Shiva Rajkumar Real Name: ನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ತಮ್ಮ ನಿಜವಾದ ಹೆಸರಿನ ಬಗ್ಗೆ ಮಾತನಾಡಿದ್ದಾರೆ.
ಮೈಸೂರು (ಜು. 06): ಕನ್ನಡ ಚಿತ್ರರಂಗದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar)ತಮ್ಮ ನಿಜವಾದ ಹೆಸರಿನ ಬಗ್ಗೆ ಮಾತನಾಡಿದ್ದಾರೆ. "ನನ್ನ ನಿಜವಾದ ಹೆಸರು ನಾಗರಾಜು ಶಿವ ಪುಟ್ಟಸ್ವಾಮಿ. ಚೆಕ್, ಪಾಸ್ ಪೋರ್ಟ್ ಎಲ್ಲದರಲ್ಲೂ ಎನ್.ಎಸ್.ಪುಟ್ಟಸ್ವಾಮಿ ಅಂತನೇ ಇದೆ" ಎಂದು ಶಿವಣ್ಣ ಹೇಳಿದ್ದಾರೆ. ಚೆನ್ನೈನಲ್ಲಿ ನನ್ನ ಸ್ನೇಹಿತರು ಪುಟ್ಟು ಪುಟ್ಟು ಅಂಥನೇ ಕರಿತಾರೆ. ಸಿನಿಮಾಗೆ ಬಂದ ನಂತರ ಅಪ್ಪಾಜಿ ಸ್ನೇಹಿತರು ತಿಪಟೂರಿನ ರಾಮಸ್ವಾಮಿ ಅವರು ರಾಜ್ ಕಪೂರ್ ಫ್ಯಾಮಿಲಿ ರೀತಿ ಶಿವರಾಜಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅಂಥ ಹೆಸರು ಬದಲಾಯಿಸಿದರಯ ಎಂದು ಶಿವಣ್ನ ಹೇಳಿದ್ದಾರೆ.
ಶಿವಣ್ಣ, ಡಾಲಿ ಕಾಂಬಿನೇಶನ್‌ನ ಬೈರಾಗಿ ತೆರೆಗೆ: ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಅಭಿನಯಿಸಿರುವ ಭೈರಾಗಿ ಸಿನಿಮಾ ಬಿಡುಗಡೆಯಾಗಿ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾ ಪ್ರಚಾರದಲ್ಲಿ ಶಿವಣ್ಣ, ಪೃಥ್ವಿ ಆಂಬರ್ ಮತ್ತು ಡಾಲಿ ಧನಂಜಯ್ ತೊಡಗಿಸಿಕೊಂಡಿದ್ದಾರೆ. ಬೈರಾಗಿ ಚಿತ್ರದ ಪ್ರಮೋಷನ್‌ಗಾಗಿ ಶಿವರಾಜ್ ವಿವಿಧ ಚಿತ್ರಮಂದಿರಗಳಿಗೆ ಶಿವಣ್ಣ ಭೇಟಿ ನೀಡುತ್ತಿದ್ದಾರೆ.
ನಟರಾದ ಶಿವರಾಜ್‌ಕುಮಾರ್ ಹಾಗೂ ಡಾಲಿ ಧನಂಜಯ್ ಕಾಂಬಿನೇಶನ್‌ನ ‘ಬೈರಾಗಿ’ ಸಿನಿಮಾ ಜು.1ಕ್ಕೆ ಬಿಡುಗಡೆಯಾಗಿದೆ. ವಿಜಯ್ ಮಿಲ್ಟನ್ ನಿರ್ದೇಶನದ, ಕೃಷ್ಣ ಸಾರ್ಥಕ್ ನಿರ್ದೇಶನದ ಸಿನಿಮಾ ಇದಾಗಿದೆ. ‘ಭಜರಂಗಿ 2’ ಚಿತ್ರದ ನಂತರ ಶಿವಣ್ಣ ಮತ್ತೆ ತೆರೆ ಮೇಲೆ ‘ಬೈರಾಗಿ’ ಮೂಲಕ ಪ್ರೇಕ್ಷಕರ ಮುಂದೆ ದರ್ಶನ ಕೊಡುತ್ತಿದ್ದಾರೆ. ಪಕ್ಕಾ ಆ್ಯಕ್ಷನ್ ಸಿನಿಮಾ ಇದಾಗಿದ್ದು, ಚಿತ್ರವನ್ನು ದೊಡ್ಡ ಮಟ್ಟದಲ್ಲಿ ಚಿತ್ರತಂಡ ಬಿಡುಗಡೆ ಮಾಡಿದೆ.
