Asianet Suvarna News Asianet Suvarna News

ನನಗೂ ಒಬ್ಬ ಗೆಳೆಯ ಬೇಕು... ಅಂತಿದ್ದಾರೆ ಹಿಟ್ಲರ್​ ಕಲ್ಯಾಣ ಲೀಲಾ, ಶ್ರೀರಸ್ತು- ಶುಭಮಸ್ತು ದೀಪಿಕಾ!

ನನಗೂ ಒಬ್ಬ ಗೆಳೆಯ ಬೇಕು ಹಾಡಿಗೆ  ಹಿಟ್ಲರ್​ ಕಲ್ಯಾಣ ಲೀಲಾ, ಶ್ರೀರಸ್ತು- ಶುಭಮಸ್ತು ದೀಪಿಕಾ ಭರ್ಜರಿ ಸ್ಟೆಪ್​. ಅಭಿಮಾನಿಗಳು ಏನು ಹೇಳಿದ್ರು ನೋಡಿ...
 

Hitler Kalyana Leela and Shreerastu Shubhamastu Deepika reels for moggina manassu suc
Author
First Published May 24, 2024, 4:16 PM IST

 ಮೊಗ್ಗಿನ ಮನಸ್ಸು ಚಿತ್ರದ ನನಗೂ ಒಬ್ಬ ಗೆಳೆಯ ಬೇಕು... ಹಾಡು ಸಕತ್​ ಫೇಮಸ್​ ಆಗಿದ್ದು, ಇಂದಿಗೂ ಅದು ಹಲವರ ಬಾಯಲ್ಲಿ ನಲಿದಾಡುತ್ತಲೇ ಇದೆ. ಇದೀಗ ಹಿಟ್ಲರ್​ ಕಲ್ಯಾಣ ಲೀಲಾ, ಶ್ರೀರಸ್ತು- ಶುಭಮಸ್ತು ದೀಪಿಕಾ ಈ ಹಾಡಿಗೆ ಭರ್ಜರಿ ರೀಲ್ಸ್​ ಮಾಡಿದ್ದಾರೆ. ಇಬ್ಬರೂ ಒಂದೇ ರೀತಿಯ ಕಪ್ಪು ಬಣ್ಣದ ಬಟ್ಟೆ ತೊಟ್ಟು ಈ ಹಾಡಿಗೆ ರೀಲ್ಸ್​ ಮಾಡಿದ್ದು, ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ನನಗೂ ಒಬ್ಬ ಗೆಳೆಯ ಬೇಕು ಅನ್ನುತ್ತಿದ್ದಂತೆಯೇ ಹುಡುಗರೆಲ್ಲಾ ನಾನಿದ್ದೇನೆ ಬರ್ಲಾ ಎಂದು ತಮಾಷೆ ಮಾಡುತ್ತಿದ್ದಾರೆ. ನೀವು ಹೇಳಿದ ಎಲ್ಲಾ ಕ್ವಾಲಿಟಿಗಳೂ ಇವೆ, ಮದ್ವೆಗೆ ರೆಡಿನಾ ಎಂದು ಕೆಲವರು ನಟಿಯರನ್ನು ಪ್ರಶ್ನಿಸುತ್ತಿದ್ದಾರೆ.

