PRK ಮತ್ತು ಸತ್ಯ ಪಿಕ್ಚರ್ಸ್ ಸಹಯೋಗದಲ್ಲಿ ಮೂಡಿಬಂದ ಸಿನಿಮಾದ ಟೈಟಲ್ ಸಿನಿಪ್ರಿಯರ ತಲೆಯಲ್ಲಿ ಸಾವಿರಾರು ಪ್ರಶ್ನೆಗಳ ರಾಶಿಯನ್ನೇ ಸೃಷ್ಟಿಸಿದೆ.
ಚಂದನವನದ ಭರವಸೆಯ ನಿರ್ದೇಶಕರಾಗಿ, ಕಲಾಭಿಮಾನಿಗಳಲ್ಲಿ ಕುತೂಹಲ ಮೂಡಿಸುವ ಸಿನಿಮಾಗಳೊಂದಿಗೆ ಕನ್ನಡಿಗರ ಮನಸ್ಸಿನ ಕದ ತಟ್ಟುತ್ತಾ, 'ಒಂದಲ್ಲಾ ಎರಡಲ್ಲಾ' 'ರಾಮ ರಾಮ ರೇ' ಅದ್ಭುತ ಚಿತ್ರಗಳನ್ನು ನಿರ್ದೇಶಿಸಿ ರಾಷ್ಟ್ರ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡು ಕಲ್ಪನೆಗೂ ಮೀರಿದ ವಿಭಿನ್ನ ಶೈಲಿಯಲ್ಲಿ ಕಥೆಯನ್ನು ತೆರೆಮೇಲೆ ತಂದು, ಸ್ಯಾಂಡಲ್ ವುಡ್ ನಲ್ಲಿ ತಮ್ಮ ಛಾಪನ್ನು ಮೂಡಿಸುತ್ತಿರುವ ನಿರ್ದೇಶಕ ಸತ್ಯಪ್ರಕಾಶ್ ಅವರು, ಮತ್ತೊಂದು ಕುತೂಹಲಕಾರಿ ಚಿತ್ರ 'ಮ್ಯಾನ್ ಆಫ್ ದಿ ಮ್ಯಾಚ್ ' ನ ಸೂತ್ರಧಾರನಾಗಿ ಮಿಂಚಿದ್ದಾರೆ.
PRK ಮತ್ತು ಸತ್ಯ ಪಿಕ್ಚರ್ಸ್ ಸಹಯೋಗದಲ್ಲಿ ಮೂಡಿಬಂದ ಸಿನಿಮಾದ ಟೈಟಲ್ ಸಿನಿಪ್ರಿಯರ ತಲೆಯಲ್ಲಿ ಸಾವಿರಾರು ಪ್ರಶ್ನೆಗಳ ರಾಶಿಯನ್ನೇ ಸೃಷ್ಟಿಸಿದೆ. ಹೆಸರಿಗೆ ತಕ್ಕಂತೆ ಪಾತ್ರಗಳು ಮ್ಯಾಚ್ ಆಡಲು ಫೀಲ್ಡ್ ಗೆ ಹೇಗೆಲ್ಲಾ ಎಂಟ್ರಿ ಕೊಡುತ್ತಾರೆಂದು ಈ ಸಿನಿಮಾ ನಿರೂಪಣೆಯು ಕ್ಷಣ ಕ್ಷಣಕ್ಕೂ ಅಚ್ಚರಿಯನ್ನು ಮೂಡಿಸಿ, ಒಂದೇ ಸ್ಥಳದಲ್ಲಿ ಚಿತ್ರೀಕರಣದ ಬಲೆ ಹೆಣೆಯುತ್ತ ನೈಜ ಘಟನೆಯೇ ನಮ್ಮ ಸುತ್ತ - ಮುತ್ತ ನಡೆಯುತಿರುವಂತೆ ಭಾಸವಾಗುಗವುದರ ಜೊತೆಗೆ, ಪ್ರೇಕ್ಷಕರ ಕಣ್ಣಿಗೆ ಆಯಾಸವಾಗದಂತೆ ಅಯಸ್ಕಾಂತದ ಹಾಗೆ ಸೆಳೆಯುತ್ತದೆ.
