Asianet Suvarna News Asianet Suvarna News
breaking news image

ಹೀರೋಯಿನ್​ ಆದ್ಮೇಲೆ ಎಷ್ಟೊಂದು ಬದಲಾದ ಹಿಟ್ಲರ್​ ಕಲ್ಯಾಣದ ಪೆದ್ದು ಲೀಲಾ! ಸೋ ಕ್ಯೂಟ್​ ಎಂದ ಫ್ಯಾನ್ಸ್​


ಸ್ಯಾಂಡಲ್​ವುಡ್​ ನಟಿಯಾದ ಮೇಲೆ ಎಷ್ಟೊಂದು ಬದಲಾದ ಹಿಟ್ಲರ್​ ಕಲ್ಯಾಣದ ಪೆದ್ದು ಲೀಲಾ! ವೈರಲ್​ ವಿಡಿಯೋ ಇಲ್ಲಿದೆ... 
 

Hitler Kalyanas  Leela Upadhyaksha heroine Malaika Vasupals gorgeous look in reel  suc
Author
First Published Jun 4, 2024, 3:08 PM IST

ಲೀಲಾ ಎಂದಾಕ್ಷಣ ಎಲ್ಲರ ನೆನಪಿಗೆ ಬರುವುದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿದ್ದ ಹಿಟ್ಲರ್​ ಕಲ್ಯಾಣ ಸೀರಿಯಲ್​ನ ಪೆದ್ದು ಲೀಲಾ. ಈ ಸೀರಿಯಲ್​ ಕೆಲ ತಿಂಗಳ ಹಿಂದೆ ಅಂತ್ಯ ಕಂಡಿದೆ. ತರಾತುರಿಯಲ್ಲಿ ಸೀರಿಯಲ್​ ಮುಗಿಸಲಾಯಿತಾದರೂ ಪೆದ್ದು ನಾಯಕಿ ಲೀಲಾ ಪಾತ್ರ ಎಲ್ಲರ ಮನಸ್ಸಿನಲ್ಲಿಯೂ ಅಚ್ಚಳಿಯದೇ ಉಳಿದಿದೆ. ಲೀಲಾ ಪಾತ್ರಧಾರಿಯ ನಿಜವಾದ ಹೆಸರು ಮಲೈಕಾ ವಸುಪಾಲ್​. ಇವರ ಕುರಿತು ಒಂದಿಷ್ಟು ಹೇಳುವುದಾದರೆ, ಅಪ್ಪ ಅಮ್ಮನ ಬಲವಂತಕ್ಕೆ ಓದಿದರೂ ಜಾಣೆಯಾದ ಮಲೈಕಾ ಇಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ನಂತರ ನಟನೆಯ ಕನಸಿನ ಹಿಂದೆ ಬಿದ್ದಿದ್ದರು.  ಸಾಕಷ್ಟು ಸೀರಿಯಲ್ ತಂಡ ಸಂಪರ್ಕಿಸಿ ಅಡಿಷನ್‌ ಕೊಟ್ಟಿದ್ದರು.  ಅದಕ್ಕಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಸದಾ ಓಡಾಟ ಮಾಡಿದ್ದರು. ಕೊನೆಗೆ ಹಿಟ್ಲರ್‌ ಕಲ್ಯಾಣ ತಂಡದ ಕಣ್ಣಿಗೆ ಬಿದ್ದರು.  ಈ ಸೀರಿಯಲ್‌ಗೋಸ್ಕರ ಮಲೈಕಾ ದಾವಣಗೆರೆಯಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಬಳಿಕ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿ ಪಾತ್ರ ಗಿಟ್ಟಿಸಿಕೊಂಡು ಮನೆ ಮಾತಾಗಿದ್ದಾರೆ.

 ಧಾರಾವಾಹಿಯಲ್ಲಿ ಈಕೆ ಎಡವಟ್ಟು ಅನಿಸಿಕೊಂಡರೂ, ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆಗಾಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ರೀಲ್ಸ್​ ಮಾಡುತ್ತಾ ಜನರಿಗೆ ಹತ್ತಿರವಾಗುತ್ತಿದ್ದಾರೆ. ಧಾರಾವಾಹಿಯಲ್ಲಿ ಸೀರೆಯಲ್ಲಿಯೇ ಮಿಂಚುವ ಲೀಲಾ ಎಂಬ ಮುಗ್ಧ ಚೆಲುವೆ, ನಿಜ ಜೀವನದಲ್ಲಿ ಡ್ಯಾಷಿಂಗ್​ ಮಲೈಕಾ. ಹಾಟ್​ ಫೋಟೋಗಳನ್ನು ಶೇರ್​ ಮಾಡುತ್ತಾ ಯುವಕರ ಹೃದಯ ಕದಿಯುವ ಚೆಲುವೆ ಈಕೆ. ಇವರು ಸಿಕ್ಕಾಪಟ್ಟೆ ಗ್ಲ್ಯಾಮರಸ್ ಬೆಡಗಿ. ಯಾವ ಸಿನಿಮಾ ತಾರೆಗೂ ಈಕೆ ಕಡಿಮೆ ಇಲ್ಲ ಎನ್ನುವಂತೆ ಮಾಡರ್ನ್​ ಡ್ರೆಸ್​ನಲ್ಲಿಯೂ (Modern dress) ಮಿಂಚಿ ಫೋಟೋ ಶೇರ್​ ಮಾಡಿಕೊಳ್ಳುತ್ತಾರೆ.  ಇನ್ನು ಸೀರೆಯಲ್ಲಿ ಈಕೆ ಕಣ್ಣುಕುಕ್ಕಿಸುವುದು ಧಾರಾವಾಹಿಗಳಲ್ಲಿ ಪ್ರೇಕ್ಷಕರು ನೋಡಿಯೇ ಇರುತ್ತಾರೆ.

