ಬಾಲಿವುಡ್ ಮಲೈಕಾಗೂ, ಹಿಟ್ಲರ್ ಕಲ್ಯಾಣದ ಎಡವಟ್ಟು ಲೀಲಾ ಮಲೈಕಾಗೂ ಇದೆಯಂತೆ ಭಾರಿ ನಂಟು!
ಬಾಲಿವುಡ್ ತಾರೆ ಮಲೈಕಾ ಅರೋರಾ ಹಾಗೂ ಹಿಟ್ಲರ್ ಕಲ್ಯಾಣ್ ಎಡವಟ್ಟು ಲೀಲಾ ಎಂದೇ ಖ್ಯಾತಿ ಪಡೆದಿರುವ ಮಲೈಕಾ ವಸುಪಾಲ್ ಅವರಿಗೆ ಏನಾದ್ರೂ ಸಂಬಂಧ ಇದ್ಯಾ? ಹೌದು ಎಂದಿದ್ದಾರೆ ನಟಿ!
ಎಡವಟ್ಟು ಲೀಲಾ ಎಂದಾಕ್ಷಣ ನೆನಪಾಗುವವಳು ಝೀ ಕನ್ನಡದಲ್ಲಿ ಪ್ರಸಾರ ಆಗುತ್ತಿರೋ ಹಿಟ್ಲರ್ ಕಲ್ಯಾಣ (Hitler Kalyana) ಧಾರಾವಾಹಿಯ ಲೀಲಾ. ಈಕೆಯನ್ನು ಲೀಲಾ ಎನ್ನುವ ಬದಲು ಎಡವಟ್ಟು ಲೀಲಾ ಎಂದೇ ಫೇಮಸ್ಸು. ಮಾಡುವುದೆಲ್ಲವೂ ಎಡವಟ್ಟೇ ಆಗಿದ್ದರೂ ಅದೆಲ್ಲವೂ ಪ್ಲಸ್ ಪಾಯಿಂಟೇ ಆಗಿ ಈಕೆಯ ಮನೆಗೆ ನೆರವಾಗುತ್ತಿರುವುದು ಕೂಡ ಇಂಟರೆಸ್ಟಿಂಗ್ ವಿಷಯ. ಯಾವುದೋ ಒಂದು ಸಂದರ್ಭದಲ್ಲಿ ವಯಸ್ಸಿನಲ್ಲಿ ತೀರಾ ದೊಡ್ಡವನಾಗಿರುವ ಎಜೆಗೆ ಮದುವೆಯಾಗಿ ತನಗಿಂತಲೂ ದೊಡ್ಡವರಾಗಿರುವ ಸೊಸೆಯಂದಿರಿಗೆ ಅತ್ತೆಯಾಗಿರುವ ಪಾತ್ರ ಲೀಲಂದು. ಈ ಮೊದಲು ಗಂಡನ ಮನೆಯಲ್ಲಿ ಬಹುತೇಕ ಎಲ್ಲರಿಂದಲೂ ತಿರಸ್ಕಾರಕ್ಕೆ ಒಳಗಾಗಿದ್ದ ಲೀಲಾ ಈಗ ಎಲ್ಲರಿಗೂ ಹತ್ತಿರ. ಆಕೆಯನ್ನು ಬಿಟ್ಟು ಇರುವುದು ಕಷ್ಟ ಎನ್ನುವ ಸ್ಥಿತಿ. ಇಂಥದ್ದೊಂದು ಎಡವಟ್ಟು ಜೊತೆಗೆ ಅಷ್ಟೇ ಮುಗ್ಧ ಹಾಗೂ ಸ್ವಲ್ಪ ಅತಿ ಎನಿಸುವಷ್ಟು ಒಳ್ಳೆಯತನದ ಪಾತ್ರಧಾರಿಯಾಗಿರುವ ಲೀಲಾಳ ನಿಜವಾದ ಹೆಸರು ಮಲೈಕಾ ಟಿ ವಸುಪಾಲ್. 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ಲೀಲಾ ಆಗಿರುವ ಮಲೈಕಾ, ಪಟ ಪಟಾ ಅಂತ ಮಾತಾಡುತ್ತಾ, ನೇರವಾಗಿ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಇಡುತ್ತಾರೆ. ಧಾರಾವಾಹಿಯಲ್ಲಿ ಈಕೆ ಎಡವಟ್ಟು ಅನಿಸಿಕೊಂಡರೂ, ಅಭಿಮಾನಿಗಳಿಗೆ ಅಚ್ಚು ಮೆಚ್ಚು. ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ ಜನರಿಗೆ ಹತ್ತಿರವಾಗುತ್ತಿದ್ದಾರೆ. .