'ಮ್ಯಾನ್ ಆಫ್ ದಿ ಮ್ಯಾಚ್' ಚಿತ್ರದ ಪರದೆ ಹೊರಗಿನ ಸೂತ್ರಧಾರ ಸತ್ಯಪ್ರಕಾಶ್ ಆದರೂ ಪರದೆ ಒಳಗಿನ ಸೂತ್ರಧಾರನಾಗಿ ರಾಮ ರಾಮ ರೇ ಖ್ಯಾತಿಯ ನಟರಾಜ್ ನಿರ್ದೇಶಕನ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.
ಸಿನಿಮಾದ ಕೊನೆಯವರೆಗೂ ನಗುವಿಗೆ ಕೊರತೆಯಾಗದಂತೆ ಹಾಸ್ಯ ಕವಿ ನಗುವಿನ ನಾವಿಕ ಧರ್ಮಣ್ಣ ಕಡೂರ್ ನಿರ್ಮಾಪಕನ ಪಾತ್ರದಲ್ಲಿ ಮಿಂಚಿದ್ದಾರೆ. ನಾಯಕ ನಟನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಹಂಬಲದಿಂದ ನಟ ಅಥರ್ವ ಪ್ರಕಾಶ್ ಹೇಗೆಲ್ಲಾ ಚಡಪಡಿಸುತ್ತಾ, ಸರ್ಕಸ್ ಮಾಡುತ್ತಾನೆ ಎಂಬುದನ್ನು ರಿಯಲ್ ಆಗಿ ತೋರಿಸಿದ್ದಾರೆ.
Man Of The Match ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕ ಡಿ ಸತ್ಯ ಪ್ರಕಾಶ್!
ಸೂತ್ರಧಾರನ ಕೈಯಲ್ಲಿ ಕಥೆಯ ಪಾತ್ರಧಾರಿಗಳು
ಕಡೂರಿನ ಕುವರ ನಟರಾಜ್ ನಿರ್ದೇಶಕನಾಗಿ ಪಾತ್ರಕ್ಕೆ ಜೀವ ತುಂಬುತ್ತಾ ಸಾಗುತ್ತಾರೆ. ಈ ಕಥೆಯು ಒಂದು ಆಡಿಷನ್ ದೃಶ್ಯವನ್ನು ತೋರಿಸುವ ಮೂಲಕ ತೆರೆಯ ಕಥೆ ಆರಂಭವಾಗುತ್ತದೆ. ನಿರ್ದೇಶಕ ಸಿನಿಮಾಕೆಂದು ಆಡಿಷನ್ ಏರ್ಪಡಿಸುತ್ತಾನೇ ಯಾರು ಬರದಿದ್ದಾಗ , ಸರ್ಪ್ರೈಸ್ ಎಂಟ್ರಿ ಕೊಟ್ಟ ಗಾಂಧಿ ಪಾತ್ರಧಾರಿ, ನಿರ್ದೇಶಕನ ಬೆಂಬಲಕ್ಕೆ ನಿಂತು ಹೊಸ ಕಲಾವಿದರ ಗುಂಪನ್ನು ಹುಟ್ಟುಹಾಕುತ್ತಾನೆ. ಸಾಕಷ್ಟು ಜನ ಆಟಗಾರರು ಬರುತ್ತಾರೆ, ಅವರೇ ಕಲಾವಿದರು . ಅವರೆಲ್ಲ ತೆರೆಯ ಮೇಲೆ ಕಾಣಿಸಿಕೊಳ್ಳಲು ಮಾಡುವ ಕಸರತ್ತು ಹೇಗಿರುತ್ತದೆ ಎಂದು ನೈಜ ರೂಪದಲ್ಲಿ ಚಿತ್ರೀಕರಿಸಿದ್ದಾರೆ. ಒಬ್ಬ ನಿರ್ದೇಶಕ ಆಡಿಷನ್ ಬಂದವರ ಕಣ್ಣಿನಲ್ಲಿ ನಿಷ್ಠುರವಾಗಿ ಹೇಗೆಲ್ಲಾ ಕಾಣಲಾರಂಭಿಸುತ್ತಾನೆಂಬ, ಒಂದು ವಿಭಿನ್ನ ಕಥೆ ಕಲಾಭಿಮಾನಿಗಳ ನೋಟವನ್ನು ಹಿಡಿದಿಟ್ಟುಕೊಳ್ಳುತ್ತೆ.