ನನಗೂ ಒಬ್ಬ ಗೆಳೆಯ ಬೇಕು... ಅಂತಿದ್ದಾರೆ ಹಿಟ್ಲರ್​ ಕಲ್ಯಾಣ ಲೀಲಾ, ಶ್ರೀರಸ್ತು- ಶುಭಮಸ್ತು ದೀಪಿಕಾ!

ಇದೀಗ ಅವರು ವಿಡಿಯೋ ಒಂದನ್ನು ಶೇರ್​ ಮಾಡಿಕೊಂಡಿದ್ದಾರೆ. ಇವರನ್ನು ಇಲ್ಲಿ ನೋಡಿದವರು ಅಬ್ಬಾ ಇವಳು ನಮ್ಮ ಲೀಲಾನಾ ಅನ್ನುತ್ತಿದ್ದಾರೆ. ಹೌದು. ಏಕೆಂದರೆ ಈಗ ಮಲೈಕಾ ಅವರು ಕೇವಲ ಸೀರಿಯಲ್​ ನಟಿಯಲ್ಲ, ಬದಲಿಗೆ ಸ್ಯಾಂಡಲ್​ವುಡ್​ ಸ್ಟಾರ್​. ಉಪಾಧ್ಯಕ್ಷ ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದಾರೆ. ನಟಿಯಾದ ಮೇಲೆ ಅವರ ವರ್ಚಸ್ಸು ಬೇರೆಯಾಗಿದ್ದು, ಸಕತ್​ ಗ್ಲಾಮರಸ್​ ಆಗಿ ಮಿಂಚುತ್ತಿದ್ದಾರೆ.  ಅಷ್ಟಕ್ಕೂ ಮಲೈಕಾ ಹೆಸರು ಇವರಿಗೆ ಬರುವ ಹಿಂದೆ ಒಂದು ಕಥೆಯೇ ಇದೆ. 1998ರಲ್ಲಿ ಬಿಡುಗಡೆಯಾಗಿದ್ದ ದಿಲ್‌ ಸೇ ಚಿತ್ರದ ಚೈಯ್ಯಾ ಚೈಯ್ಯಾ ಹಾಡು ಸಕತ್‌ ಹಿಟ್‌ ಆಗಿತ್ತು. ಆಗ ಮಲೈಕಾ ಅರೋರಾ ಅವರಿಗೆ ಬಹುದೊಡ್ಡ ಹೆಸರೇ ಬಂದಿತ್ತು. ಎಲ್ಲರ ಬಾಯಿಯಲ್ಲೂ ಮಲೈಕಾ ಅವರ ಹೆಸರು ಓಡಾಡುತ್ತಿತ್ತು. ಈ ಹಾಡಿಗೆ ಮಲೈಕಾ ಅರೋರಾ ಸೊಂಟ ಬಳುಕಿಸಿದ ರೀತಿಗೆ ಎಲ್ಲರೂ ಫಿದಾ ಆಗಿದ್ದರು. ಅದೇ ಟೈಂನಲ್ಲಿ ಹುಟ್ಟಿದ್ದೇ ದಾವಣಗೆರೆಯ ಮಲೈಕಾ. 

ಇವರ ಹುಟ್ಟು ಹೆಸರು ಕೂಡ ಮ ಅಕ್ಷರದಲ್ಲಿ ಬಂದ ಹಿನ್ನೆಲೆಯಲ್ಲಿ ಮ ಅಕ್ಷರದ ಹೆಸರಿಗಾಗಿ ಹುಡುಕಾಟ ನಡೆಸಿದ್ದರಂತೆ. ಆಗ ಮಲೈಕಾ ಅವರ ಹೆಸರು ಇಟ್ಟರಂತೆ. ಈ ಕುರಿತು ಮಲೈಕಾ ಹೇಳಿದ್ದರು. ಮಲೈಕಾಗೆ ಇರುವ ಕೆಲವು ಅರ್ಥಗಳ ಕುರಿತೂ ನಟಿ ಹೇಳಿದ್ದಾರೆ. ಒಂದು ದೇಶದಲ್ಲಿರುವ ಹೂವಿನ ಹೆಸರು, ಮಲೈ ಎಂದರೆ ಕೆನೆ ಹಾಗೂ ಮಲೈಕಾ ಎಂದರೆ ಬಾಲಿವುಡ್‌ ನಟಿ ಎಂದಿದ್ದರು. ಅಂದಹಾಗೆ ಮಲೈಕಾ ಅರೋರಾ ಅವರಿಗೆ 49 ವರ್ಷ ವಯಸ್ಸಾದರೆ ಕನ್ನಡದ ಮಲೈಕಾಗೆ 25 ವರ್ಷ ವಯಸ್ಸು.  
ನನಗೂ ಒಬ್ಬ ಗೆಳೆಯ ಬೇಕು... ಅಂತಿದ್ದಾರೆ ಹಿಟ್ಲರ್​ ಕಲ್ಯಾಣ ಲೀಲಾ, ಶ್ರೀರಸ್ತು- ಶುಭಮಸ್ತು ದೀಪಿಕಾ!

Latest Videos
Follow Us:
Download App:
  • android
  • ios