ಹ್ಯಾಟ್ರಿಕ್ ಹೀರೋಗೆ 60ನೇ ಸಂಭ್ರಮ. ಏನೆಲ್ಲಾ ವಿಶೇಷತೆಗಳಿದೆ?

ನಟ ಶಿವರಾಜ್‌ಕುಮಾರ್‌ ಅವರು ಇದೇ ಜು.12ಕ್ಕೆ ತಮ್ಮ 60ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಟನೆಯ ಹೊಸ ಚಿತ್ರಗಳು ಸೆಟ್ಟೇರುವ ಜತೆಗೆ ಈಗಾಗಲೇ ಸೆಟ್ಟೇರಿರುವ ಚಿತ್ರಗಳ ಪೋಸ್ಟರ್‌ ಬಿಡುಗಡೆಗೆ ಆಯಾ ಚಿತ್ರತಂಡಗಳು ತಯಾರಿ ಮಾಡಿಕೊಂಡಿವೆ. ಈ ಪೈಕಿ ಶಿವಣ್ಣ ಹೊಸದಾಗಿ ಒಪ್ಪಿಕೊಂಡಿರುವ ಚಿತ್ರ ಹಾಗೂ ಶ್ರೀನಿ ನಿರ್ದೇಶನದ ‘ಘೋಸ್ಟ್‌’ ಚಿತ್ರದ ಪೋಸ್ಟರ್‌ ಬಿಡುಗಡೆಯೂ ಸೇರಿದೆ. ಕೊಟ್ರೇಶ್‌ ನಿರ್ದೇಶನದ ಚಿತ್ರ ಜು.12ರಂದು ಸೆಂಚುರಿ ಸ್ಟಾರ್‌ ಅವರ ಹುಟ್ಟು ಹಬ್ಬದ ಪ್ರಯುಕ್ತ ಘೋಷಣೆ ಆಗುತ್ತಿದೆ. ಈ ಹಿಂದೆ ‘ವಜ್ರಕಾಯ’ ಹಾಗೂ ‘ಸನ್‌ ಆಫ್‌ ಬಂಗಾರದ ಮನುಷ್ಯ’ ಮುಂತಾದ ಚಿತ್ರಗಳಿಗೆ ಅಸೋಸಿಯೇಟ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿರುವ ಕೊಟ್ರೇಶ್‌, ಶಿವಣ್ಣ ನಟನೆಯ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ.

ಎಆರ್‌ಕೆ ಪ್ರೊಡಕ್ಷನ್‌ ಹಾಗೂ ರುಬಿನ್‌ ರಾಜ್‌ ಪ್ರೊಡಕ್ಷನ್‌ ಜತೆಗೂಡಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಮಾಸ್ತಿ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆಯುವ ಜತೆಗೆ ನಿರ್ದೇಶಕರ ಜತೆಗೆ ಸೇರಿ ಚಿತ್ರಕಥೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಚರಣ್‌ ರಾಜ್‌ ಸಂಗೀತ, ಸೋಹಿತ್‌ ನೀಲಮ್‌ ಕ್ಯಾಮೆರಾ ಚಿತ್ರಕ್ಕಿದೆ. ಚಿತ್ರದ ಹೆಸರು ಜು.12ರಂದು ಬಿಡುಗಡೆ ಆಗುತ್ತಿದೆ. ‘ಶಿವಣ್ಣ ನಟನೆಯ ಚಿತ್ರಗಳಿಗೆ ಅಸೋಸಿಯೇಟ್‌ ಡೈರೆಕ್ಟರ್‌ ಆಗಿ ಕೆಲಸ ಮಾಡಿದ್ದೇನೆ. ಈಗ ಅವರ ನಟನೆಯ ಚಿತ್ರವನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದೆ. ಈ ಚಿತ್ರ ಉತ್ತಮವಾಗಿ ಮೂಡಿಬರಲು ಸಾಕಷ್ಟುಶ್ರಮವಹಿಸುತ್ತೇನೆ. ಈಗಷ್ಟೆಚಿತ್ರೀಕರಣ ನಡೆಸುವ ಸ್ಥಳಗಳ ಆಯ್ಕೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರ ಆರಂಭವಾಗುತ್ತದೆ’ ಎನ್ನುತ್ತಾರೆ ಕೊಟ್ರೇಶ್‌.