ಇದನ್ನೂ ಓದಿ:ಅಪ್ಪು ಅಂತ ಹೇಳಿ ದೂರ ತಳ್ಳಬೇಡಿ: ಭಾವುಕರಾದ ಶಿವಣ್ಣ
ಬೈರಾಗಿಯಲ್ಲಿ ನಾನು ಮಾತ್ರ ಹೀರೊ ಅಲ್ಲ: ಇನ್ನು ಇತ್ತೀಚೆಗೆ ಚಾಮಾರಾಜನಗರದ ಕೊಳ್ಳೇಗಾಲದಲ್ಲಿ ಸಿನಿಮಾ ಬಗ್ಗೆ ಮಾತಾನಾಡಿದ್ದ ಶಿವಣ್ಣ "ಬೈರಾಗಿ ಸಿನಿಮಾದಲ್ಲಿ ಎಲ್ಲರ ಪಾತ್ರವೂ ಚೆನ್ನಾಗಿದೆ, ಸಿನಿಮಾ ಉತ್ತಮ ರೀತಿ ಮೂಡಿ ಬಂದಿದ್ದು, ಅಭಿಮಾನಿಗಳು ಸಿನಿಮಾ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕು ಎಂದು ಚಿತ್ರನಟ ಶಿವರಾಜ್ ಕುಮಾರ್ ಹೇಳಿದರು.
ಅವರು ಕೊಳ್ಳೇಗಾಲದ ಶ್ರೀನಿವಾಸ ಚಿತ್ರಮಂದಿರದಲ್ಲಿ ನೂತನ ಸಿನಿಮಾ ಬೈರಾಗಿ ಪ್ರದರ್ಶನಗೊಳ್ಳುತ್ತಿರುವ ಹಿನ್ನೆಲೆ ಭೇಟಿ ನೀಡಿ ಮಾತನಾಡಿ, ನಾನೊಬ್ಬ ಮಾತ್ರ ಇಲ್ಲಿ ಹೀರೊ ಅಲ್ಲ, ಸಿನಿಮಾದಲ್ಲಿ ಧನಂಜಯ, ಶಶಿಕುಮಾರ್ ಸೇರಿದಂತೆ ಎಲ್ಲರ ನಟನೆಯೂ ಉತ್ತಮವಾಗಿ ಮೂಡಿ ಬಂದಿದೆ, ಅವರು ಸಹಾ ಸಿನಿಮಾದ ಹೀರೊಗಳು ಎಂದರು.
ಅಪ್ಪು ನನ್ನ ತಮ್ಮ, ನನ್ನ ರಕ್ತ, ಅವನು ನನ್ನ ಜೀವ, ಅವನು ಹುಟ್ಟಿದಾಗ ನನಗೆ 13ವರ್ಷ, ಅವನನ್ನು ನಾನು ಎದೆ ಮೇಲಿಟ್ಟುಕೊಂಡು ಬೆಳೆಸಿದ್ದೆ, ಅಭಿಮಾನಿಗಳು ಸಹಾ ಅಪುತ್ರ್ಪವನ್ನು ಮನಸ್ಸಿನಲ್ಲಿ ಇರಿಸಿಕೊಂಡು ಸ್ಮರಿಸಿ ಎಂದು ಇದೆ ವೇಳೆ ಕಿವಿಮಾತು ಹೇಳಿದರು.