ದಾವಣಗೆರೆಯ ಈ ಬೆಡಗಿಗೆ ಮಲೈಕಾ ಎಂದು ಹೆಸರು ಇಟ್ಟಿರುವ ಹಿಂದೆ ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಪ್ರಭಾವ ಇದ್ಯಾ? ಆ ಮಲೈಕಾಗೂ ಈ ಮಲೈಕಾಗೂ ಏನಾದ್ರೂ ಸಂಬಂಧ ಇದ್ಯಾ ಎನ್ನುವ ಇಂಟರೆಸ್ಟಿಂಗ್ ವಿಷ್ಯವೊಂದು ಇದೀಗ ಹೊರ ಬಂದಿದೆ. ಒಂದೇ ಹೆಸರಿನವರು ಅನೇಕ ಮಂದಿ ಇರುವುದು ಸಹಜವೇ. ಅದೇ ರೀತಿ ಸಿನಿಮಾ ತಾರೆಯರ ಹೆಸರು ಸಾಮಾನ್ಯ ಜನರಿಗೂ ಇರುತ್ತದೆ. ಅಂದ ಮಾತ್ರಕ್ಕೆ ಬಾಲಿವುಡ್ ನಟಿ ಮಲೈಕಾ ಹೆಸರನ್ನು ಈ ಎಡವಟ್ಟು ಲೀಲಾ ಪಾತ್ರಧಾರಿಗೆ ಇಟ್ಟಿರುವುದು ಕಾಕತಾಳೀಯ ಎನ್ನಬಹುದು. ಆದರೆ ಅಸಲಿಗೆ, ಈ ಮಲೈಕಾಗೂ, ಆ ಮಲೈಕಾಗೂ ಸಂಬಂಧ ಇದೆಯಂತೆ!
ಶೇಕ್ ಇಟ್ ಪುಷ್ಪವತಿಗೆ ಭರ್ಜರಿಯಾಗಿ ಸೊಂಟ ಬಳುಕಿಸಿದ ಹಿಟ್ಲರ್ ಕಲ್ಯಾಣದ 'ಎಡವಟ್ಟು ಲೀಲಾ'
ಹೌದು. ಈ ಕುರಿತು ಖುದ್ದು ಹಿಟ್ಲರ್ ಕಲ್ಯಾನ್ ಮಲೈಕಾ ವಸುಪಾಲ್ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಮಜಾ ಕೆಫೆಯಲ್ಲಿ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಅವರ ಹೆಸರು ಇವರಿಗೆ ಬರುವ ಹಿಂದೆ ಒಂದು ಕಥೆಯೇ ಇದೆ. 1998ರಲ್ಲಿ ಬಿಡುಗಡೆಯಾಗಿದ್ದ ದಿಲ್ ಸೇ ಚಿತ್ರದ ಚೈಯ್ಯಾ ಚೈಯ್ಯಾ ಹಾಡು ಸಕತ್ ಹಿಟ್ ಆಗಿತ್ತು. ಆಗ ಮಲೈಕಾ ಅರೋರಾ ಅವರಿಗೆ ಬಹುದೊಡ್ಡ ಹೆಸರೇ ಬಂದಿತ್ತು. ಎಲ್ಲರ ಬಾಯಿಯಲ್ಲೂ ಮಲೈಕಾ ಅವರ ಹೆಸರು ಓಡಾಡುತ್ತಿತ್ತು. ಈ ಹಾಡಿಗೆ ಮಲೈಕಾ ಅರೋರಾ ಸೊಂಟ ಬಳುಕಿಸಿದ ರೀತಿಗೆ ಎಲ್ಲರೂ ಫಿದಾ ಆಗಿದ್ದರು. ಅದೇ ಟೈಂನಲ್ಲಿ ಹುಟ್ಟಿದ್ದೇ ದಾವಣಗೆರೆಯ ಮಲೈಕಾ. ಇವರ ಹುಟ್ಟು ಹೆಸರು ಕೂಡ ಮ ಅಕ್ಷರದಲ್ಲಿ ಬಂದ ಹಿನ್ನೆಲೆಯಲ್ಲಿ ಮ ಅಕ್ಷರದ ಹೆಸರಿಗಾಗಿ ಹುಡುಕಾಟ ನಡೆಸಿದ್ದರಂತೆ. ಆಗ ಮಲೈಕಾ ಅವರ ಹೆಸರು ಇಟ್ಟರಂತೆ!
ಈ ಕುರಿತು ಮಲೈಕಾ ಹೇಳಿದ್ದಾರೆ. ಮಲೈಕಾಗೆ ಇರುವ ಕೆಲವು ಅರ್ಥಗಳ ಕುರಿತೂ ನಟಿ ಹೇಳಿದ್ದಾರೆ. ಒಂದು ದೇಶದಲ್ಲಿರುವ ಹೂವಿನ ಹೆಸರು, ಮಲೈ ಎಂದರೆ ಕೆನೆ ಹಾಗೂ ಮಲೈಕಾ ಎಂದರೆ ಬಾಲಿವುಡ್ ನಟಿ ಎಂದಿದ್ದಾರೆ. ಅಂದಹಾಗೆ ಮಲೈಕಾ ಅರೋರಾ ಅವರಿಗೆ 49 ವರ್ಷ ವಯಸ್ಸಾದರೆ ಕನ್ನಡದ ಮಲೈಕಾಗೆ 24 ವರ್ಷ ವಯಸ್ಸು. ಇದರ ಸಂಪೂರ್ಣ ಸಂಚಿಕೆ ಮುಂದಿನ ವಾರ ಪ್ರಸಾರವಾಗಲಿದೆ.
ಅಬ್ಬಾ! ಈ ಪಾಪ್ ಡ್ಯಾನ್ಸರ್ ನಿಜವಾಗ್ಲೂ ಹಿಟ್ಲರ್ ಕಲ್ಯಾಣದ ಅಂತರನಾ ಎಂದು ಪ್ರಶ್ನಿಸ್ತಿದ್ದಾರೆ ಫ್ಯಾನ್ಸ್