ಘೋಸ್ಟ್‌ ಚಿತ್ರದ ಪೋಸ್ಟರ್‌ ಬಿಡುಗಡೆ

ಶ್ರೀನಿ ನಿರ್ದೇಶನ ಹಾಗೂ ಶಿವಣ್ಣ ನಾಯಕನಾಗಿ ನಟಿಸಲಿರುವ ‘ಘೋಸ್ಟ್‌’ ಚಿತ್ರದ ಹೊಸ ಪೋಸ್ಟರ್‌ ಅನ್ನು ನಟ ಸುದೀಪ್‌ಅವರು ಬಿಡುಗಡೆ ಮಾಡಲಿದ್ದಾರೆ. ಇದೂ ಕೂಡ ನಟ ಶಿವರಾಜ್‌ಕುಮಾರ್‌ ಅವರು ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡ ಮಾಡಿಕೊಂಡಿರುವ ವಿಶೇಷ ತರಯಾರಿ. ಸಂದೇಶ್‌ ನಾಗರಾಜ್‌ ನಿರ್ಮಾಣದ 29ನೇ ಚಿತ್ರ ಇದಾಗಿದ್ದು, ಚಿತ್ರದ ಪೋಸ್ಟರ್‌ ಹೇಗಿರುತ್ತದೆ ಎನ್ನುವ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಅರ್ಜುನ್‌ ಜನ್ಯಾ ಅವರು ಈ ಚಿತ್ರಕ್ಕೆ ಸಂಗೀತ ನೀಡಲಿದ್ದು, ಮಹೇಂದ್ರ ಸಿಂಹ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ. ಆಗಸ್ಟ್‌ ತಿಂಗಳ ಕೊನೆಯಿಂದ ಚಿತ್ರೀಕರಣ ಆರಂಭವಾಗಲಿದೆ.

ಎವರ್‌ಗ್ರೀನ್ ಹೀರೋಯಿನ್ ಸುಧಾರಾಣಿ ಲೈಫಲ್ಲಿ ಹೊಸ ಟ್ವಿಸ್ಟ್, ಫ್ಯಾನ್ಸ್ ಗಾಬರಿಯಾಗ್ಬೇಡಿ!

ನನ್ನ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ

"ನನ್ನ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ. ಚೆಕ್, ಪಾಸ್ ಪೋರ್ಟ್ ಎಲ್ಲದರಲ್ಲೂ ಎನ್.ಎಸ್.ಪುಟ್ಟಸ್ವಾಮಿ ಅಂತನೇ ಇದೆ" ಎಂದು ಶಿವಣ್ಣ ಹೇಳಿದ್ದಾರೆ. ಚೆನ್ನೈನಲ್ಲಿ ನನ್ನ ಸ್ನೇಹಿತರು ಪುಟ್ಟು ಪುಟ್ಟು ಅಂಥನೇ ಕರಿತಾರೆ. ಸಿನಿಮಾಗೆ ಬಂದ ನಂತರ ಅಪ್ಪಾಜಿ ಸ್ನೇಹಿತರು ತಿಪಟೂರಿನ ರಾಮಸ್ವಾಮಿ ಅವರು ರಾಜ್ ಕಪೂರ್ ಫ್ಯಾಮಿಲಿ ರೀತಿ ಶಿವರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅಂಥ ಹೆಸರು ಬದಲಾಯಿಸಿದರಯ ಎಂದು ಶಿವಣ್ನ ಹೇಳಿದ್ದಾರೆ. 

ಶಿವಣ್ಣ, ಡಾಲಿ ಕಾಂಬಿನೇಶನ್‌ನ ಬೈರಾಗಿ: ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್ ಅಭಿನಯಿಸಿರುವ ಭೈರಾಗಿ ಸಿನಿಮಾ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಪ್ರಚಾರದಲ್ಲಿ ಶಿವಣ್ಣ, ಪೃಥ್ವಿ ಆಂಬರ್ ಮತ್ತು ಡಾಲಿ ಧನಂಜಯ್ ತೊಡಗಿಸಿಕೊಂಡಿದ್ದಾರೆ. ಬೈರಾಗಿ ಚಿತ್ರದ ಪ್ರಮೋಷನ್‌ಗಾಗಿ ಶಿವರಾಜ್‌ ವಿವಿಧ ಚಿತ್ರಮಂದಿರಗಳಿಗೆ ಶಿವಣ್ಣ ಭೇಟಿ ನೀಡುತ್ತಿದ್ದಾರೆ. 

Bairagi film review: ಶಿವಣ್ಣ ಅಬ್ಬರ, ಬೈರಾಗಿ ಭಯಂಕರ

ನಟರಾದ ಶಿವರಾಜ್‌ಕುಮಾರ್‌ ಹಾಗೂ ಡಾಲಿ ಧನಂಜಯ್‌ ಕಾಂಬಿನೇಶನ್‌ನ ‘ಬೈರಾಗಿ’ ಸಿನಿಮಾ ಜು.1ಕ್ಕೆ ಬಿಡುಗಡೆಯಾಗಿದೆ. ವಿಜಯ್‌ ಮಿಲ್ಟನ್‌ ನಿರ್ದೇಶನದ, ಕೃಷ್ಣ ಸಾರ್ಥಕ್‌ ನಿರ್ದೇಶನದ ಸಿನಿಮಾ ಇದಾಗಿದೆ. ‘ಭಜರಂಗಿ 2’ ಚಿತ್ರದ ನಂತರ ಶಿವಣ್ಣ ಮತ್ತೆ ತೆರೆ ಮೇಲೆ ‘ಬೈರಾಗಿ’ ಮೂಲಕ ಪ್ರೇಕ್ಷಕರ ಮುಂದೆ ದರ್ಶನ ಕೊಡುತ್ತಿದ್ದಾರೆ. ಪಕ್ಕಾ ಆ್ಯಕ್ಷನ್‌ ಸಿನಿಮಾ ಇದಾಗಿದ್ದು, ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಚಿತ್ರತಂಡ ಬಿಡುಗಡೆ ಮಾಡಿದೆ.