Asianet Suvarna News Asianet Suvarna News

Shiva Rajkumar Birthday: ಶಿವಣ್ಣನಿಗೆ ಅರವತ್ತು, ಮನಸ್ಸಿಗೆ ಮೂವತ್ತು!

ಕನ್ನಡ ಚಿತ್ರರಂಗದ ಚಿರ ಯೌವನದ ಯುವಕ ಶಿವಣ್ಣನಿಗೆ ಇಂದು 60ನೇ ಹುಟ್ಟು ಹಬ್ಬದ ಸಂಭ್ರಮ. ಅಪ್ಪು ಇಲ್ಲದೇ ನಾನು ಹುಟ್ಟುಹಬ್ಬ ಆಚರಿಸೋದಿಲ್ಲ ಅಂತ ಅವರು ಹೇಳಿದರೂ, ಅವರ ಅಭಿಮಾನಿಗಳು, ಚಾನೆಲ್‌ನವರು ಅವರ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಯೇ ಸಿದ್ಧ ಅಂದಿದ್ದಾರೆ. ಇಡೀ ನಾಡಿನಲ್ಲಿ ಶಿವಣ್ಣನ ಜನ್ಮದಿನಾಚರಣೆ ನಡೆಯುತ್ತಿದೆ. ಶಿವಣ್ಣನ ಕೆಲವು ವಿಶಿಷ್ಟ ಗುಣಗಳು, ಅವರ ವಿಶೇಷತೆಗಳ ಬಗ್ಗೆ ನೋಡೋಣ

Happy Birthday to sandalwood hatric hero Shiva Rajkumar
Author
Bengaluru, First Published Jul 12, 2022, 10:18 AM IST | Last Updated Jul 12, 2022, 12:45 PM IST

'ಈ ವರ್ಷ ನಿಮಗೆ 60. ಬರ್ತ್‌ಡೇ ಸೆಲೆಬ್ರೇಶನ್ ಹೇಗಿರುತ್ತೆ?'

ಹೀಗೊಂದು ಪ್ರಶ್ನೆಯಲ್ಲಿ ಮಾಧ್ಯಮ(Media)ದವರು ಕೇಳಿದಾಗ ಶಿವಣ್ಣ ಒಂದು ಕ್ಷಣ ಮೌನವಾದರು. ಬಹುಶಃ ಅವರಿಗೆ ಅಪ್ಪು ನೆನಪು ಬಂದಿರಬೇಕು. ಆಮೇಲೆ, 'ಅದೆಲ್ಲ ಏನಿಲ್ಲ, ಲೈಫು(Life) ಕರ್ಕೊಂಡು ಹೋಗೋವರೆಗೂ ಬದುಕೋದಷ್ಟೇ ನಮಗೆ ಉಳಿದಿರೋದು..' ಅಂತ ಮಾರ್ಮಿಕವಾಗಿ ನುಡಿದು ಸುಮ್ಮನಾದರು. ಅಷ್ಟಕ್ಕೇ ಬಿಡದ ಮಾಧ್ಯಮದವರು, '60 ವರ್ಷದ ಜನ್ಮದಿನ ಅಂದರೆ ವಿಶೇಷ ಮಹತ್ವ ಇರುತ್ತೆ. ಅಪ್ಪು(Puneeth Rajkumar) ಇದ್ದಿದ್ದರೆ ನಿಮ್ಮನ್ನು ಸುಮ್ಮನಿರಲಿಕ್ಕೆ ಬಿಡ್ತಿರಲಿಲ್ಲ ಅಲ್ವಾ, ಈಗ ನಿಮ್ಮ ಫ್ಯಾನ್ಸ್‌(Fans)ಗೂ ನಿಮ್ಮ ಈ ನಿರ್ಧಾರ ಬೇಸರ ತರಬಹುದು' ಅಂದಿದ್ದರು. ಆಗ ಶಿವಣ್ಣ, 'ಅಪ್ಪು ಇದ್ದಿದ್ದರೆ ಮಾಡ್ತಿದ್ದ..' ಅಂತೇನೋ ಹೇಳಿ ಮತ್ತೆ ಮೌನಕ್ಕೆ ಶರಣಾದರು.

