಾವಿದರಿಗೆ ಅವಕಾಶವನ್ನು ಕಲ್ಪಿಸಿದರೆ ಪ್ರಯತ್ನಿಸು ಎಂದು ಶ್ರಿ ದತ್ತ ಅವರನ್ನು ಹುರಿದುಂಬಿದರು.

'ಮ್ಯಾನ್ ಆಫ್ ದಿ ಮ್ಯಾಚ್' ಯಾರೆಂದು ತಿಳಿಸಿದ ಪ್ರಯೋಗಾತ್ಮಕ ಸಿನಿಮಾ!

ಪ್ರಯತ್ನಕ್ಕೆ ತಕ್ಕ ಪ್ರತಿಫಲ

ಪ್ರಯತ್ನಕ್ಕೆ ಪ್ರತಿಫಲ ದೊರೆಯಬೇಕಾದರೆ ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು ನೆನಪಿನಲ್ಲಿಟ್ಟುಕೊಂಡು ಮಾಡುವ ಪ್ರತಿಯೊಂದು ಕೆಲಸವೂ ನಮ್ಮನ್ನ ಉನ್ನತ ಮಟ್ಟಕ್ಕೆ ಬೆಳೆಯುವಂತೆ ಮಾಡುತ್ತದೆ ಎಂಬ ನುಡಿಯನ್ನು ಮನಸ್ಸಿನಲ್ಲಿ ದೃಢ ಸಂಕಲ್ಪ ಮಾಡಿ ಆಡಿಷನ್ ಕೊಟ್ಟು ಬಂಗಾರಿ ಎಂಬ ಹಳ್ಳಿ ಹುಡುಗನ ಮುಗ್ದ ಪಾತ್ರಕ್ಕೆ ಆಯ್ಕೆಯಾದರು. ಮಹಾದೇವಿ ಧಾರಾವಾಹಿಯಲ್ಲಿ 4 ವರ್ಷ ಬಂಗಾರಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸುವ ಮೂಲಕ ಜನರ ಮನ ಗೆದ್ದಿದ್ದಾರೆ.

Man Of The Match ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಡಿ ಸತ್ಯ ಪ್ರಕಾಶ್‌!

ಅದೃಷ್ಟದ 'ಮ್ಯಾನ್ ಆಫ್ ದಿ ಮ್ಯಾಚ್' 

ಕನ್ನಡ ಚಿತ್ರರಂಗಕ್ಕೆ ಸೈಲೆಂಟ್ ಆಗಿ ಎಂಟ್ರಿ ಕೊಟ್ಟು ವಿಭಿನ್ನ ರೀತಿಯಲ್ಲಿ ತನ್ನದೇ ಶೈಲಿಯ ಮೂಲಕ ಕಥೆ ಬರೆದು ಪ್ರಶಸ್ತಿಗಳ ಕಿರೀಟವನ್ನು ಮುಡಿಗೇರಿಸಿಕೊಂಡ ನಿರ್ದೇಶಕ ಸತ್ಯ ಪ್ರಕಾಶ್ ಅವರ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆಯಾದ ಮ್ಯಾನ್ ಆಫ್ ದ ಮ್ಯಾಚ್ ಚಿತ್ರದ ಸೂತ್ರಧಾರನಾಗಿ ಸಿನಿಮಾದಲ್ಲಿ ಭೂಷಣ್ ಎಂಬ ಐ ಟಿ ಹುಡುಗನ ಪಾತ್ರದಲ್ಲಿ ನಟಿಸಲು ಶ್ರಿ ದತ್ತ ಅವರಿಗೆ ಅವಕಾಶ ಕಲ್ಪಿಸಿಕೊಟ್ಟರು. ಈಗ ಹಲವಾರು ಅವಕಾಶಗಳು ಇವರನ್ನು ಅರಸಿಕೊಂಡು ಬಂದಿವೆ ಕಲೆಯೇ ಇವರನ್ನು ಕೈ ಬಿಸಿ ಕರೆಯುತ್ತಿದೆ.