ಅಂದಹಾಗೆ ಜೀ ಕನ್ನಡದಲ್ಲಿ ಕೆಲ ವರ್ಷ ಪ್ರಸಾರ ಆಗಿದ್ದ ಹಿಟ್ಲರ್​ ಕಲ್ಯಾಣ ಸೀರಿಯಲ್​ ಕೆಲ ತಿಂಗಳ ಹಿಂದೆ ಅಂತ್ಯ ಕಂಡಿದೆ. ತರಾತುರಿಯಲ್ಲಿ ಸೀರಿಯಲ್​ ಮುಗಿಸಲಾಯಿತಾದರೂ ಪೆದ್ದು ನಾಯಕಿ ಲೀಲಾ ಪಾತ್ರ ಎಲ್ಲರ ಮನಸ್ಸಿನಲ್ಲಿಯೂ ಅಚ್ಚಳಿಯದೇ ಉಳಿದಿದೆ. ಲೀಲಾ ಪಾತ್ರಧಾರಿಯ ನಿಜವಾದ ಹೆಸರು ಮಲೈಕಾ ವಸುಪಾಲ್​. ಇವರ ಕುರಿತು ಒಂದಿಷ್ಟು ಹೇಳುವುದಾದರೆ, ಅಪ್ಪ ಅಮ್ಮನ ಬಲವಂತಕ್ಕೆ ಓದಿದರೂ ಜಾಣೆಯಾದ ಮಲೈಕಾ ಇಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ನಂತರ ನಟನೆಯ ಕನಸಿನ ಹಿಂದೆ ಬಿದ್ದಿದ್ದರು.  ಸಾಕಷ್ಟು ಸೀರಿಯಲ್ ತಂಡ ಸಂಪರ್ಕಿಸಿ ಅಡಿಷನ್‌ ಕೊಟ್ಟಿದ್ದರು.  ಅದಕ್ಕಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಸದಾ ಓಡಾಟ ಮಾಡಿದ್ದರು. ಕೊನೆಗೆ ಹಿಟ್ಲರ್‌ ಕಲ್ಯಾಣ ತಂಡದ ಕಣ್ಣಿಗೆ ಬಿದ್ದರು.  ಈ ಸೀರಿಯಲ್‌ಗೋಸ್ಕರ ಮಲೈಕಾ ದಾವಣಗೆರೆಯಿಂದ ಬೆಂಗಳೂರಿಗೆ ಶಿಫ್ಟ್ ಆಗಿದ್ದರು. ಬಳಿಕ ಉಪಾಧ್ಯಕ್ಷ ಸಿನಿಮಾದಲ್ಲಿ ನಾಯಕಿ ಪಾತ್ರ ಗಿಟ್ಟಿಸಿಕೊಂಡು ಮನೆ ಮಾತಾಗಿದ್ದಾರೆ.

ಅಪ್ಪುಗೂ ನೃತ್ಯ ಸಂಯೋಜಿಸಿದ್ದ ಶ್ರೀರಸ್ತು ಶುಭಮಸ್ತು ದೀಪಿಕಾ: ಪೂರ್ಣಿಗೆ ಡ್ಯಾನ್ಸ್​ ಹೇಳಿಕೊಡ್ತಿರೋ ವಿಡಿಯೋ ವೈರಲ್​
 

 ಅಷ್ಟಕ್ಕೂ ಮಲೈಕಾ ಹೆಸರು ಇವರಿಗೆ ಬರುವ ಹಿಂದೆ ಒಂದು ಕಥೆಯೇ ಇದೆ. 1998ರಲ್ಲಿ ಬಿಡುಗಡೆಯಾಗಿದ್ದ ದಿಲ್‌ ಸೇ ಚಿತ್ರದ ಚೈಯ್ಯಾ ಚೈಯ್ಯಾ ಹಾಡು ಸಕತ್‌ ಹಿಟ್‌ ಆಗಿತ್ತು. ಆಗ ಮಲೈಕಾ ಅರೋರಾ ಅವರಿಗೆ ಬಹುದೊಡ್ಡ ಹೆಸರೇ ಬಂದಿತ್ತು. ಎಲ್ಲರ ಬಾಯಿಯಲ್ಲೂ ಮಲೈಕಾ ಅವರ ಹೆಸರು ಓಡಾಡುತ್ತಿತ್ತು. ಈ ಹಾಡಿಗೆ ಮಲೈಕಾ ಅರೋರಾ ಸೊಂಟ ಬಳುಕಿಸಿದ ರೀತಿಗೆ ಎಲ್ಲರೂ ಫಿದಾ ಆಗಿದ್ದರು. ಅದೇ ಟೈಂನಲ್ಲಿ ಹುಟ್ಟಿದ್ದೇ ದಾವಣಗೆರೆಯ ಮಲೈಕಾ. ಇವರ ಹುಟ್ಟು ಹೆಸರು ಕೂಡ ಮ ಅಕ್ಷರದಲ್ಲಿ ಬಂದ ಹಿನ್ನೆಲೆಯಲ್ಲಿ ಮ ಅಕ್ಷರದ ಹೆಸರಿಗಾಗಿ ಹುಡುಕಾಟ ನಡೆಸಿದ್ದರಂತೆ. ಆಗ ಮಲೈಕಾ ಅವರ ಹೆಸರು ಇಟ್ಟರಂತೆ. ಈ ಕುರಿತು ಮಲೈಕಾ ಹೇಳಿದ್ದರು. ಮಲೈಕಾಗೆ ಇರುವ ಕೆಲವು ಅರ್ಥಗಳ ಕುರಿತೂ ನಟಿ ಹೇಳಿದ್ದಾರೆ. ಒಂದು ದೇಶದಲ್ಲಿರುವ ಹೂವಿನ ಹೆಸರು, ಮಲೈ ಎಂದರೆ ಕೆನೆ ಹಾಗೂ ಮಲೈಕಾ ಎಂದರೆ ಬಾಲಿವುಡ್‌ ನಟಿ ಎಂದಿದ್ದರು. ಅಂದಹಾಗೆ ಮಲೈಕಾ ಅರೋರಾ ಅವರಿಗೆ 49 ವರ್ಷ ವಯಸ್ಸಾದರೆ ಕನ್ನಡದ ಮಲೈಕಾಗೆ 25 ವರ್ಷ ವಯಸ್ಸು.  