ಬೈರಾಗಿ (Bairagi) ಸಿನಿಮಾ ಶಿವಣ್ಣ ಜನ್ಮದಿನಕ್ಕೂ ಕೆಲವು ದಿನ ಹಿಂದೆ ಬಿಡುಗಡೆಯಾಯಿತು.ಇದಕ್ಕೂ ಮುನ್ನ ನಡೆದ ಮಾತುಕತೆಯಲ್ಲಿ ಶಿವಣ್ಣ ಹೀಗೆ ರಿಯಾಕ್ಟ್ ಮಾಡಿದ್ದು. 'ಈ ಸಿನಿಮಾವನ್ನು ಶಿವಣ್ಣ ಬರ್ತ್‌ಡೇಯಂದೇ ಬಿಡುಗಡೆ ಮಾಡಬಹುದಿತ್ತಲ್ವಾ?' ಅನ್ನೋ ಪ್ರಶ್ನೆಯನ್ನು ನಿರ್ಮಾಪಕರಿಗೆ ಕೇಳಿದಾಗ, ಇದು ಅವರ ಜನ್ಮದಿನಕ್ಕೂ ಮೊದಲೇ ನೀಡುವ ಅಡ್ವಾನ್ಸ್ಡ್ ಗಿಫ್ಟ್' ಅಂದರು ಕೃಷ್ಣ ಸಾರ್ಥಕ್.

ಶಿವಣ್ಣನ ಹುಟ್ಟುಹಬ್ಬಕ್ಕೆ 60 ಗಂಟೆಗಳ ನಾನ್‌ ಸ್ಟಾಪ್‌ ಪಿಚ್ಚರೋತ್ಸವ

ಇನ್ನೂ ಅಪ್ಪು ಅಗಲಿಕೆ ನೋವಿನಲ್ಲೇ ಇರುವ ಶಿವಣ್ಣ ತನ್ನ 60ನೇ ವರ್ಷದ ಬರ್ತ್ ಡೇ (Birthday)ಯೇ ಆಗಿದ್ರೂ ಅದ್ದೂರಿಯಾಗಿ ಆಚರಿಸಿಕೊಳ್ಳುವ ಮೂಡ್‌(Mood)ನಲ್ಲಿ ಇದ್ದ ಹಾಗಿಲ್ಲ. ಅವರು ನಿರ್ಲಿಪ್ತ ಪ್ರತಿಕ್ರಿಯೆಯನ್ನಷ್ಟೇ ತೋರಿ ಸುಮ್ಮನಾಗುತ್ತಿದ್ದಾರೆ. ಇದೀಗ ಅವರ ಜನ್ಮದಿನಕ್ಕೆ ಬಿಗ್‌ ಸರ್ಪ್ರೈಸ್‌ (Big surprise) ಎದುರು ನಿಂತಿದೆ. ಆದರೆ ಈಗ ಅವರ ಅಭಿಮಾನಿಗಳ ಜೊತೆಗೆ ಚಾನೆಲ್‌ಗಳೂ ಶಿವಣ್ಣನ ಬರ್ತ್‌ಡೇ ಆಚರಣೆಗೆ ಟೊಂಕಕಟ್ಟಿ ನಿಂತಿವೆ. ಅದರಲ್ಲೂ ಜೀ ಕನ್ನಡ ವಾಹಿನಿಯ 'ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್' (Dance Karnataka Dance) ಕಾರ್ಯಕ್ರಮಕ್ಕೆ ಶಿವಣ್ಣ ಜಡ್ಜ್(Judge). ಈ ವಾಹಿನಿಯವರು ಶಿವಣ್ಣನ ಬರ್ತ್‌ ಡೇ ಯನ್ನು ಶಿವಣ್ಣ ಬಿಗ್ಗೆಸ್ಟ್ ಮೂವಿ ಮ್ಯಾರಥಾಮ್(Biggest Movie Marathon) ಮೂಲಕ ಆಚರಿಸುತ್ತಿದೆ. ಕರುನಾಡ ಚಕ್ರವರ್ತಿಗೆ 60 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಅವರು ನಟಿಸಿರುವ ಸಿನಿಮಾಗಳನ್ನು ನಾನ್‌ಸ್ಟಾಪ್‌ 60(Nonstop 60) ಗಂಟೆಗಳ ಕಾಲ ಪ್ರಸಾರ ಮಾಡುತ್ತಿದೆ. ಭಾನುವಾರದಿಂದ ಸಿನಿಮಾ ಪ್ರದರ್ಶನ ಆರಂಭವಾಗಿ ಇಂದು ಮುಕ್ತಾಯವಾಗಲಿದೆ.

ಸಂಕೋಚ, ಧೈರ್ಯ ಒಟ್ಟಿಗೆ ಬೆರೆತಿರುವ, ಎಲ್ಲರೊಂದಿಗೆ ಶುದ್ಧ ಮನಸ್ಸಿಂದ ಬೆರೆಯುವ ಶಿವಣ್ಣ ಅವರ ವಿಶೇಷತೆಗಳು ಕೆಲವಿವೆ. 