ಫಿಲಾಸಫಿಕಲ್ ಡ್ರಾಮಾ 'ಮ್ಯಾನ್ ಆಫ್ ದಿ ಮ್ಯಾಚ್ '
ಇದು ಸಿನಿಮಾನಾ ಅಥವಾ ರಿಯಾಲಿಟಿನಾ? ಎಲ್ಲಾ ಪಾತ್ರಗಳ ಜೊತೆ ನಿರ್ದೇಶಕ ಆಡಿಸೋ ಆಟನಾ?! ನಿರ್ದೇಶಕನೂ ಒಬ್ಬ ನಟನಾ? ಸಿನಿಮಾನ ನೋಡುತ್ತಿರುವ ಪ್ರೇಕ್ಷಕನೂ ಒಂದು ಪಾತ್ರನಾ? ಅಥವಾ ಪಾತ್ರಗಳ ಜೊತೆ ಆಟ ಆಡಿದ ನಿರ್ದೇಶಕನಂತೆ ಪ್ರೇಕ್ಷಕನೂ ಒಬ್ಬ ವಿಕೃತ ನಿರ್ದೇಶಕನಾ? ಈ ಸಮಾಜನೇ ಒಂದು ಸಿನೆಮಾನಾ? ನಾವೆಲ್ಲಾ ಪಾತ್ರಧಾರಿಗಳಾ? ಅಥವಾ ಮತ್ತೊಬ್ಬರ ಜಂಜಾಟಕ್ಕೆ,ನೋವಿಗೆ ಕ್ಯಾಮೆರಾ ಹಿಡಿದು ಮಜಾ ನೋಡುತ್ತಿರುವ ವಿಕೃತ ನಿರ್ದೇಶಕನಂತೆನಾ? ಹೀಗೆ ನೂರಾರು ಪ್ರಶ್ನೆಗಳನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಕ್ಷಣ ಕ್ಷಣಕ್ಕೂ ಹುಟ್ಟುಹಾಕುತ್ತದೆ .
ಪುನೀತ್ PRK ಪ್ರೊಡಕ್ಷನ್‌ನ 'ಮ್ಯಾನ್ ಆಫ್ ದಿ ಮ್ಯಾಚ್' ಟ್ರೈಲರ್‌ಗೆ ಫ್ಯಾನ್ಸ್ ಫಿದಾ
ಹೀರೋ ಆಗಬೇಕೆಂಬ ಕನಸನ್ನ ಹೊತ್ತು ಆಡಿಷನ್ ಗೆ ಭಾಗವಹಿಸಿದ ಅಥರ್ವ ನಾಯಕನಾಗುವೆ ಎಂಬ ನಂಬಿಕೆಯಿಂದ ತನ್ನ ಭಾವ ಚಿತ್ರದ ಕಟ್ ಔಟ್ ನಿಲ್ಲಿಸುತ್ತಾನೆ, ಈ ದೃಶ್ಯ ಜನರ ಮನಸ್ಸಿಗೆ ಎಷ್ಟರ ಮಟ್ಟಿಗೆ ನಾಟಿತೆಂದರೆ "ಸಿನಿಮಾದ ಒಳಗೆ ನೀನು ಕಷ್ಟಪಟ್ಟು ನಿಲ್ಲಿಸಿದ ಕಟ್ ಔಟ್ ಚಿತ್ರ ಮಂದಿರದ ಹೊರಗೆ ಅಭಿಮಾನಿಗಳು ಇಷ್ಟ ಪಟ್ಟು ಇರಿಸುವಂತಾಗಲಿ" ಎಂದು ಸಾಮಾಜಿಕ ಜಾಲತಾಣದ ಮೂಲಕ ಆಶೀರ್ವದಿಸಿದ್ದಾರೆ.