ಇನ್ನು ಶ್ರೀರಸ್ತು-ಶುಭಮಸ್ತುವಿನಲ್ಲಿ ಸೀರಿಯಲ್​ ಪ್ರಿಯರ ಕೆಂಗಣ್ಣಿಗೆ ಗುರಿಯಾಗುವಷ್ಟು ವಿಲನ್​ ಪಾತ್ರಕ್ಕೆ ಜೀವ ತುಂಬುತ್ತಿರುವ ದೀಪಿಕಾ ನಿಜವಾದ ಹೆಸರು ದರ್ಶಿನಿ. ಇವರು ಕೊರಿಯೋಗ್ರಫರ್​.  ಇವರು ನಟಿಯಾಗೋ ಮೊದಲು ಮಾಡೆಲ್ (Model),  ಜೊತೆಗೆ ಕೊರಿಯೋಗ್ರಾಫರ್ ಆಗಿ ಗುರುತಿಸಿಕೊಂಡವರು. ನಟ ಪ್ರಭುದೇವ, ಜಾನಿ ಮಾಸ್ಟರ್ ಮೊದಲಾದ ಜನಪ್ರಿಯ ಕೊರಿಯೋಗ್ರಫರ್ ಜೊತೆ ಅಸಿಸ್ಟಂಟ್ ಕೊರಿಯೋಗ್ರಫರ್ ಆಗಿ ಇವರು ಕೆಲಸ ಮಾಡಿದ್ದಾರೆ. ದರ್ಶಿನಿ ಶರಣ್ ನಟನೆಯ ಛೂ ಮಂತರ್ ಹಾಡಿಗೆ ಕೊರಿಯೋಗ್ರಫಿ ಮಾಡುವ ಮೂಲಕ ಅಸಿಸ್ಟೆಂಟ್ ಕೊರಿಯೋಗ್ರಫರ್ ಆಗಿ ಭಡ್ತಿ ಪಡೆದರು. ಈ ಡ್ಯಾನ್ಸ್ ಬೀಟ್ (Dence Beat) ಸಖತ್ ಸದ್ದು ಮಾಡಿತ್ತು. ಇದೀಗ ಕನ್ನಡದ ಉಪಾಧ್ಯಕ್ಷ ಸಿನಿಮಾದಲ್ಲೂ ಕೊರಿಯೋಗ್ರಫರ್ ಆಗಿ ಕೆಲಸ ಮಾಡಿದ್ದಾರೆ. ಉಪಾಧ್ಯಕ್ಷ ಸಿನಿಮಾದ ಹಾಡುಗಳಿಗೆ ಚಿಕ್ಕಣ್ಣ ಮತ್ತು ಮಲೈಕಾ ವಸುಪಾಲ್ ಅವರಿಗೆ ಸಖತ್ತಾಗಿ ಡ್ಯಾನ್ಸ್ ಹೇಳಿಕೊಡುವ ಮೂಲಕ ಜನಪ್ರಿಯತೆ ಪಡೆದಿದ್ದಾರೆ.

ಶ್ರೇಷ್ಠಾಳ ಜೊತೆ ತಾಂಡವ್​ ಮದ್ವೆಗೆ ರೆಡಿಯಾಗ್ತಿದ್ರೆ ಅಮ್ಮ- ಮಗಳು ಈ ಪರಿ ಡ್ಯಾನ್ಸ್​ ಮಾಡೋದಾ?

Latest Videos
Follow Us:
Download App:
  • android
  • ios