ಕೂದಲು ಮುಟ್ಟಿದರೆ ಸಿಟ್ಟು
ಶಿವಣ್ಣ ಅವರಿಗೆ ಮೊದಲಿಂದಲೂ ಕೂದಲು ಅಂದರೆ ಪ್ರೀತಿ, ಈಗಲೂ ಅವರ ಹೇರ್ ಸ್ಟೈಲ್‌(Hairstyle) ನೋಡಿದರೆ ಆ ಪ್ರೀತಿ ಎದ್ದು ಕಾಣುತ್ತೆ. ಅವರಿಗೆ ಅವರ ತಲೆಗೂದಲಿಗೆ ಯಾರಾದ್ರೂ ಕೈ ಹಾಕಿದ್ರೆ ವಿಪರೀತ ಸಿಟ್ಟು ಬರುತ್ತೆ. ಅವರ ಹೇರ್‌ ಸ್ಟೈಲಿಸ್ಟ್ ಬಿಟ್ಟರೆ ಮನೆಯ ಕೆಲವು ಆತ್ಮೀಯರಷ್ಟೇ ಅವರ ಕೂದಲು ಮುಟ್ಟೋ ಧೈರ್ಯ ಮಾಡ್ತಿದ್ರು. ಆದರೆ ಕನ್ನಡ ಚಿತ್ರರಂಗದಲ್ಲಿ ಒಬ್ಬ ವ್ಯಕ್ತಿ ಮಾತ್ರ ತನ್ನ ಕೂದಲು ಮುಟ್ಟಿದರೆ ಶಿವಣ್ಣಂಗೆ ಒಂಥರಾ ಖುಷಿ ಆಗೋದು. ಆ ವ್ಯಕ್ತಿ ಮತ್ಯಾರೂ ಅಲ್ಲ, ನಮ್ಮ ಉಪ್ಪಿ ಅಂದ್ರೆ ಉಪೇಂದ್ರ(Upendra) ಅವರು. ಶಿವಣ್ಣ ಅವರು ಉಪೇಂದ್ರ ನಿರ್ದೇಶನದ ಓಂ(Om Movie)ನಲ್ಲಿ ಆಕ್ಟ್ (Act)ಮಾಡುವ ಸಂದರ್ಭ ಏಕಕಾಲಕ್ಕೆ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದರಂತೆ. ಬೆಳಗ್ಗಿಂತ ಮಧ್ಯಾಹ್ನದವರೆಗೂ ಓಂ, ಮಧ್ಯಾಹ್ನದಿಂದ ಸಂಜೆ ಏಳರವರೆಗೆ ಗಡಿಬಿಡಿ ಅಳಿಯ, ರಾತ್ರಿಯಿಂದ ಬೆಳಗಿನ ಜಾವ ನಾಲ್ಕವರೆಗೆ ಸಮರ ಚಿತ್ರದ ಶೂಟಿಂಗ್(Shooting). ವಾಪಾಸ್ ಬೆಳಗ್ಗೆ ಓಂ ಸೆಟ್‌ಗೆ ಬರುವಾಗ ನಿದ್ದೆ ಇಲ್ಲದೇ ಶಿವಣ್ಣ ಮನಸ್ಸಲ್ಲೆ ಒಂಥರಾ ಆಗಿರ್ತಿತ್ತಂತೆ. ಅಷ್ಟೊತ್ತಿಗೆ ಉಪ್ಪಿ ಬಂದು ಕೂದಲಲ್ಲಿ ಚೆನ್ನಾಗಿ ಕೈಯಾಡಿಸ್ತಿದ್ರು, ಆಮೇಲೆ ಆ ಕಾಸ್ಟ್ಯೂಮ್ ಹಾಕ್ಕೊಂಡ್ರೆ ಶಿವಣ್ಣನ ಮೈಯೊಳಗೆ ಓಂ ಚಿತ್ರದ ಸತ್ಯನ ಪ್ರವೇಶ ಆಗಿ ಬಿಡುತ್ತಿತ್ತು.