ಕನ್ನಡದ ಧ್ರುವ ನಕ್ಷತ್ರ ಪುನೀತ್ ರಾಜಕುಮಾರ್ ಒಂದು ಹಾಡನ್ನು ಹಾಡುವ ಮೂಲಕ ಚಿತ್ರಕ್ಕೆ ಆಶೀರ್ವದಿಸಿದ್ದಾರೆ. ಇನ್ನು ಎರಡು ಹಾಡುಗಳ ಮೂಲಕ ಎಂಟ್ರಿ ಕೊಟ್ಟ ವಾಸುಕಿ ವೈಭವ್, ತಮ್ಮ ಧ್ವನಿಯಿಂದ ಪ್ರೇಕ್ಷಕರ ಕಿವಿ ಇಂಪಾಗಿಸಿದ್ದಾರೆ. ಮೂರು ಹಾಡುಗಳು ಈ ಚಿತ್ರದಲ್ಲಿವೆ. ಚಿತ್ರದ ಪಾತ್ರಗಳಲ್ಲಿ ನಿಜವಾದ ಹೆಸರುಗಳನ್ನೇ ಬಳಸಿಕೊಂಡಿದ್ದು, ಪೂರ್ತಿ ಸಿನಿಮಾ ಬೆಳಗ್ಗೆ ಯಿಂದ ಸಂಜೆಯವರೆಗೂ ಯಾವ ರೀತಿ ತಿರುವು ಪಡೆದುಕೊಳ್ಳುತ್ತದೆ ಎಂಬುವುದನ್ನು ಇನ್ನು ಚಿತ್ರ ವೀಕ್ಷಿಸುವವರ ಕುತೂಹಲಕ್ಕೆ ಬಿಟ್ಟಿದ್ದು!!
ಮೇ 5ರಂದು ಅಮೆಜಾನ್ ಪ್ರೈಮ್‌ನಲ್ಲಿ 'ಮ್ಯಾನ್ ಆಫ್ ದಿ ಮ್ಯಾಚ್' ರಿಲೀಸ್!
ನೈಜ ರೂಪದಲ್ಲಿ ಪಾತ್ರಗಳಿಗೆ ಜೀವ ತುಂಬಿದ ಕಲಾವಿದರು ತೆರೆಯ ಮುಂದಿನ ಶಿಲ್ಪಿಗಳು ನಟರಾಜ್ ಎಸ್. ಭಟ್ , ಧರ್ಮಣ್ಣ ಕಡೂರ್, ಸುಂದರ ವೀಣಾ, ವೀಣಾ ಸುಂದರ್,ವಾಸುಕಿ ವೈಭವ್, ಮಂಜುನಾಥ್ ಡಿ,ಅಥರ್ವ ಪ್ರಕಾಶ್,ಮಯೂರಿ ನಟರಾಜ್, ಬೃಂದ ವಿಕ್ರಮ್,ಶ್ರಿದತ್ತ, ಶ್ರೀ ಧರ್ ರಾಮ್, ಸಂತೋಷ್ ಹಾಸನ್, ಚಂದ್ರಶೇಖರ್ ಮದಭಾವಿ, ಕೆಂಪರಾಜು ಬಿ ಎಸ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಕಥೆಯನ್ನು ಸುಂದರವಾಗಿ ಸೆರೆಹಿಡಿದು, ಚಿತ್ರ ಸೊಗಸಾಗಿ ಮೂಡಿ ಬರಲು ಕಾರಣಕರ್ತರಾದ ಛಾಯಾಗ್ರಾಹಕ ಮದನ್ ಖಾಟೋಕರ್ ಹಾಗೂ ಲವಿತ್ . ಸಂಕಲನಕಾನಾಗಿ ಬಿ . ಎಸ್ ಕೆಂಪರಾಜು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿ.ಮನೋಹರ್ , ಯೋಗರಾಜ್ ಭಟ್, ಹಾಗೂ ಡಿ ಸತ್ಯ ಪ್ರಕಾಶ್ ಸಾಹಿತ್ಯವನ್ನು ನೀಡಿದ್ದಾರೆ. ನೂರಾರು ಕಾಣದ ಕೈ ಛಲಕದಿಂದ ಸಿನಿಮಾ ಮೂಡಿಬಂದಿದೆ. ಮೇ 5 ರಂದು ಓಟಿಟಿ ಯಲ್ಲಿ ರಿಲೀಸ್ ಆಗಿದ್ದು ಅಮೆಜಾನ್ ಪ್ರೈಮ್ ನಲ್ಲಿ ಈ ಚಿತ್ರ ಲಭ್ಯವಿದೆ.
ಸುಕನ್ಯಾ ಎನ್. ಆರ್
ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿನಿ
ಆಳ್ವಾಸ್ ಕಾಲೇಜು ಮೂಡುಬಿದಿರೆ