ಜು.12ಕ್ಕೆ ಸೆಂಚುರಿ ಸ್ಟಾರ್‌ ಅವರ 60ನೇ ಹುಟ್ಟು ಹಬ್ಬ

ಕೂಚಿಪುಡಿ ನೃತ್ಯ ಪ್ರವೀಣ
ಹೆಚ್ಚಿನವರಿಗೆ ತಿಳಿದಿರುವಂತೆ ಶಿವಣ್ಣ ಹುಟ್ಟಿ ಬೆಳೆದಿದ್ದು ಚೆನ್ನೈಯ (Chennai)ಲ್ಲಿ. ಓದಿದ್ದೂ ಅಲ್ಲೇ. ಪದವಿ ವ್ಯಾಸಂಗದ ಬಳಿಕೆ ಅವರು ತಂದೆಗೆ ಆಪ್ತರಾಗಿದ್ದ ಪ್ರಸಿದ್ಧ ನಿರ್ದೇಶಕ ಕೆ ಬಾಲಚಂದರ್(K Balachandhar) ಅವರ ಬಳಿ ತಮ್ಮ ಸಿನಿಮಾ ಆಸಕ್ತಿ ಬಗ್ಗೆ ಹೇಳಿಕೊಳ್ತಾರೆ. ಆಗ ಬಾಲಚಂದರ್ ಅವರಿಗೆ ಎರಡು ಸಲಹೆ ಕೊಡ್ತಾರೆ. ಮೊದಲನೆಯದು ಅಭಿನಯ ತರಗತಿಗೆ ಸೇರಿಕೊಳ್ಳೋದು, ಎರಡನೆಯದು ಡ್ಯಾನ್ಸ್‌ನಲ್ಲಿ ಪರಿಣತಿ ಪಡೆಯೋದು. ಅವರ ಮಾತನ್ನು ಶಿರಸಾ ಪಾಲಿಸಿದ ಶಿವಣ್ಣ ಅಭಿನಯ ತರಗತಿಗೆ ಸೇರಿಕೊಳ್ಳೋದರ ಜೊತೆಗೆ ಭಾರತೀಯ ನೆಲದ ಸಾಂಪ್ರದಾಯಿಕ ನೃತ್ಯ ತರಗತಿಗೆ ಸೇರಿಕೊಳ್ಳುತ್ತಾರೆ. ಕೂಚಿಪುಡಿಯಲ್ಲಿ ಬಹಳ ಬೇಗ ಪರಿಣತಿ ಪಡೆಯುತ್ತಾರೆ.

ನನ್ನ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ: ಶಿವರಾಜ್‌ ಕುಮಾರ್

ವಿನಯವೂ ಇದೆ, ಧೈರ್ಯವೂ ಇದೆ!
ಎಂಥಾ ಸನ್ನಿವೇಶದಲ್ಲೂ ವಿವೇಕದಿಂದ ವರ್ತಿಸುವುದು ಶಿವಣ್ಣನ ವಿಶಿಷ್ಟ ಗುಣ. ಎಷ್ಟೇ ಒತ್ತಡ ಇದ್ದರೂ ಅವರು ಲೀಲಾಜಾಲವಾಗಿ ನಿಭಾಯಿಸುತ್ತಾರೆ. ಸಾವಿರಾರು ಅಭಿಮಾನಿಗಳು ಕಾರನ್ನು ಮುತ್ತಿಕೊಂಡರೆ ಸಾಮಾನ್ಯ ವ್ಯಕ್ತಿಯಂತೆ ಕಾರಿನಿಂದಿಳಿದು ಅವರ ಜೊತೆಗೆ ಒಡನಾಡುತ್ತಾರೆ. ರಸ್ತೆಯಲ್ಲಿ ಹೋಗುವಾಗ ಪಕ್ಕದ ಕಾರಿನವರು ಮಾತನಾಡಿಸಿದರೂ ಸ್ನೇಹದಿಂದ ಮಾತಾಡುವ ಶಿವಣ್ಣ ಎಲ್ಲರ ಅಚ್ಚುಮೆಚ್ಚು. ಆದರೆ ಅಭಿಮಾನಿಗಳು ವಿವೇಕ ಮರೆತು ಕೂಗಾಡಿ ಅರಚಾಡಿದರೆ ಧೈರ್ಯದಿಂದ ಮಾತಾಡಿ ಅವರನ್ನು ನಿಯಂತ್ರಿಸೋದೂ ಶಿವಣ್ಣಂಗೆ ಗೊತ್ತು. ದೊಡ್ಡವರನ್ನು ಕಂಡರೆ ಬಹಳ ವಿನಯ. ಪುಟ್ಟ ಮಗುವಿನ ಜೊತೆಗೂ ಅವರದು ವಿನಯದ ನಡವಳಿಕೆ.

ಹೀಗೆ ಪಟ್ಟಿ ಮಾಡುತ್ತಾ ಹೋದರೆ ಶಿವಣ್ಣನ ವಿಶೇಷತೆಗಳು ಒಂದೊಂದಾಗಿ ಸಿಗುತ್ತಲೇ ಹೋಗುತ್ತವೆ. ಇಂದು ಅವರ ಜನ್ಮದಿನ. ಹ್ಯಾಪಿ ಬರ್ತ್ ಡೇ ಡಾ.ಶಿವರಾಜ್ ಕುಮಾರ್..

Latest Videos
Follow Us:
Download App:
  • android
  • ios